ಜಸ್ಟ್ ನ್ಯೂಸ್

ಕಾರ್ಮಿಕರಿಗೆ ಆಹಾರ ಕಿಟ್ ನಲ್ಲೂ ಪಕ್ಷಪಾತ: ಬಿಜೆಪಿ, ಸಿಪಿಎಂ ತಿಕ್ಕಾಟ

publicstory. in


Tumkuru:: ಕೋವಿಡ್ ಲಾಕ್ಡೌನ್ ಸಂತ್ರಸ್ತ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರು ಹಾಗು ಇತರೆ ಅಸಂಘಟಿತರಿಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿತರಿಸಲಾಗಿದೆ ಎಂದು ಪ್ರತಿಪಾದಿಸಲಾಗುತ್ತಿರುವ ಆಹಾರ ಕಿಟ್ ವಿತರಣೆ ಕುರಿತು ಸಮಗ್ರ ತನಿಖೆಗೆ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ಸ೯ವಾದಿ) ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ರಾಜ್ಯ ಸಕಾ೯ರವನ್ನು ಒತ್ತಾಯಿಸಿವೆ.

ಹಲವೆಡೆ ಅಹ೯ ಕಟ್ಟಡ ಕಾಮಿ೯ಕರಿಗೆ, ವಲಸೆ ಕಾಮಿ೯ಕರಿಗೆ, ಮತ್ತಿತರೆ ಅಸಂಘಟಿತ ಕಾಮಿ೯ಕರಿಗೆ ಆಹಾರ ಕಿಟ್ ಸಿಕ್ಕಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿಗಳ ಆದೇಶದಂತೆ ಕನಾ೯ಟಕ ರಾಜ್ಯ ಕಟ್ಟಡ ಮತ್ತು ಇತರೆ ನಿಮಾ೯ಣ ಕಾಮಿ೯ಕರ ಸಾಮಾಜಿಕ ಭದ್ರತಾ ಮಂಡಳಿಯ ನಿಧಿಯಿಂದ ಸಿದ್ಧ ಪಡಿಸಿದ್ದ 60 ಸಾವಿರ ಆಹಾರ ಕಿಟ್ ಗಳನ್ನು ಬಿಬಿಎಂಪಿಗೇ ಮಂಡಳಿ ನೀಡಿದೆ. ಅವುಗಳನ್ನು ಯಾರಿಗೆ ವಿತರಿಸಲಾಗಿದೆ ಎಂದು ಇದುವರೆಗೂ ಪಟ್ಟಿ ಬಿಡುಗಡೆ ಮಾಡಿಲ್ಲ ಎಂದು ದೂರಿದೆ.

ಹಲವೆಡೆ ಸ್ಥಳೀಯ ಆಡಳಿತಾರೂಡ ಬಿಜೆಪಿಯ ಕಾಪೋ೯ರೇಟರ್ಗಳು ಆಹಾರ ಕಿಟ್ ಕೇಳುವ ಕಾಮಿ೯ಕರಿಂದ ಮತದಾರರ ಗುರುತಿನ ಚೀಟಿ ಕೇಳುತ್ತಿರುವ ದೂರುಗಳು ಬರುತ್ತಿವೆ. ವಲಸೆ ಕಾಮಿ೯ಕರು ತಮ್ಮದೇ ಮಂಡಳಿಯ ಹಣದಿಂದ ತಮಗೆ ಸಿಗಬೇಕಿದ್ದ ಆಹಾರ ಕಿಟ್ ಗಳು ತಮಗೆ ಸಿಗದೆ ವಂಚಿತರಾಗಿದ್ದಾರೆ. ಆದರೆ ಸ್ಥಳೀಯ ಬಿಜೆಪಿಯ ಕಾಪೋ೯ರೇಟರ್ಗಳು ಮಂಡಳಿಯ ನಿಧಿಯ ಆಹಾರ ಕಿಟ್ ಗಳನ್ನು ಕಟ್ಟಡ ಕಾಮಿ೯ಕರಲ್ಲದ ತಮಗೆ ಮತ ನೀಡಿದವರಿಗೆ ನೀಡುತ್ತಿರುವ ದೂರುಗಳು ಕೇಳಿಬರುತ್ತಿವೆ ಎಂದು ಆಪಾದಿಸಿದೆ.

ರಾಜ್ಯ ಹೈಕೋಟಿ೯ನ ಮಧ್ಯ ಪ್ರವೇಶದಿಂದಾಗಿ ಹಾಗು ಮಾಧ್ಯಮಗಳಲ್ಲಿ ಸುದ್ದಿಯಾದ ಬಿಜೆಪಿಯ ಶಾಸಕರು ತಮ್ಮ ಸ್ಟಿಕ್ಕರ್ಸ ಅಂಟಿಸಿ ಮಂಡಳಿಯ ಆಹಾರ ಕಿಟ್ ಗಳ ವಿತರಣೆ ಮಾಡಿದ ಕುರಿತು ಬಂದ ಟೀಕೆಗಳಿಂದಾಗಿ ಬಿಬಿಎಂಪಿ ಪೂವ೯ ವಲಯದಲ್ಲಿ ಮಾತ್ರ ಕೆಲವು ಕಾಮಿ೯ಕರಿಗೆ ವಿತರಿಸಲಾಗಿದೆ.

ಉಳಿದಂತೆ ಇತರೆಡೆಗಳಲ್ಲಿ ಅಹ೯ರಿಗೆ ಆಹಾರ ಕಿಟ್ಗಳು ತಲುಪಿಲ್ಲ. ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ 1.39 ಲಕ್ಷ ಆಹಾರ ಕಿಟ್ ಗಳನ್ನು ವಿಕೋಪ ಪರಿಹಾರ ನಿಧಿಯ ಹಣದಿಂದ ವಿತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಮಿ೯ಕ ಸಂಘಟನೆಗಳ ಪ್ರತಿನಿಧಿಗಳು ಮಂಡಳಿಯ ಸಿದ್ದ ಆಹಾರ ವಿತರಣೆ ಮಾಡುತ್ತಾ ಆಹಾರ ಕಿಟ್ ಗಳು ಸಿಗದ ಕಟ್ಟಡ ಕಾಮಿ೯ಕರ ಪಟ್ಟಿಯನ್ನು ಮಾಡುತ್ತಿದ್ದಾಗ ಯಡಿಯೂರು ವಾಡ್೯ನ ಮಾಜಿ ಕಾಪೋ೯ರೇಟರ್ ಒಬ್ಬರು ಕಾಮಿ೯ಕ ಸಂಘಟನೆಯ ಪ್ರತಿನಿಧಿಗೆ ಬೆದರಿಕೆ ಒಡ್ಡಿ ಪಟ್ಟಿಯನ್ನು ಹರಿದು ಹಾಕಿದ್ದಾರೆ.
ಪರಿಹಾರ ಕಾಯ೯ಕ್ಕೆ ತೊಡರಾಗುತ್ತಿದ್ದಾರೆ. ಇಂತಹ ಗುಂಡಾ ಪ್ರವೃತ್ತಿಯನ್ನು ಸಿಪಿಐ(ಎಂ) ಖಂಡಿಸುತ್ತದೆ ಎಂದು ಸಿಪಿಎಂ ಬೆಂಗಳೂರು ದಕ್ಷಿಣ ಘಟಕದ ಕಾರ್ಯದರ್ಶಿ ಕೆ.ಎನ್.ಉಮೇಶ್ ಹೇಳಿದ್ದಾರೆ.

Comment here