ತುಮಕೂರು ಲೈವ್

ಇಲಾಖೆಗಳ ವಿಲೀನಕ್ಕೆ ಚಿಂತನೆ:ಕಾರಜೋಳ

ಪಾವಗಡ: ಸಣ್ಣಪುಟ್ಟ ಇಲಾಖೆಗಳನ್ನು ವಿಲೀನಗೊಳಿಸಬೇಕೆಂದು ಚಿಂತಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಕಾರಜೋಳ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ತಿಳಿಸಿದರು.

ಕೆಲವು ಇಲಾಖೆಗಳಲ್ಲಿ ನೌಕರರು ಇದ್ದರೆ ಕೆಲಸವಿಲ್ಲ, ಕೆಲಸವಿರುವ ಕಡೆ ನೌಕರರಿಲ್ಲ ಆದರೂ ಸರ್ಕಾರ ಸುಮಾರು 85 ಸಾವಿರ ಕೋಟಿ ರೂ.ಗಳನ್ನು ವೇತನ/ವ್ಯವಸ್ಥೆ ನಿರ್ವಹಣೆಗೆ ಖರ್ಚು ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಸೋಷಿಯಲ್ ಸೆಕ್ಯುರಿಟಿಯಲ್ಲಿ ಅಷ್ಟೆ ಹಣ ನಾವು ನೀಡುತ್ತಿದ್ದೇವೆ. ತಾಲೂಕು ಮಟ್ಟದಲ್ಲಿರುವ ಸಣ್ಣ-ಪುಟ್ಟ ಇಲಾಖೆಗಳನ್ನು ಜಿಲ್ಲಾ/ರಾಜ್ಯ ಮಟ್ಟದಲ್ಲಿ ಮಾತ್ರ ತರಬೇಕೆ ಸಣ್ಣಪುಟ್ಟ 2-3 ಇಲಾಖೆಗಳಿಗೆ ವಿಲೀನಗೊಳಿಸಿ ಒಬ್ಬ ಅಧಿಕಾರಿಯನ್ನು ನೇಮಕ ಮಾಡಲು ಚಿಂತಿಸಬೇಕೆ ಎಂಬುದರ ಬಗ್ಗೆ ಆಲೋಚಿಸಲಾಗುತ್ತಿದೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಣೆ ಮಾಡಲು ಕಾಲಕಾಲಕ್ಕೆ ಸಮಿತಿಗಳನ್ನು ನೇಮಕ ಮಾಡಿ, ಅವುಗಳ ಶಿಫಾರಸ್ಸಿನಂತೆ ಕೆಲವೊಂದು ಇದು 3ನೇ ಸಮಿತಿ, ನಾವು 3ನೇ ಸಮಿತಿ, ನಾವು ಯಾವ ಇಲಾಖೆಯಲ್ಲಿ ಕಡಿಮೆ ಮಾಡಬೇಕು. ಎಲ್ಲಿ ಹೆಚ್ಚಿಗೆ ಮಾಡಬೇಕು, ಬೇರೆಕಡೆಗೆ ಸ್ಥಳಾಂತರ ಮಾಡಬೇಕೇ ಎಂಬುದರ ಬಗ್ಗೆ ಸಮಿತಿ ಶಿಫಾರಸ್ಸು ಮಾಡಲಾಗಿದೆ. ಇಲಾಖೆಗಳ ವಿಲೀನವು ಸಚಿವ ಸಂಪುಟದ ಪಾತ್ರದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಸಚಿವರು ತಿಳಿಸಿದರು.

ಸಂಸದರಾದ ನಾರಾಯಣಸ್ವಾಮಿ, ವಿಧಾನ ಪರಿಷತ್ ಶಾಸಕ ಡಾ. ವೈ.ಎ ನಾರಾಯಣಸ್ವಾಮಿ, ಮಾಜಿ ಸಚಿವ ಹಾಗೂ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕ ಸೋಮ ನಾಯಕ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಹೆಚ್.ವಿ ವೆಂಕಟೇಶ್, ಚನ್ನಮಲ್ಲಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ಸೊಗಡು ವೆಂಕಟೇಶ್, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಡಾ. ಕೋನವಂಶಿಕೃಷ್ಣ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಹೆಚ್.ಎಸ್ ಪ್ರೇಮನಾಥ್ ಸೇರಿದಂತೆ ಮತ್ತಿತರು ಹಾಜರಿದ್ದರು.

Comment here