ಜನಮನ

ಈ ದೇವಸ್ಥಾನವೀಗ ಬರೀ ದೈವ ಕೇಂದ್ರವಾಗಿಲ್ಲ, ಜೊತೆಗೆ ಶಿಕ್ಷಣ ಕೇಂದ್ರವೂ ಹೌದು.

ಲಕ್ಷ್ಮೀಕಾಂತರಾಜು ಎಂಜಿ


ಚೇಳೂರು: ಅದೊಂದು ಸುಂದರ‌ ಗುಡ್ಡ ಇರುವ ಪ್ರದೇಶ. ಗುಡ್ಡವೇರಿ ವೀಕ್ಷೀಸಿದರೆ ಎಳೆಂಟು ಕಿಮೀ ವ್ಯಾಸದ ಪ್ರಕೃತಿ ಕಣ್ಮನ ಸೆಳೆಯುತ್ತದೆ. ಇಂಥಹ ಸುಂದರ ತಾಣದಲ್ಲಿ ಶ್ರೀರಂಗನಾಥ ಸ್ವಾಮಿ ನೆಲೆಸಿ ಗುಡ್ಡದ ಶ್ರೀ ರಂಗನಾಥಸ್ವಾಮಿಯು ಅನಾದಿ‌ ಕಾಲದಿಂದಲೂ ಇಲ್ಲಿ ನೆಲೆಸಿದ್ದಾನೆ.

ಹೌದು. ಗುಬ್ಬಿ ತಾಲ್ಲೂಕು ಚೇಳೂರು ಹೋಬಳಿಯ ಹೂವಿನಕಟ್ಟೆಯಲ್ಲಿರುವ ಗುಡ್ಡದ ಮೇಲೆ ಶ್ರೀ ಗುಡ್ಡದ ರಂಗನಾಥಸ್ವಾಮಿ ನೆಲೆಸಿ ಅಪಾರ ಸಂಖ್ಯೆಯ ಭಕ್ತ ಸಮೂಹವೊಂದಿ ಈ ಭಾಗದ ಪ್ರಮುಖ ದೈವ ಕೇಂದ್ರವಾಗಿದೆ.

ದೂರದಿಂದ ಕಾಣುವ ಶಾಲಾ ಸಮುಚ್ಛಯ

ಈ ದೇವಸ್ಥಾನಕ್ಕೆ ಸ್ಥಳೀಯ ಭಕ್ತರನ್ನ ಹೊರತು ಪಡಿಸಿಯೂ ದೂರದ ಬೆಂಗಳೂರು ಸೇರಿದಂತೆ ಎಲ್ಲ ಕಡೆಯೂ ಭಕ್ತ ವರ್ಗವಿದ್ದು ಪ್ರತಿ ಶನಿವಾರ ಇಲ್ಲಿ‌ ಪ್ರಮುಖ ಪೂಜೆಯಿದ್ದು ಸಾಕಷ್ಟು ಸಂಖ್ಯೆಯಲ್ಲಿ ದೇವರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ

ಭಕ್ತರು ತಮ್ಮ ಬೇಡಿಕೆಗಳನ್ನ ಈಡೇರಿಸಿದ ಮೇಲೆ ಈ ಗುಡ್ಡದ ರಂಗನಾಥಸ್ವಾಮಿಯವರಿಗೆ ಹರಿಕೆ ರೂಪದಲ್ಲಿ ಕಾಣಿಕೆ ಹಾಗೂ ಇಲ್ಲಿ ಬಂದು ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನೂ ಮಾಡುತ್ತಾರೆ.

ಈ‌ ದೇವಾಲಯವು ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಇಲಾಖೆ ಹಾಗೂ ಭಕ್ತರ ನೆರವಿನಿಂದ ದೇವಸ್ಥಾನವು ನಿರೀಕ್ಷೆಗಿಂತ ಹೆಚ್ಚು ಅಭಿವೃದ್ಧಿಯಾಗಿದೆ

ರಂಗನಾಥಸ್ವಾಮಿಯ ಕೇಂದ್ರವೀಗ ಶಿಕ್ಷಣ ಕೇಂದ್ರವೂ ಹೌದು

ನೋಡಲು ಚೆಂದ ಈ ಕ್ಯಾಪಸ್


ಸುಂದರ ಬೆಟ್ಟದಲ್ಲಿ‌ ಗುಡ್ಡದ ರಂಗನಾಥಸ್ವಾಮಿ ನೆಲೆಸಿರುವ ಜೊತೆಗೆ ಇಲ್ಲಿ ಈಗ ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ. ಈ ಬೆಟ್ಟದ ತಪ್ಪಲಿನಲ್ಲಿ ಮೊರಾರ್ಜಿ‌‌‌ದೇಸಾಯಿ ವಸತಿ ಶಾಲೆಯು ಕಳೆದ ಹತ್ತು ವರ್ಷಗಳ ಹಿಂದೆ ಆರಂಭವಾಗಿ ಈ ಶಾಲೆಯಲ್ಲಿ‌ ಸ್ಥಳೀಯ ಹಾಗೂ ಹೊರಗಿನ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ‌ ಮಾಡುತ್ತಿರುವದರಿಂದ ಇದೊಂದು ಕ್ಯಾಪಂಸ್ ಮಾದರಿಯಾಗಿ ಮಾರ್ಪಟ್ಟಿದೆ.

ಇದೇ ಬೆಟ್ಟದ ಮತ್ತೊಂದು ಭಾಗದ ತಪ್ಪಲಿನಲ್ಲಿ‌ ಕಿತ್ತೂರು ಚೆನ್ನಮ್ಮ‌ವಸತಿ ಶಾಲೆಯು ಆರಂಭವಾಗಲು ಕ್ಷಣಗಣನೆ ಆರಂಭವಾಗಿದೆ.‌ಕಟ್ಟಡದ ಕಾಮಗಾರಿ‌ ಅಂತಿಮ ಹಂತಕ್ಕೆ ಬಂದಿದ್ದು ಬಹುಶಃ ಮುಂದಿನ ಶೈಕ್ಷಣಿಕ‌ ವರ್ಷದಿಂದ ಆರಂಭವಾಗುವ ಲಕ್ಷಣಗಳಿವೆ.

ಗುಬ್ಬಿ ತಾಲ್ಲೂಕಿನ ಒಂದೇ ಗ್ರಾಮಕ್ಕೆ ಎರೆಡು ವಸತಿ ಶಾಲೆಗಳು ಮಂಜೂರಾಗಿ ಗುಡ್ಡದ ರಂಗನಾಥಸ್ವಾಮಿ‌‌ ನೆಲೆಸಿದ ಬೆಟ್ಟದ ತಪ್ಪಲಿನಲ್ಲಿ ನಡೆಯುತ್ತಿದ್ದು ಈ ದೇವಸ್ಥಾನವೀಗ ಕೇವಲ‌ ಧಾರ್ಮಿಕ ಕೇಂದ್ರವಾಗಿರದೇ ಶೈಕ್ಷಣಿಕ ಕೇಂದ್ರವಾಗಿ‌ ಮಾರ್ಪಟ್ಟಿರುವುದು ವಿಶೇಷವಾಗಿದೆ.


ನಮ್ಮೂರಿನ‌ ರಂಗನಾಥ ಸ್ವಾಮಿ ಗುಡ್ಡದ ಮೇಲೆ ಉದ್ಬವವಾಗಿರುವುದಕ್ಕೆ ಅನೇಕ ದಂತ ಕತೆಗಳಿವೆ. ಅಪಾರ ಮಹಿಮೆ ಹೊಂದಿರುವ ರಂಗನಾಥಸ್ವಾಮಿಯು ಸಕಲ ಭಕ್ತರ ಹಿತ ಕಾಯುತ್ತಾನೆ. ಇದರ ನಡುವೆ ಇದೇ ಕೇಂದ್ರದಲ್ಲಿ ವಸತಿ‌ ಶಾಲೆಗಳು ಆರಂಭವಾಗಿ ಇದೊಂದು ಶೈಕ್ಷಣಿಕ‌ ಕೇಂದ್ರವೂ ಆಗಿದೆ

ಗರಿಕಡ್ಡಿ ಶಿವಣ್ಣ
ಮಾಜಿ ತಾಪಂ ಅಧ್ಯಕ್ಷರು. ಹೂವಿನಕಟ್ಟೆ


ಹೂವಿನಕಟ್ಟೆ ಎಂದರೀಗ…

ನಮ್ಮೂರಿನಲ್ಲಿ ಎರಡು ವಸತಿ‌ ಶಾಲೆಗಳಿದ್ದು ಅಲ್ಲಿ ಹೊರ ತಾಲ್ಲೂಕು ಹಾಗೂ ಜಿಲ್ಲೆಗಳ ವಿದ್ಯಾರ್ಥಿಗಳು ಬಂದು ಇಲ್ಲಿ ಅಧ್ಯಯನ ಮಾಡುತ್ತಿರುವುದರಿಂದ ನಮ್ಮ‌ಹೂವಿನಕಟ್ಟೆಯು ಇಂದು ಶಾಲೆಗಳಿಂದ ಗುರುತಿಸಿಕೊಳ್ಳುವಂತಾಗಿದೆ.

ರಂಗನಾಥ್,ವಿಎಸ್ ಎಸ್ ಎನ್ ಕಾರ್ಯದರ್ಶಿ. ಹೂವಿನಕಟ್ಟೆ.

Comment here