ತುಮಕೂರು ಲೈವ್

ಕಾರ್ಯಕರ್ತರಿಗಾಗಿ ‘ಜನತಾ ಕಾರ್ಯಾಲಯ’: ಮಾಜಿ ಶಾಸಕ ಸುರೇಶಗೌಡ

Publicstory


Tumakuru: ತುಮಕೂರು ಗ್ರಾಮಾಂತರದ ನನ್ನ ಕ್ಷೇತ್ರದ ಜನರೇ ನನ್ನ ಜೀವಾಳ. ಅವರ ಸೇವೆಗಾಗಿ ನಾನು ಸದಾ ಬದ್ಧ. ಹೀಗಾಗಿಯೇ ಜನರ ಸಂಪರ್ಕಕ್ಕೆ ಯಾವಾಗಲೂ ಲಭ್ಯವಾಗುವಂತೆ ಕಾರ್ಯಾಲಯವನ್ನು ನಿರ್ಮಿಸುತ್ತಿರುವುದಾಗಿ ಮಾಜಿ ಶಾಸಕ ಬಿ. ಸುರೇಶ್ ಗೌಡರು ತಿಳಿಸಿದರು.

ಮಂಗಳವಾರ ಬಾಣಾವರ ಗೇಟ್ ಬಳಿ ಜನತಾ ಕಾರ್ಯಾಲಯಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಕ್ಷೇತ್ರದ ಜನರೊಟ್ಟಿಗೆ ಯಾವಾಗಲು ಇರಬೇಕೆಂಬುದು ನನ್ನ ಆಸೆ.
ಜನರು ಯಾವಾಗಲೂ ನೆನಪಿಟ್ಟುಕೊಳ್ಳು ವಂಥ ಸೇವೆ ಮಾಡಬೇಕೆಂಬುದು ನನ್ನ ಗುರಿಯಾಗಿದೆ. ಕ್ಷೇತ್ರ ಸಾಮಾಜಿಕವಾಗಿ, ಆರ್ಥಿಕವಾಗಿ ಮುನ್ನಡೆಯಬೇಕು. ಜನತೆಗೆ ಒಳ್ಳೆಯ ವಿದ್ಯಾಭ್ಯಾಸ, ಶಿಕ್ಷಣ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬುದೇ ನನ್ನ ಗುರಿ ಎಂದರು.

ಕುಡಿಯಲು ಹೇಮಾವತಿ ನೀರು, ಒಳ್ಳೆಯ ಶಿಕ್ಷಣ, ಒಳ್ಳೆಯ ರಸ್ತೆ, ಒಳ್ಳೆಯ ಆರೋಗ್ಯ ಇವೇ ನನ್ನ ಗುರಿ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶಿವಕುಮಾರ್ ಮಾತನಾಡಿ ಮೋಜು ಮಸ್ತಿಗಾಗಿ ಕಚೇರಿ ಮಾಡುವುದಲ್ಲ ಜನರ ಸೇವೆಗಾಗಿ ಇರಬೇಕು ಎಂದು ಹೇಳುತ್ತ ಪರೋಕ್ಷವಾಗಿ ಶಾಸಕ ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು .

ಮೋಜು ಮಸ್ತಿ ಮಾಡಿಸುತ್ತಾ ಯುವಕರನ್ನು ಹಾಳು ಮಾಡಬಾರದು. ಇದರಿಂದ ಕುಟುಂಬಗಳು, ಸಮಾಜವು ಹಾಳಾಗುತ್ತದೆ. ಜನರ ಅಭಿವೃದ್ಧಿಗಾಗಿ ನಾವು ದುಡಿಯಬೇಕಾಗಿದೆ. ಸುರೇಶ್ ಗೌಡರು ಜನರ ಅಭಿವೃದ್ಧಿಗಾಗಿ ಕೆಲಸ ಮಾಡುವ, ದುಡಿಯುವ ನಾಯಕರಾಗಿದ್ದಾರೆ ಎಂದರು .

ಈ ಸಂದರ್ಭದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಿ. ಶಂಕರ್, ಜಿ.ಪಂ,ಮಾಜಿ ಸದಸ್ಯ ಗೂಳೂರುಶಿವಕುಮಾರ್,ತಾಲ್ಲೂಕು ಪ್ರಧಾನ ಕಾರ್ಯದರ್ಶಿಗಳಾದ ರಘುನಾಥಪ್ಪ, APMC ಅಧ್ಯಕ್ಷರಾದ ಉಮೇಶ್ ಗೌಡ, ಮುಖಂಡರಾದ ಸಿದ್ದೇಗೌಡ, ಹೊಳಕಲ್ ಗ್ರಾ,ಪಂಚಾಯತ್ ಅಧ್ಯಕ್ಷೆ ಕಲ್ಪನ, ತಾಲ್ಲೂಕು & ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರು ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ನೂರಾರು ಜನ ಕಾರ್ಯಕರ್ತ ಬಂದುಗಳು ಉಪಸ್ಥಿತರಿದ್ದರು.

Comment here