ತುಮಕೂರು ಲೈವ್

ಒಕ್ಕಲಿಗರ ಸಂಘದ ಮೇಲೆ ಕಿಡಿಕಾರಿದ ರವಿಗೌಡ

ತುಮಕೂರು;ಜಿಲ್ಲೆಯಲ್ಲಿ ಮಿತಿಮೀರಿದ ಚಿರತೆಗಳ ಹಾವಳಿಯಿಂದಾಗಿ ಒಕ್ಕಲಿಗ ಸಮುದಾಯ ವಿಪರೀತ ಸಮಸ್ಯೆಯಲ್ಲಿ ಸಿಲುಕಿದೆ. ಚಿರತೆಗಳ ಹಾವಳಿ ತಡೆಯುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕಾದ ಒಕ್ಕಲಿಗರ ಸಂಘ ತುಟಿ‌ ಬಿಚ್ಚದೇ ಮೌನವಾಗಿದೆ ಎಂದು ಸಮುದಾಯದ ‌ಮುಖಂಡ‌ರಾದ ರವಿಗೌಡ ಕಿಡಿ ಕಾರಿದ್ದಾರೆ.

ಪ್ರಾಣಿಗಳ ಕಿರುಕುಳ ಎಲ್ಲರಿಗೂ ಸಮಸ್ಯೆ. ಆದರೆ ಜಿಲ್ಲೆಯಲ್ಲಿ ಚಿರತೆಗಳ ದಾಳಿಯಿಂದ ಒಕ್ಕಲಿಗ ಸಮುದಾಯದ ಮೂವರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಅದರೂ ಚಿರತೆಗಳನ್ನು ಹಿಡಿಯಲು ಜಿಲ್ಲಾಡಳಿತ, ಅರಣ್ಯ ಇಲಾಖೆ ತಾತ್ಸಾರ‌ ಮನೋಭಾವ ತೋರಿರುವುದು ಖಂಡನೀಯ. ಇದನ್ನು ಸಂಘ ಪ್ರಶ್ನಿಸಬೇಕಿತ್ತು ಎಂದು ಹೇಳಿದ್ದಾರೆ‌.

₹25 ಲಕ್ಷ ಪರಿಹಾರ ನೀಡಿ

ಇಂತ ದಾಳಿಗಳನ್ನು ಯಾರೂ ಜಾತಿ ದೃಷ್ಟಿಕೋನದಿಂದ ನೋಡಬಾರದು.‌ ಆದರೆ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ ಸಮುದಾಯ ಒಕ್ಕಲುತನ ಮಾಡುತ್ತಿರುವ ಪ್ರದೇಶಗಳಲ್ಲೇ‌ ಹೆಚ್ಚಿದೆ. ಇದರಿಂದಾಗಿ ತೋಟ ತುಡಿಕೆಗಳಿಗೆ ಹೋಗಲು ಹೆದರುತ್ತಿದ್ದಾರೆ. ಇದು ಅವರ ಆದಾಯ ಮೂಲವನ್ನೇ ಕಸಿಯುತ್ತಿದೆ.‌ಇದು ಪರೋಕ್ಷವಾಗಿ ಸಮಾಜದ ಜನರು ಆರ್ಥಿಕವಾಗಿ ಹಿನ್ನಡೆ ಅನುಭವಿಸಲು ಕಾರಣವಾಗಲಿದೆ. ಈ ಹಿನ್ನೆಲೆಯಲ್ಲೂ ಸಂಘ ನೋಡಬೇಕಾಗಿದೆ.‌ಇದನ್ನು ಬೇರೆ ಸಮುದಾಯದವರು ಅಪಾರ್ಥ ಮಾಡಿಕೊಳ್ಳಬಾರದು ಎಂದು ವಿವರಿಸಿದ್ದಾರೆ.

ಚಿರತೆ ಹಾವಳಿಯಿಂದಾಗಿ ಸಮುದಾಯದ ಜನರಿಗೆ ಆಗುತ್ತಿರುವ ಬಗ್ಗೆ ಒಕ್ಕಲಿಗರ ಸಂಘದ ಬೋರೇಗೌಡ, ದೇವಣ್ಣ ಇಬ್ಬರ ಗಮನಕ್ಕೂ ತಂದಿದ್ದೇನೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದ್ದೇನೆ. ಸಮಾಜ ಎಂದರೆ ಒಬ್ಬ ವ್ಯಕ್ತಿಗೂ ತೊಂದರೆಯಾಗದಂತೆ ತಡೆಯಬೇಕು.ಈ ಕೆಲಸವನ್ನು ಸಂಘಟನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಚಿರತೆ ದಾಳಿಯಿಂದ ಸಾವಿಗೀಡಾದವರ ಕುಟುಂಬದ ಸದಸ್ಯರಿಗೆ ₹ 25 ಲಕ್ಷ ಪರಿಹಾರ ನೀಡಬೇಕು. ಒಬ್ಬರಿಗೆ ಸರ್ಕಾರಿ ಕೆಲಸ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Comments (2)

  1. ಒಕ್ಕಲಿಗ ಸಂಘದ ಮೇಲೆ ಕಾರಿದ ಕಿಡಿಯನ್ನು ಚಿರತೆ ಹಿಡಿಯಬೇಕಾದ ರಾಜ್ಯ ಸರ್ಕಾರದ ವಿರುದ್ಧ ರವಿಗೌಡರು ಕಾರಬಲ್ಲರೆ…

  2. ಒಕ್ಕಲಿಗ ಸಂಘದ ಮೇಲೆ ಕಾರಿದ ಕಿಡಿಯನ್ನು ಚಿರತೆ ಹಿಡಿಯಬೇಕಾದ ರಾಜ್ಯ ಸರ್ಕಾರದ ವಿರುದ್ಧ ರವಿಗೌಡರು ಕಾರಬಲ್ಲರೆ…ಚಿರತೆಗ ಜಾತಿ ಇದೆಯೆ..

Comment here