ತುಮಕೂರು: ಬೆಂಗಳೂರಿನ ಸಾದಿಕ್ ಲೇಔಟ್ ನಲ್ಲಿ ಕರೊನಾ ಸಮೀಕ್ಷೆಗೆ ಹೋಗಿದ್ದಾಗ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಆಶಾ ಕಾರ್ಯಕರ್ತೆ, ಹೆಗಡೆ ನಗರದ ಕೃಷ್ಣವೇಣಿ ಮೇಲೆ ಸಾರಾಯಿ ಪಾಳ್ಯದ ಸಾದಿಕ್ ಲೇಔಟ್‌ನಲ್ಲಿ ಹಲ್ಲೆಗೆ ಯತ್ನಿಸಿದದ್ದರು.
ಆರೋಗ್ಯ ಇಲಾಖೆ ಸಿಬ್ಬಂದಿ ಮುನಿರಾಜು ಗುರುವಾರ ದೂರು ನೀಡಿದ್ದಾರೆ. ಈ ವೇಳೆ ಜಿಲ್ಲಾ ಆರೋಗ್ಯ ಅಧಿಕಾರಿ ಶ್ರೀನಿವಾಸ್ ಅವರು ಕೃಷ್ಣವೇಣಿ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದರು.
ಆರೋಗ್ಯ ಕಾರ್ಯಕರ್ತರು ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಂದ ಮನೆ ಮನೆಗೆ ತೆರಳಿ ಆರೋಗ್ಯ ಸಮೀಕ್ಷೆ ನಡೆಸುತ್ತಿದ್ದಾರೆ. ಬುಧವಾರ ಹೋಗಿದ್ದಾಗ ಮಸೀದಿಯ ಧ್ವನಿವರ್ಧಕದಿಂದ ‘ಆರೋಗ್ಯ ಕಾರ್ಯಕರ್ತೆಯರಿಗೆ ಯಾವುದೇ ಮಾಹಿತಿ ನೀಡದೆ, ಓಡಿಸಿ‘ ಎಂದು ಕೂಗಿಸಲಾಗಿತ್ತು. ಆಗ ಸುತ್ತುವರಿದ ಕೆಲವರು ಕೃಷ್ಣವೇಣಿ ಅವರ ಮೊಬೈಲ್ ಕಸಿದುಕೊಂಡು ಸಮೀಕ್ಷೆಯ ಕಾಗದ ಪತ್ರ ಹರಿದು ಹಾಕಿದ್ದರು.
Comment here