ಜಸ್ಟ್ ನ್ಯೂಸ್

ಆಟೋ ಚಾಲಕರಿಗೆ ಪಡಿತರ ಕಿಟ್ ವಿತರಣೆ

ಪಾವಗಡ: ಪಟ್ಟಣದ ಶಿರಡಿ ಸಾಯಿಬಾಬ ದೇಗುಲದ ಬಳಿ ಶುಕ್ರವಾರ 101 ಆಟೋ ಚಾಲಕರ ಕುಟುಂಬಗಳಿಗೆ ಕೆ.ಎನ್.ಆರ್ ಹಾಗೂ ಆರ್.ಆರ್ ಅಭಿಮಾನಿ ಬಳಗದ ವತಿಯಿಂದ ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸೀನಪ್ಪ ಪಡಿತರ ಹಾಗೂ ತರಕಾರಿ ವಿತರಿಸಿದರು.

https://youtu.be/rinhbXOWQNs

ಕೆ.ಎನ್.ಆರ್ ಅಭಿಮಾನಿ ಬಳಗದ ವತಿಯಿಂದ ತಾಲ್ಲೂಕಿನಾದ್ಯಂತ ಬಡ ಕುಟುಂಬಗಳಿಗೆ ಪಡಿತರ, ಮಾಸ್ಕ್ ವಿತರಿಸಲಾಗಿದೆ. ಮಧುಗಿರಿಯಲ್ಲಿ 1 ಸಾವಿರ ಚಾಲಕರ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಲಾಗಿತ್ತು ಇದನ್ನು ತಿಳಿದ ಕೆಲ ಆಟೋ ಚಾಲಕರು ರಾಜೇಂದ್ರ ಅವರ ಬಳಿ ತಮ್ಮ ಕಷ್ಟ ಹಂಚಿಕೊಂಡಿದ್ದರು. ಹೀಗಾಗಿ ಆಟೋ ಚಾಲಕರಿಗೆ ಪಡಿತರ ವಿತರಿಸುವ ಕಾರ್ಯಕ್ಕೆ ಚಾಲನೆ ನಿಡಲಾಯಿತು ಎಂದು ಸೀನಪ್ಪ ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಔಷಧಿಗಳು ಸಿಗದೆ ಜನತೆ ಸಮಸ್ಯೆ ಅನುಭವಿಸುತ್ತಿದ್ದಾರೆ. ವಾಹನಗಳ ಮುಖಾಂತರ ಅಗತ್ಯ ಇರುವವರಿಗೆ ಔಷಧಿ ವಿತರಿಸುವ ವ್ಯವಸ್ಥೆ ಮಾಡಬೇಕಿದೆ ಎಂದರು.

ಸಬ್ ಇನ್ ಸ್ಪೆಕ್ಟರ್ ನಾಗರಾಜು, ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿ ಅಧ್ಯಕ್ಷ ಸೀತರಾಮು, ಡಿಸಿಸಿ ಬ್ಯಾಂಕ್ ನಿರ್ದೇಶಕ ತಾಳೆಮರದಹಳ್ಳಿ ನರಸಿಂಹಯ್ಯ, ಸಾಯಿಬಾಬ ದೇಗುಲ ಸಮಿತಿ ಗೌರವ ಅಧ್ಯಕ್ಷ ಎನ್.ಕೆ. ನಾಗರಾಜು, ಉಪಾಧ್ಯಕ್ಷ ವಿಶ್ವ ಮೋಹನ ಗುಪ್ತ, ಕಾರ್ಯದರ್ಶಿ ಬಾಲಾಜಿ, ನಿರ್ದೇಶಕ ಯರ್ರಿಸ್ವಾಮಿ, ಕಾವಲಗೆರೆ ರಾಮಾಂಜಿ ಇದ್ದರು.

Comment here