ಅಂತರಾಳ

ಎಲ್ಲರಲ್ಲೂ ಇರುವ ಏನಿದು ಆರನೇ ಇಂದ್ರಿಯ ?

ಪುಲಿ ಮಂಜುನಾಥ ಜೋಗಿ


ಜಗತ್ತಿನ ಜೀವವಿರುವ
ಪ್ರತಿ ಪ್ರಾಣಿ,ಪಕ್ಷಿ,
ಕ್ರಿಮಿ,ಕೀಟ ಮನುಷ್ಯನಿಗೂ ಆರನೇ ಇಂದ್ರಿಯ ಅಥವಾ ‘ಅಂತರಾತ್ಮ’ ಇರುತ್ತದೆಯೇ?
ಅಂತರಾತ್ಮ ಹೇಳುವುದನ್ನೇ “ಮನಸಾಕ್ಷಿ” ಎನ್ನುತ್ತಾರ?

ಈ ಅಗೋಚರ ನಿಕ್ಷಿಪ್ತಶಕ್ತಿಯನ್ನ ಯಾಕೆ ಎಲ್ಲ ಗಮನಿಸುವುದಿಲ್ಲ? ಗಮನಿಸಿದರೂ ಸಹ ಗಣನೆಗೆ ತೆಗೆದುಕೊಳ್ಳುವುದಿಲ್ಲವೇಕೇ?

ನೋಡಿ..,
ನಾವು ಕೆಲವು ಬಾರಿ ನಮಗೆ ತಿಳಿಯದಂತೆ ಆರನೇ ಇಂದ್ರಿಯದ ಅಂತರ್ವಾಣಿಯನ್ನ ಅನುಸರಣೆ ಮಾಡುತ್ತೇವೆ.ಹಾಗೆಯೇ ಒಂದೊಂದು ಬಾರಿ ಆತ್ಮದ ಎಚ್ಚರಿಕೆಯನ್ನು ನಿರ್ಲಕ್ಷ ಮಾಡಿ ಮುಂದಕ್ಕೆ ಹೋಗುತ್ತ ನಮ್ಮ ಸುಖ ಅಥವಾ ನೆಮ್ಮದಿಯನ್ನು ನಾವೇ ಹಾಳುಮಾಡಿ
ಕೊಳ್ಳುತ್ತೇವಲ್ಲವೇ?


ಕೆಲವೊಂದು ಸಮಯದಲ್ಲಿ ಬಂಧು, ಮಿತ್ರ ಅಥವಾ ಆತ್ಮೀಯರಲ್ಲಿ ಸಾಲ ಕೇಳಲಿಕ್ಕೆ ಅಥವಾ ನಾವು ಕೊಟ್ಟಿರುವ ಹಣ ಪಡೆಯಲಿಕ್ಕೆ ಹೋಗಬೇಕೆಂದು ಮನೆ ಹೊಸ್ತಿಲುದಾಟಿ ಹೊರ ಬಂದ ಕೂಡಲೇ ನಮಗೇನೋ ಸಂದೇಹ? ಅಥವಾ ಸಂದೇಶ? ನಮ್ಮ ಇಂದ್ರಿಯ ಅಥವಾ ಮನಸಾಕ್ಷಿಯಿಂದಲೇ ಬರುತ್ತದೆ.
ಹೋಗಬೇಕೋ? ಬೇಡವೋ?ಎಂದು ಮನಸ್ಸು ಗೊಂದಲದ ಗೂಡಾಗುತ್ತದೆ.ಇದೇ ಆರನೇ ಇಂದ್ರಿಯ ಅಥವಾ ‘ಅಂತರ್ವಾಣಿ’ ಯ ಸಂಕೇತ.

ಮನೋಸಾಕ್ಷಿ ಬೇಕು? ಬೇಡವೆಂದು ಹೇಳುತ್ತಿದ್ದರೂ ನಾವು ಲೆಕ್ಕಿಸದೇ ಮುಂದಕ್ಕೆ ನಡೆಯುತ್ತೇವೆ.ಬಂಧುಮಿತ್ರರ ಮನೆಗೆ ಹೋಗುವ ಸಮಯಕ್ಕೆ ಅವರು ಮನೆಯಲ್ಲಿರುವುದಿಲ್ಲ. ಅಥವಾ ನಾವು ಕೇಳಲಿಕ್ಕಾಗಲಾರದ ವಿಷಯವೇನೋ? ನಡೆಯುತ್ತಿರುತ್ತದೆ. ಅಥವಾ ಒಂದು ವಾರ ಕೇಳಿ ನಮ್ಮನ್ನ ವಾಪಸು ಕಳುಹಿಸುತ್ತಾರೆ.ಅಥವಾ ನಮ್ಮನ್ನೇ ಆ ಸಮಯ,ಸಂದರ್ಭದಲ್ಲಿ ಬಲಿಪಶುವಾಗಿಸಿ
ಬಿಡುತ್ತಾರೆ.

ಮನುಷ್ಯನಿಗೆ ಅಷ್ಟೇ ಅಲ್ಲ,ಪ್ರಾಣಿ,ಪಕ್ಷಿ, ಕ್ರಿಮಿ, ಕೀಟಗಳಂತೂ ಪ್ರಕೃತಿಯ ಎಲ್ಲ ಅನಿರೀಕ್ಷಿತ ಬದಲಾವಣೆ ಯ ಮುನ್ಸೂಚನೆಯನ್ನು ಅರ್ಧಗಂಟೆಗೆ ಮೊದಲೇ ಅರಿತು
ಜಾಗ್ರತೆಯಾಗಿ ಸ್ವಯಂರಕ್ಷಣೆ ಪಡೆದು ಮನುಷ್ಯರಿಗೂ ಎಚ್ಚರಿಕೆಯ ಸಂದೇಶ ಕೊಡುವುದೇ ಈ ಆರನೇ ಇಂದ್ರಿಯ ಅಥವಾ ಅಂತರ್ವಾಣಿ.

ಇಂತಹ ಆತ್ಮವು ಪ್ರತಿ ಜೀವಿಯೂ ಕಾರ್ಯ ಕಾಯಕಗಳ ಸಾಕ್ಷಿಪ್ರಜ್ಞೆ. ಮನುಷ್ಯ ಸರಿ/ತಪ್ಪು ಮಾಡುವಾಗ ಕುಟಿಲ ಮನಸ್ಸು ಎಷ್ಟೇ ಧೈರ್ಯದಿಂದ ಇದ್ದರೂ ಎದೆ ಢವ ಢವ ಎಂದು ಹೊಡೆದುಕೊಳ್ಳುವುದು, ಕೈ ನಡುಗುವುದು,ಮುಖ ಕಳೆಗುಂದುವುದು,ಮೈ ಬೆವರುವುದು, ಕಾಲುಗಳಲ್ಲಿ ನಿಶ್ಯಕ್ತಿ ಆವರಿಸುವುದು,ಮುಖದಲ್ಲಿ ಅವ್ಯಕ್ತ ನೋಟ ಪರರಿಗೆ ಗೋಚರಿಸುವುದು….,
ಹೀಗೆ ದೈಹಿಕ ಮಾನಸಿಕ ಕ್ರಿಯೆಗಳು ಭಯಗ್ರಸ್ಥ ಹಾಗೂ ಅಸ್ತವ್ಯಸ್ತವಾಗುವವು. ಈ ಎಲ್ಲಾ ಕ್ರಿಯೆಗಳ ಮೂಲಕ ಪ್ರತಿಪ್ರಾಣಿ ಪಕ್ಷಿ, ಕ್ರಿಮಿ, ಕೀಟವನ್ನು ಹಾಗೂ ಪ್ರತಿಯೊಬ್ಬ ಮನುಷ್ಯನನ್ನ ಎಚ್ಚರಿಸುತ್ತಿರುವುದೇ…, ಆತ್ಮ ಹಾಗೂ ಅಂತರಾತ್ಮ.

ಹಾಗೆಯೇ ನಾವು ಅರಿವಿದ್ದೋ,ಅಥವೊ ಅರಿವಿಲ್ಲದೋ? ಉದ್ದೇಶಪೂರ್ವಕವೊ?ಅಥವಾ ಬಲಹೀನತೆಯಿಂದಲ್ಲದಿದ್ದರೂ ಯಾವುದಾದರೂ ಸರಿ?ತಪ್ಪು ಕೆಲಸ ಮಾಡಲಿಕ್ಕೆ ಮನಸು ಮಾಡಿದಾಗ ನಮ್ಮಲ್ಲಿರುವ ಅಂತರ್ವಾಣಿ “ಬೇಡ, ಇದು ಸರಿ ಅಥವಾ ಸರಿಯಲ್ಲ” ಎಂದು ನಮಗೆ ಪ್ರಚೋದನೆ ನೀಡುತ್ತಲೇ ಇರುತ್ತದೆ. ಆದರೆ ನಾವು ಮನೋಸಾಕ್ಷಿಯನ್ನ ಧಿಕ್ಕರಿಸಿಬಿಡುತ್ತೇವೆ. ತದನಂತರ ಮಾಡಿದ್ದು, ತಪ್ಪೋ?ಸರಿಯೋ?ಎಂದು ಪಶ್ಚಾತ್ತಾಪ ಅಥವಾ ಸಂತಸಪಡುತ್ತೇವೆ.ಆಗ
ಆಸರೆಗಾಗಿ ಹುಡುಕುತ್ತ
ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣವೇ ಅಂತರ್ವಾಣಿ ಹಾಗೂ ಮನಸಾಕ್ಷಿಯ ಎಚ್ಚರಿಕೆಯನ್ನು ಧಿಕ್ಕರಿಸಿದ ಫಲಿತವಿದು.


ಕೆಲವೊಂದು ಸಮಯದಲ್ಲಿ ಆಲೋಚಿಸದೆ ಅವಸರದಿಂದ ಅಂತರಾತ್ಮವಾಣಿಯನ್ನ ಸಹ ಕೇಳದೆ ಒಳ್ಳೆ ಅಥವಾ ಕೆಟ್ಟ ಕೆಲಸಕ್ಕೆ ಹೋಗದೆ ಮುಂದಕ್ಕೆ ಹಾಕುತ್ತೇವೆ.ತದನಂತರ ಆ ಒಂದು ಕ್ಷಣದ ಸಾಧಕ, ಬಾಧಕಗಳಿಗೆ ನಾವೇ ಸಾಕ್ಷಿಭೂತರಾಗುತ್ತೇವೆ.

ಅದಕ್ಕಾಗಿ ಇದು ಸರಿ ಅಥವಾ ತಪ್ಪು ಎಂದು ಇನ್ನು ಮುಂದಾದರೂ ನಮ್ಮ ಅಂತರಾತ್ಮವನ್ನ ಗಮನಿಸುವ, ಅಂತರ್ವಾಣಿಯನ್ನೊಮ್ಮೆ ಪರೀಕ್ಷಿಸಿ ನೋಡಿ ಮುಂದಡಿ ಇಡ ಬೇಕು.ಪ್ರತಿ ಕೆಲಸಕ್ಕೆ ನಾವು
ಇನ್ನು ಮುಂದೆ ನಮಗೆ ನಾವೇ ಮಾರ್ಗದರ್ಶಿಯಂತೆ ಗುರುವಾಗಬೇಕು.
ಒಳ್ಳೆ ಕೆಟ್ಟದರ ಜಯಾಪಜಯವನ್ನ ಬದುಕಿನ ಹಾದಿಯಲ್ಲಿ ಬದುಕಿರುವವರೆಗೂ ಸೂಕ್ತಹಾದಿಯಲ್ಲಿ ಸಾಧಿಸುತ್ತ ಸಾಗುತ್ತಾ ಕನಿಷ್ಠ ನೆಮ್ಮದಿಯ ಜೀವನವನ್ನು ಕಳೆಯುವ !ಅಲ್ಲವೇ?


ಪುಲಿ. ಮಂಜುನಾಥಜೋಗಿ.
ರಾಜ್ಯಶಾಸ್ತ್ರ ಉಪನ್ಯಾಸಕರು.

Comment here