ತುಮಕೂರು ಲೈವ್

ಅನೈತಿಕ ಸಂಬಂಧ ಯುವಕನ ಬರ್ಬರ ಕೊಲೆ

ತುಮಕೂರು:

ಕುಡಿದ ಅಮಲಿನಲ್ಲಿ ಅನೈತಿಕ ಸಂಬಂಧ ವಿಚಾರ ಬಹಿರಂಗಗೊಂಡು ಸ್ನೇಹಿತರ ನಡುವೆ ಜಗಳವಾಗಿ ಯುವಕನ ಹೊಟ್ಟೆಗೆ ಬರ್ಬರವಾಗಿ ಚಾಕುವಿನಿಂದ ತಿವಿದು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಮಲ್ಲೇಶಪುರ ಗ್ರಾಮದಲ್ಲಿ ಸೋಮವಾರ ತಡ ರಾತ್ರಿ ನಡೆದಿದೆ.

ಕೊಲೆಯಾದ ಗಿರೀಶ

ಮಲ್ಲೇಶಪುರ ಗ್ರಾಮದ ಲೇಟ್ ಹನುಮಂತರಾಯಪ್ಪನ ಮಗ ಗಿರೀಶ್(26) ಕೊಲೆಯಾದ ಯುವಕ. ಅದೇ ಗ್ರಾಮದ ನಟೇಶ ಕೊಲೆ ಮಾಡಿರುವ ಆರೋಪಿ.

ಬೆಂಗಳೂರು ನಗರದಲ್ಲಿ ಗಿರೀಶ ಕಾರು ಚಾಲಕನಾಗಿದ್ದ. ಕೊರೊನಾ ಲಾಕ್ ಡೌನ್ ನಿಂದ ಕಳೆದ 20ದಿನದ ಹಿಂದೆ ಸ್ವಗ್ರಾಮ ಮಲ್ಲೇಶಪುರಕ್ಕೆ ಬಂದಿದ್ದ.

ಕೊಲೆಗೈದ ನಟೇಶ
ಕೊಲೆ ನಡೆದ ಸ್ಥಳ

ಸೋಮವಾರ ತಡರಾತ್ರಿ ಮಲ್ಲೇಶಪುರದ ನಂಜುಂಡಪ್ಪನ‌ ಮಗ ನಟೇಶ ಮತ್ತು ಗಿರೀಶ್ ನಡುವೆ ಕುಡಿದ ಅಮಲಿನಲ್ಲಿ ಅನೈತಿಕ ಸಂಬಂದದ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಗಿರೀಶನ ಕೊಲೆಯಲ್ಲಿ ಘಟನೆ ಅಂತ್ಯ ಕಂಡಿದೆ.

ಗಿರೀಶ,ನಟೇಶನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಅದನ್ನು ಕುಡಿದ ಮತ್ತಲ್ಲಿ ನಟೇಶನಿಗೆ ಹೇಳಿದ್ದರಿಂದ ಆಕ್ರೋಶಗೊಂಡ ಆತ ಚಾಕುವಿನಿಂದ ಗಿರೀಶನ ದೇಹಕ್ಕೆ 9 ಕಡೆಗಳಲ್ಲಿ ಬರ್ಬರವಾಗಿ ಚುಚ್ಚಿ‌ ಕೊಲೆ ಮಾಡಿದ್ದಾನೆ.

ಕೊಲೆ ಆರೋಪಿ ತಲೆ ಮರೆಸಿಕೊಂಡಿದ್ದು, ಪೊಲೀಸರು ಪತ್ತೆ ಕಾರ್ಯ ಕೈಗೊಂಡಿದ್ದಾರೆ.

ತುಮಕೂರು ಎಸ್ಪಿ ಡಾ.ಕೆ.ವಂಶಿಕೃಷ್ಣ, ಮಧುಗಿರಿ ಡಿವೈಎಸ್ಪಿ ಎಂ.ಪ್ರವೀಣ್, ಕೊರಟಗೆರೆ ಸಿಪಿಐ ಎಫ್.ಕೆ.ನಧಾಪ್, ಪಿಎಸೈ ಎಚ್.ಮುತ್ತುರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Comment here