ಕವನ

ಇದ್ದುದೇ ಗೊತ್ತಾಗುತ್ತಿರಲಿಲ್ಲ

ಕಿಡ್ನಿ

ಇದ್ದುದೇ ಗೊತ್ತಾಗುತ್ತಿರಲಿಲ್ಲ
ಹೃದಯದಂತೆ ಬಡಿತವಿಲ್ಲ
ಶ್ವಾಸಕೋಷದಂತೆ ಉಸಿರಾಟವಿಲ್ಲ
ಯಾವುದೇ ತರದ ನೋವಿಲ್ಲ
ಎಲ್ಲೊ ಅವಿತು ತಣ್ಣಗೆ, ನುಣ್ಣಗೆ
ರಕ್ತವನ್ನು ಸೋಸಿ ಸೋಸಿ ಬಸಿಯುತ್ತಿದ್ದ
ನೀನು
ಹೀಗೆ ಏಕಾ ಏಕೀ ಸೋತು ಸುಣ್ಣವಾಗಿ
ವಾರಕ್ಕೆ ಮೂರು ಬಾರಿ

ನಿನ್ನ ಕೆಲಸವ ಮೆಷಿನ್ ಮಾಡಿ
ಇರೋ ಬರೋ ಲವಣಗಳೆಲ್ಲ
ಸೋರಿ ಹೋಗಿ
ಬಳಿಚಿಕೊಂಡು
ಆ ದೇವರ ಮೇಲೆ ಹೂ ತಪ್ಪಿದರೂ
ಡಯಾಲಿಸಿಸ್ ತಪ್ಪದಂತೆ ಇದ್ದರೂ
ಬಾಯಿಗೆ ರುಚಿ ಇಲ್ಲ
ಉಪ್ಪಿಲ್ಲ,ಹಣ್ಣಿಲ್ಲ
ಬರೇ ಒಣ ರೊಟ್ಟಿ

ಡಯಿಲಿಸಿಸ್ ದೋಸ್ತಿಗಳು
ಹೇಳುವ ಟಿಪ್ಸ್ಗಳು
ಮನೆಯವರ ಮೆದುಳು ಡಯಾಲಿಸಿಸ್ ಆಗಿ
ಇದಕ್ಕೆ ಕೂನೆ?

ಕಿಡ್ನಿ ಕಸಿ,ರಿಜೆಕ್ಷನ್,ಬಯೋ ಕಿಡ್ನಿ
ಎಲ್ಲಾ ಆ ದೇವರು ಕೊಟ್ಟ ಕಿಡ್ನಿಯ ಸಮವೇ??

ಮೆದುಳಿಗಿಂತ ಕಿಡ್ನಿ ಮೇಲು
ಎಂಬ ಹೊಸ ಗಾದೆ
ಓ ನನ್ನ ಕಿಡ್ನಿಯೇ ನೀ ಸೋಲದಿರು 🙏
ಎಂದು ಬೇಡಿ ಕೊಂಡು
ಹೃದಯವೇ❤️ ನೀ ಬೇಕಾದರೆ ಸೋಲು
ಎಂದು ಹೇಳೀ
ಸ್ಟಂಟಾಗೀ ಕಿಡ್ನಿಯೇ ನಮಂ

ಡಾ ರಜನಿ
(ಅಮ್ಮನ ಡಯಾಲಿಸಿಸ್ ಕಾಯುವಾಗ ಬರೆದದ್ದು)

Comment here