ತುಮಕೂರು ಲೈವ್

ಇಲ್ಲಿದೆ ವೈಕುಂಠದ ಹೆಬ್ಬಾಗಿಲು: ಇದು ತುಮಕೂರಿನ ಹೆಮ್ಮೆ

ತುಮಕೂರು: ತುಮಕೂರಿನ ಬಟವಾಡಿ ಮಹಾಲಕ್ಷ್ಮೀ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಸೋಮವಾರ ವೈಕುಂಠ ಏಕಾದಶಿ

ವಿಜೃಂಭಣೆಯಿಂದ ನಡೆಯಲಿದೆ. ಇದಕ್ಕಾಗಿ ದೇವಸ್ಥಾನ ಸರ್ವಾಂಲಕೃತವಾಗಿ ಕಂಗೊಳಿಸುತ್ತಿದೆ.

ವೆಂಕಟೇಶ್ವರ ದೇವಸ್ಥಾನ ತುಮಕೂರು ನಗರದ ಹೆಮ್ಮೆ. ಯಾರೇ ತುಮಕೂರು ನಗರಕ್ಕೆ ಬರಲಿ ಒಮ್ಮೆ ವೆಂಕಟೇಶ್ವರ ದೇವಸ್ಥಾನಕ್ಕೆ ಬಾರದೇ ಹೋಗಲಾರರು. ಕಲ್ಲುಗಳಿಂದ ಕಟ್ಟಿರುವ ಈ ದೇವಸ್ಥಾನಕ್ಕೆ ತನ್ನದೇ ಆದ ಮಹತ್ವವಿದೆ. ವೆಂಕಟೇಶ್ವರ ಸ್ವಾಮಿ ಮೂರ್ತಿಗೆ ವಿಶೇಷ ಮಹತ್ವವಿದೆ. ಯಾರೇ ನೋಡಿದರೂ ಇನ್ನೇನು ದೇವರು ಎದ್ದೇ ಬಂದು ಬಿಡುವನು ಎನ್ನುವಷ್ಠರ ಮಟ್ಟಿಗೆ ಭಕ್ತರು ಪುನೀತರಾಗುತ್ತಾರೆ.

ತಿರುಪತಿಗೆ ಹೋಗಲಾದವರು, ಸಮಯದ ಆಭಾವ ಇದ್ದರೂ ಚಿಕ್ಕ ತಿರುಪತಿಗೆ ಹೋಗಿ ಬರುವುದು ವಾಡಿಕೆ. ಈ ವಾಡಿಕೆಯನ್ನು ಮುರಿದು ಭಕ್ತರು ಈಗ ತುಮಕೂರಿನ ವೆಂಕಟೇಶ್ವರ ದೇವಸ್ಥಾನಕ್ಕೆ ಪುನೀತರಾಗಿ ಹೋಗಿ ಬರುವುದು ರೂಢಿಗತವಾಗುತ್ತಿದೆ.

ತಿರುಪತಿ ವೆಂಕಟೇಶ್ವರ ದೇವಸ್ಥಾನದ ತದ್ರೂಪದಂತೆ ಇಲ್ಲಿಯೂ ಪೂಜೆ ಪುನಸ್ಕಾರಗಳನ್ನು ಮಾಡಲಾಗುತ್ತದೆ ಎನ್ನುತ್ತಾರೆ ಇಲ್ಲಿಯ ಭಕ್ತರು.

ವೈಕುಂಠದ ಮಹತ್ವ ಏನು?


ವೈಕುಂಠವೆಂದರೆ ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ವಿಷ್ಣು ವಾಸಿಸುವ ಸ್ಥಾನ. ವರ್ಷಪೂರ್ತಿ ವೈಕುಂಠ ದ್ವಾರವನ್ನು ಮುಚ್ಚಲಾಗಿರುತ್ತದೆ. ಏಕಾದಶಿಯಂದು ಮಾತ್ರ ತೆರೆಯಲಾಗುತ್ತದೆ ಎಂಬುದು ಭಕ್ತರ ನಂಬಿಕೆ. ವಿಷ್ಣು ನಾನಾ ಅವತಾರಿ. ವಿಷ್ಣುವಿನ ದರ್ಶನ ಮಾಡಿದರೆ ಸರ್ವಪಾಪಗಳು ನಿವಾರಣೆಯಾಗುವುದು ಎನ್ನಲಾಗುತ್ತದೆ. ವ್ಯಕ್ತಿ ಸತ್ತ ನಂತರ ಸ್ವರ್ಗಪ್ರಾಪ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಈ ದಿನ ಎಲ್ಲರೂ ಅಹಂಕಾರ ಬಿಟ್ಟು ವಿಷ್ಣುವನ್ನು ಪೂಜಿಸಬೇಕು.ಈ ದಿನ ಉಪವಾಸವನ್ನು ಮಾಡಿ ವಿಷ್ಣುವನ್ನು ಪೂಜಿಸಿದರೆ ಮೋಕ್ಷ ಸಿಗಲಿದೆ ಎಂದು ಹೇಳುತ್ತಾರೆ.

ರಾಕ್ಷಸರು, ದೇವತೆಗಳು ಸೇರಿ ಸಮುದ್ರ ಮಥನದ ಮಾಡಿದ ಅಮೃತವು ಉಕ್ಕಿ ಬಂತು. ಆ ದಿನವೇ ಏಕಾದಶಿ ಎನ್ನುವವರು ಇದ್ದಾರೆ. ಈ ದಿನ ಬಹಳ ಶುಭದಿನ. ಈ ದಿನ ಸಾವಿಗೀಡಾದವರು ನೇರವಾಗಿ ವೈಕುಂಠ ಸೇರುತ್ತಾರೆ. ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನು ಕೊನೆಯ ಉಸಿರನ್ನು ಇಟ್ಟುಕೊಂಡು ಈ ದಿನಕ್ಕಾಗಿಯೇ ಕಾದು ಪ್ರಾಣ ತೃಜಿಸಿದರು ಎಂದು ಹೇಳಲಾಗುತ್ತದೆ..

ಪದ್ಮಪುರಾಣದ ಮುರನ ಉಪಟಳವನ್ನು ತಾಳಲಾರದೆ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ವಿಹಾಗೂ ಮುರಾಸುರನ ಮಧ್ಯೆ ಕಾಳಗ ನಡೆದು. ಮುರಾಸುರನ ವಧೆಗೆ ಆಯುಧ ತಯಾರಿಸಲು ವಿಷ್ಣುವು ಬದರಿಕಾಶ್ರಮದಲ್ಲಿನ ಹೈಮಾವತಿ ಎಂಬ ಗುಹೆಯಲ್ಲಿ ಬಂದು ಮಲಗುತ್ತಾನೆ. ನಿದ್ದೆಯಲ್ಲಿದ್ದಂತ ವಿಷ್ಣುವನ್ನು ಮುರಾಸುರನು ಕೊಲ್ಲಲು ಬಂದಾಗ ವಿಷ್ಣುವಿನ ದೇಹದಿಂದ ಹೊರ ಬಂದ ಸ್ತ್ರೀ ಶಕ್ತಿಯು ದೃಷ್ಟಿಯಿಂದಲೇ ಮುರಾಸುರನ್ನು ಸುಟ್ಟು ಹಾಕುತ್ತಾಳೆ. ಇದರಿಂದ ಸಂತೋಷಗೊಂಡ ವಿಷ್ಣುವು ಆ ಶಕ್ತಿಗೆ ಏಕಾದಶಿ ಎಂದು ಕರೆಯುತ್ತಾನೆ ಎಂಬ ನಂಬಿಕೆಯೂ ಇದೆ.

ಮುರನು ಅಕ್ಕಿಯಲ್ಲಿ ವಾಸಿಸುವುದರಿಂದ ಈ ದಿನ ಅಕ್ಕಿ ಹಾಗೂ ಧಾನ್ಯಗಳನ್ನು ತಿನ್ನಬಾರದು. ಏಕಾದಶಿಯ ಮರುದಿನ ಮುಕ್ಕೋಟಿ ದ್ವಾದಶಿಯನ್ನು ಆಚರಣೆ ಮಾಡಲಾಗುತ್ತದೆ ವಿಷ್ಣುವನ್ನು ಆರಾಧಿಸುವುದರಿಂದ ಸರ್ವಪಾಪಗಳೂ ಕಳೆಯುತ್ತವೆ ಎಂಬ ನಂಬಿಕೆ ಭಕ್ತರದ್ದು.

ವ್ರತ ಈ ರೀತಿ ಆಚರಿಸಿ


ಉಪವಾಸ ಮಾಡಿ, ಮರು ದಿನ ದ್ವಾದಶಿಯಂದು ತುಳಸಿ ನೀರನ್ನು ಸೇವಿಸುವ ಮೂಲಕ ಉಪವಾಸ ಕೈ ಬಿಡಿ.

ಉದ್ದಿನ ಬೇಳೆ, ಅಗಸೆ ಸೊಪ್ಪು, ನೆಲ್ಲಿಕಾಯಿ, ಮೊಸರು ಬೆರೆಸಿ ಮಾಡಿದಂತಹ ರಾಯತವನ್ನು ಸೇವಿಸಬೇಕು. ಒಂದು ಹೊತ್ತು ಮಾತ್ರ ಆಹಾರ ಸೇವಿಸಿ. ಮೌನವ್ರತವನ್ನೂ ಆಚರಿಸಬಹುದು. ವಿಷ್ಣುನಾಮ ಸ್ಮರಣೆ ಮಾಡಿ. ದೇವಸ್ಥಾನಗಳಲ್ಲಿ ನಿರ್ಮಿಸುವ ವೈಕುಂಠ ದ್ವಾರವನ್ನು ಪ್ರವೇಶಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ.

1 ಲಕ್ಷ ಭಕ್ತರು ಬರುವ ನಿರೀಕ್ಷೆ

ಹಲವಾರು ವರ್ಷಗಳಿಂದಲೂ ವೆಂಕಟೇಶ್ವರದ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತದೆ. ವಿಷ್ಣುವಿನ ವಿಶೇಷ ಅಲಂಕಾರ ಮಾಡಲಾಗುತ್ತದೆ. ಭಕ್ತರಿಗೆ ವಿಶೇಷ ವ್ಯವಸ್ಥೆ ಕಲ್ಪಿಸುವ ಮೂಲಕ ಯಾವುದೇ ಅನಾನೂಕೂಲ ಆಗದಂತೆ ನೋಡಿಕೊಳ್ಳಲಾಗುವುದು.
ಲಕ್ಷಕ್ಕೂ ಮೀರಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಗಣ್ಯರಿಗಾಗಿ ವಿಶೇಷ ವ್ಯವಸ್ಥೆ ಇದೆ. ಮುಂಜಾನೆಯಿಂದಲೇ ದರ್ಶನ ಆರಂಭವಾಗಲಿದೆ.

ಡಿ.ಎಸ್.ಕುಮಾರ್, ಅಧ್ಯಕ್ಷರು, ದೇವಸ್ಥಾನದ

ಆಡಳಿತ ಮಂಡಳಿ

Comment here