ಜನಮನ

ಇಬ್ಬರು ಹೆಣ್ಣು ಮಕ್ಕಳ ಪ್ರಾಣ ಉಳಿಸಿದ ಹೊನ್ನವಳ್ಳಿಯ ಜಿಲಾನಿ…

ಅಲ್ಲಾಬಕಾಷ್ ಎ


ಕಳೆದ ವಾರ ತಿಪಟೂರು ತಾಲ್ಲೂಕು ಹೊನ್ನವಳ್ಳಿ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಗೊಂಡು ಮನೆಯಲ್ಲಿದ್ದ ತಾಯಿ,ಇಬ್ಬರು ಹೆಣ್ಣು ಮಕ್ಕಳು ಬೆಂಕಿಯ ಕೆನ್ನಾಲಿಗೆ ಸಿಕ್ಕಿ ಹಾಕಿಕೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸ ಬೇಕಾದರೆ ಅದೇ ಗ್ರಾಮದ 19ವರ್ಷದ ಮುಸ್ಲಿಂ ಯುವಕ ಜಿಲಾನಿ ತನ್ನ ಜೀವವನ್ನು ಲೆಕ್ಕಿಸದೇ ಆ ಹಿಂದು ಕುಟುಂಬದ ಪ್ರಾಣ ರಕ್ಷಣೆಗೆ ಧಾವಿಸಿರುವುದು ಕೋಮುಸಾಮರಸ್ಯಕ್ಕೆ ಜೀವಂತ ಸಾಕ್ಷಿಯಾಗಿದೆ‌.

ದೇಶದಲ್ಲಿ ಧರ್ಮ ಧರ್ಮಗಳ ಮಧ್ಯೆ ಬೆಂಕಿ ಹಚ್ಚಿ ಪರಸ್ಪರ ಒಬ್ಬರನೊಬ್ಬರು ದ್ವೇಷೀಸುತ್ತಿರುವ ಇಂತಹ ಸಂದರ್ಭದಲ್ಲಿ ಜಿಲಾನಿ‌ ಎಂಬ ಯುವಕನ ಸಾಹಸ ನನಗೆ ನಿಜ ಜೀವನದ ಹಿರೋ ಆಗಿ ಕಂಡನು ಎನ್ನುತ್ತಾರೆ ಕಾಂಗ್ರೆಸ್ ಮುಖಂಡ ಶಶಿಧರ್.

ಕೋರೋನಾ ಕಾರಣದಿಂದ ಬೆಂಗಳೂರಿನಿಂದ ತಮ್ಮ‌ಸ್ವಂತ ಗ್ರಾಮಕ್ಕೆ ಬಂದು ಆಗ ತಾನೇ ಬದುಕು‌ ಕಟ್ಟು ಕೊಳ್ಳುತ್ತಿದ್ದ ಹಿಂದು ಕುಟುಂಬ‌ಕ್ಕೆ ಸಿಲಿಂಡರ್ ಸ್ಫೋಟ ಬರಸಿಡಿಲು ಬಡಿದ್ದಂತಾಗಿದೆ .ನಾನು ಗ್ರಾಮಕ್ಕೆ ಭೇಟಿ ಕೊಟ್ಟು ಆ ಕುಟುಂಬಕ್ಕೆ ಧನ ಸಹಾಯ ಮಾಡಿ ಬಂದೆ.ಅಂದಿನ ಸನ್ನಿವೇಶವನ್ನು ಆ ಗ್ರಾಮಸ್ಥರು ನನಗೆ ವಿವರಿಸಿದರು.

ಸಿಲಿಂಡರ್ ಸ್ಫೋಟವಾದಾಗ ಆ ಮನೆಯಲ್ಲಿ ತಾಯಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಬೆಂಕಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು ತಾಯಿ ಪ್ರಾಣಾಪಾಯದಿಂದ ಪಾರಾಗಿ ಬಂದರು ,ಹೆಣ್ಣು ಮಕ್ಕಳು ಇನ್ನೇನು ಎಲ್ಲಾ ಮುಗಿದೇ ಹೋಯಿತು ಎನ್ನುವಷ್ಟರಲ್ಲಿ ಅದೇ ಗ್ರಾಮದ ಯುವಕ ಜಿಲಾನಿಎಂಬ ಯುವಕ ಸಿನಿಮಿಯ ರೀತಿಯಲ್ಲಿ ಮನೆಯೊಳಗೆ ಹೋಗಿ ಆ ಹೆಣ್ಣು ಮಕ್ಕಳನ್ನು ಕಾಪಾಡಿದ್ದಾನೆ ಎಂದರು.

ಅದೃಷ್ಟವಶಾತ್ ಸಣ್ಣ ಪುಟ್ಟ ಗಾಯಗಳೊಂದಿಗೆ ಸಾವಿನ ದವಡೆಯಿಂದ ಹೆಣ್ಣು‌ಮಕ್ಕಳು ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ‌ಪಡೆಯುತ್ತಿದ್ದಾರೆ ಎಂದರು.ಜೀವದ ಹಂಗುತೊರೆದು ಸಾಹಸ ಪಟ್ಟಿರುವ ಜಿಲಾನಿಯ ಕಾರ್ಯ ಪ್ರಶಂಸೆಯ ವಿಷಯ.ಹಾಗೂ
ಇಂತಹ ಕಾರ್ಯಕ್ಕೆ ನನ್ನ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಧಯವೇ ಧರ್ಮದ ಮೂಲವಯ್ಯ …..ಎಂದು 12ನೇಶತಮಾನದಲ್ಲಿ‌ ಜಗಜ್ಯೋತಿ ಬಸವಣ್ಣನವರ ವಚನ ಈ ಸನ್ನಿವೇಶದಲ್ಲಿ ನೆನಪಿಗೆ ಬರುತ್ತದೆ.
ದಯವಿಲ್ಲದ ಧರ್ಮವೆದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯ,
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ.
-ಬಸವಣ್ಣ

ಜಿಲಾನಿ ಕೆಲಸಕ್ಕೆ ಗ್ರಾಮ ಮಾತ್ರವಲ್ಲದೇ ತಾಲ್ಲೂಕಿನಲ್ಲಿ ಮೆಚ್ಚುಗೆಯ ಮಳೆ ಸುರಿಸಿದೆ. ಜಿಲಾನಿ ಈಗ ಕೋಮಸಾಮರಸ್ಯದ ಹೀರೋ ಅನಿಸಿದ್ದಾರೆ.

Comment here