ತುಮಕೂರು ಲೈವ್

ಕಾನೂನು ಸೇವಾ ಪ್ರಾಧಿಕಾರ ಸದಸ್ಯರು ಉತ್ತಮ ಕೆಲಸ ಮಾಡಬೇಕು: ನ್ಯಾಯಾದೀಶ ಸಂಗ್ರೇಶಿ

ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಸ್.ರಮೇಶ್ ಮಾತನಾಡಿದರು

Publicstory


Tumkuru:: ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ಗುರುತಿಸುವಂತಹ ಮಹತ್ವ ಪೂರ್ಣ ಕೆಲಸಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅರೆಕಾಲಿಕ ಸ್ವಯಂ ಸೇವಕರು ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾ ಪ್ರಧಾ‌ನ ನ್ಯಾಯಾದೀಶರಾದ ಜಿ.ಎಸ್.ಸಂಗ್ರೇಶಿ ಕರೆ ನೀಡಿದರು.


ಧರ್ಮ, ಕರ್ಮದ ವ್ಯಾಖ್ಯಾನ

ವಿಶೇಷ ಉಪನ್ಯಾಸ ನೀಡಿದ ತುಮಕೂರಿನ ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ್ ಅವರು ಮಹಾಭಾರತದ ಧರ್ಮ, ಕರ್ಮಗಳ ವ್ಯಾಖ್ಯಾನದ ಮೂಲಕ ಸಂವಿಧಾನದ ತಳಹದಿಯ ಬಗ್ಗೆ ಮನೋಜ್ಞವಾಗಿ ಮಾತನಾಡಿದರು.
ಮಹಭಾರತದಲ್ಲಿ ಧರ್ಮ ಬಿಟ್ಟು ನಡೆಯಲಿಲ್ಲ. ಆಗ ಧರ್ಮವೇ ಸಂವಿಧಾನವಾಗಿತ್ತು. ಧರ್ಮದ ಆಧಾರದಲ್ಲಿ ಕರ್ಮ ಅಂದರೆ ಕೆಲಸ ಮಾಡುತ್ತಿದ್ದರು. ಈಗ, ಸಂವಿಧಾನವೇ ಒಂದು ಧರ್ಮ. ಸಂವಿಧಾನ ಹೇಳಿರುವಂತೆ ನಾವುಗಳೆಲ್ಲ ಕರ್ಮ ಮಾಡಬೇಕು ಎಂದರು.
ಕಲ್ಯಾಣ ರಾಜ್ಯದ ತಳಹದಿ ರೂಪಿಸುವಂತ ಕೆಲಸವನ್ನು ಕಾನೂನು ಸೇವಾ ಪ್ರಾಧಿಕಾರ ಮಾಡಬೇಕು. ಕಲ್ಯಾಣ ರಾಜ್ಯದ ಚಾಲನೆಯೇ ಅದರ ಉದ್ದೇಶವಾಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಆಯೋಜಿಸಿದ್ದ ಅರೆಕಾಲಿಕ ಸ್ವಯಂ ಸೇವಕರಿಗೆ (plv) ಅಭಿಶಿಕ್ಷಣ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಇಲ್ಲಿ‌‌ ನೀವುಗಳು ಚೆನ್ನಾಗಿ ಕೆಲಸ ಮಾಡಿದರೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ನಿಮ್ಮನ್ನು ಗುರುತ್ತಿಸುತ್ತದೆ. ಸೇವಾ ಪ್ರಾಧಿಕಾರವು ಬಡಜನರ ಮನೆ ಬಾಗಿಲಿಗೆ ಕಾನೂನು ತಲುಪಿಸುವ, ಅವರ ಕಣ್ಣೀರೊರೆಸುವ ಕೆಲಸ ಮಾಡುತ್ತಿದೆ ನ್ಯಾಯಾದೀಶರಾದ ಜಿ.ಎಸ್.ಸಂಗ್ರೇಶಿ‌ ಎಂದರು.

ಜಿಲ್ಲಾ ನ್ಯಾಯಾದೀಶರಾದ‌ ಸುಧೀಂದ್ರನಾಥ್ ಅವರು ಸಂವಿಧಾನದ ಪೀಠಿಕೆ, ಮೂಲ ತತ್ವಗಳು,‌ರಾಜನಿರ್ದೇಶಕ ತತ್ವಗಳು, ಮೂಲ ಉದ್ದೇಶಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.

ಸಂವಿಧಾನದ ಪೀಠಿಕೆ, ಪ್ರಸ್ತಾವನೆಯನ್ನು ಸರಿಯಾಗಿ ತಿಳಿದುಕೊಂಡರೆ ಸಂವಿಧಾನ ತಿಳಿದಂತೆಯೇ ಆಗುತ್ತದೆ. ಸಂವಿಧಾನದ ಶ್ರೇಷ್ಠತೆಯನ್ನು ಒತ್ತಿ ಹೇಳಿದರು.

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್, ಸೂಫಿಯಾ ಕಾನೂನು ಕಾಲೇಜಿನ ಉಪ ಪ್ರಾಂಶುಪಾಲರಾದ ಓಬಣ್ಣ, ವಕೀಲೆ ಆಶಾ, ಪ್ರಾಂಶುಪಾಲ ಸಿದ್ದಲಿಂಗಪ್ಪ ಹಾಜರಿದ್ದರು.

Comment here