ಜನಮನ

ಕಿರಿಕ್ ಪಾರ್ಟಿಗಳೊಂದಿಗೆ ವ್ಯವಹರಿಸೋದ್ ಹೇಗೆ ?

  • ಪುಲಿ ಮಂಜುನಾಥಜೋಗಿ

ಹಿಂದೊಮ್ಮೆ ಬಹುಷಃ 1997-98 ರಲ್ಲಿ ನಾನು ಬೆಂಗಳೂರು ವಿಶ್ವ ವಿದ್ಯಾಲಯಲ್ಲಿ ರಾಜ್ಯಶಾಸ್ತ್ರ ಸ್ನಾತಕ್ಕೋತ್ತರ ಪದವಿಯನ್ನ ಓದುತ್ತಿರುವ ಸಂದರ್ಭದಲ್ಲಿ ಮೆಜೆಸ್ಟಿಕ್ನಿಂದ ಕೆಂಗೇರಿಯ ಬೆಂಗಳೂರು ಜ್ಞಾನ ಭಾರತೀ ವಿ.ವಿ.ಯ ಕಡೆ ಸಂಪೂರ್ಣ ಭರ್ತಿ ಆಗಿದ್ದ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದೆ.ನನ್ನ ಪಕ್ಕದ ಸೀಟಿನಲ್ಲಿ ಕೈತುಂಬಾ ಬ್ಯಾಗುಗಳ ಸಮೇತ ಬಂದ ಮಹಿಳೆ ಕುಳಿತರು.

ಆಕೆಯ ಬ್ಯಾಗುಗಳ ಕಾರಣದಿಂದ ನನಗಲ್ಲಿ ಕುಳಿತುಕೊಳ್ಳಲು ಸ್ವಲ್ಪಕಷ್ಟವೇ ಆಯಿತು.ಆಗ ನನ್ನ ಅವಸ್ಥೆ ನೋಡಿದ ಸಹ ಪ್ರಯಾಣಿಕನೊಬ್ಬಾತ ಹತ್ತಿರ ಬಂದು:”ನೀವೇಕೆ ಸುಮ್ಮನೆ ಇದ್ದೀರೀ?ಆಕೆಗೆ ಬ್ಯಾಗು
ಗಳನ್ನ ಕೆಳಗಿಡಲು ಯಾಕೆ ಹೇಳುತ್ತಿಲ್ಲ?”ಅಂದ.

ಮುಗುಳ್ನಗುತ್ತಾ ಹೇಳಿದೆ:-
“ಇಷ್ಟು ಚಿಕ್ಕ ವಿಷಯಕ್ಕೆ ನಾನೇಕೆ ಪ್ರಾಧಾನ್ಯತೆ ಕೊಡಬೇಕು?ಆಕೆ ಜೊತೆ ಚರ್ಚಿಸಬೇಕು?ನಂತರ ಜಗಳ,ಆನಂತರ ಕೋಪ,
ಆಮೇಲೆ ದ್ವೇಷ?ವಿನಾ
ಕಾರಣ ಅಪರಿಚಿತರ ನಡುವೆ ಬೇಕೇ?ಕೊನೆಗೆ ತಾಳ್ಮೆ ಕಳೆದುಕೊಂಡು ನನ್ನ ಕೆಲ
ಕ್ಷಣದ ನೆಮ್ಮದಿಯನ್ನ ಏಕೆ ಹಾಳುಮಾಡಿಕೊಳ್ಳಲಿ?ನಾನು ಮುಂದಿನ ನನ್ನ ಸ್ಟಾಪಲ್ಲಿ ಇಳಿಯುತ್ತೇನೆ.

ನಾವು ಒಟ್ಟಿಗೆ ಸಾಗುವ ಈ ಪ್ರಯಾಣವು “ಇನ್ನು ಸ್ವಲ್ಪ ಕಾಲ ಮಾತ್ರವಷ್ಟೇ!
ಅಲ್ಲವೇ?”ಅಂದು ಸುಮ್ಮನಾದೆ.

ಆತ್ಮೀಯರೇ…
ನಿಜವಾಗಿಯೂ ಜೀವನ
ದಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಅಳವಡಿಸಿ
ಕೊಳ್ಳಲೇ ಬೇಕಾದ ಒಂದು ಸಂದೇಶವನ್ನೇ ಆ ದಿನ ನಾ ಹೇಳಿರುವುದೆಂಬುದು ಆ
ಮೇಲೆನಗೆ ಅರ್ಥವಾಗಿತ್ತು.

ನಮ್ಮ ಜೀವನದ ಪ್ರಯಾಣ ಕೂಡ ಅಪರಿಚಿತರೊಂದಿಗೆ ಕೆಲ ಕಾಲ ಮಾತ್ರ.ಅಂದರೆ ಈ ನಮ್ಮ ಜೀವನದ ಪ್ರಯಾಣವು ಇನ್ನು ಸ್ವಲ್ಪ ದೂರ ಮಾತ್ರವಷ್ಟೇ.ಅಂದ
ಮೇಲೆ ವಿನಾಕಾರಣವಾಗಿ ಸಣ್ಣಪುಟ್ಟದಕ್ಕೆಲ್ಲಾ ಜಗಳ,
ವಾದ,ವಿವಾದ,ಕೋಪ,
ತಾಪ,ಅಸಹನೆ,ಸಂಘರ್ಷ,
ತಿಕ್ಕಾಟದವಶ್ಯಕತೆ ಇದೆಯ?

ನಮ್ಮೆಲ್ಲರ ಈ ಜಗದ ಮೇಲಿನ ಜೀವನ ಎಷ್ಟೊಂದು ನಶ್ವರ ಮತ್ತು ಎಷ್ಟು ಚಿಕ್ಕದ!ಲ್ಲವೇ?

ಹಾಗಾಗಿ.,ನಿಮ್ಮ ಮನವನ್ನು ಯಾರಾದರೂ,ಎಲ್ಲಾದರೂ,ಯಾವ ಸಂದರ್ಭದಲ್ಲೇ ಆದರೂ ನೋಯಿಸಿದ್ದಾರಾ?
ನಿಮ್ಮ ತಾಳ್ಮೆ ಸಹನೆಯನ್ನ ಕೆಡಿಸಿ ಕಂಗೆಡಿಸಿ ಕೋಪ ಬಂದವರನ್ನು ಕೊಲ್ಲುವಷ್ಟು ಕಾಟ ಕೊಟ್ಟು ಕಣ್ಣೆದುರಿಗೆ ಪದೇಪದೇ ಪ್ರತಿ ಕ್ಷಣ ಕಾಣಿಸ್ತಾ ಇದ್ದಾರಾ?
ಚಿಂತೆಯಿಲ್ಲ.ಅವರನ್ನು ಆ ಕ್ಷಣವೇ ಮರೆತು ಕ್ಷಮಿಸಿಬಿಟ್ಟು ಅವರಿಂದ ದೂರಾಗಿಬಿಡಿ.ಏಕೆಂದರೆ?
ಕೆಲವರೊಟ್ಟಿಗಿನ ಈ ಪ್ರಯಾಣ ಇನ್ನು ಸ್ವಲ್ಪ ಕಾಲ ಮಾತ್ರ.ನಿಮ್ಮನ್ನು ಯಾರಾದರೂ ಅವಮಾನಿಸಿದರೇ?ನಿಮಗೆ ಯಾರಾದರೂ ಮೋಸ,
ವಂಚನೆ,ಮಾಡಿದರೇ?ನಿಂದಿಸಿದರೇ?ಬೇಸರ ಮಾಡಿಕೊಳ್ಳದಿರಿ.ಈ ಒಟ್ಟಿಗಿನ ಜೀವನಯಾತ್ರೆ ಇನ್ನು ಸ್ವಲ್ಪ ಕಾಲ ಮಾತ್ರವಷ್ಟೇ.

ಹತ್ತಿರದ ಸ್ನೇಹಿತರು,ಬಂಧು
ಬಳಗ ಹಾಗು ಸಂಬಂಧಿಕ
ರಿಂದ ನೀವು ಧೂಷಣೆ,
ಆರೋಪ ಮಾಡಿ ನಿಂದಿಸಿ,
ನಿರ್ಲಕ್ಷಿಸಿ ಅವಮಾನಿಸಿ ಶಿಕ್ಷಿಸಲ್ಪಟ್ಟರೆ?ಚಿಂತಿಸಬೇಡಿ.
ಅವರೊಟ್ಟಿಗಿನ ಈ ಜೀವನದ ಪಯಣವು ಇನ್ನು ಸ್ವಲ್ಪ ಕಾಲ ಮಾತ್ರ ಎಂಬುದ ಮರೆಯದಿರಿ.

ಮನಸ್ಸಲ್ಲಿ ಪ್ರೀತಿ,ಸ್ನೇಹ,
ವಿಶ್ವಾಸ ನಂಬಿಕೆಯನ್ನು ಬೆಳೆಸಿಕೊಳ್ಳಿ.ಅವು ನಮಗೆಲ್ಲರಿಗೂ ಸಿಕ್ಕಿರುವ
ವಿಶೇಷ ಅಂಶಗಳಾಗಿವೆ.

ಶತ್ರುಗಳು,ದ್ವೇಷಿಸುವವರಿಗೋ ಸಿಗದವು,ಆದ್ದರಿಂದ ನಾವು ಇನ್ನುಳಿದ ಕಾಲ ಸಂತೋಷ,ಸ್ನೇಹ,
ಪರೋಪಕಾರದಿಂದಲೂ ಪರಸ್ಪರರನ್ನು ಕ್ಷಮಿಸುತ್ತಾ, ಸಹಿಸುತ್ತಾ ಮುಂದೆ ಸಾಗೋಣ.
ಕೊನೆಯದಾಗಿ…
ಹಿಂತಿರುಗಲಾಗದ,ಯಾವಾಗ,ಯಾರು,ಯಾವ,ಸ್ಟಾಪಲ್ಲಿ ಇಳಿಯುವರು!ಎಂದು ಯಾರೂ ಮುಂಚೆಯೇ ಹೇಳಲಾಗದ ಈ ಜೀವನ ಎಂಬ ಪ್ರಯಾಣವು…

“ಇನ್ನು ಸ್ವಲ್ಪ ಕಾಲ ಮಾತ್ರ”
ಎಂಬುದು ನೆನಪಿರಲಿ.ಲೇಖಕರು ತುಮಕೂರಿನ ಸುಫಿಯಾ ಕಾನೂನು ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರು.

Comment here