ತುಮಕೂರು ಲೈವ್

ಕೊರೊನಾ ನಡುವೆಯೂ ಸ್ವಚ್ಚತಾ ಮೂಲ ಮಂತ್ರ

Publicstory.in


ತುಮಕೂರು: ರಾಷ್ಟ್ರಪಿತ ಮಹಾತ್ಮ‌ಗಾಂಧಿ ಬ್ಯಾರಿಸ್ಟರ್ ಪದವಿ ಪಡೆದು ವಾಪಸ್ ಇಂಡಿಯಾಗೆ ಬಂದ ಗಾಂಧೀಜಿ ಕಾಂಗ್ರೆಸ್ ಕಚೇರಿ ಕಕ್ಕಸಿನ ಗುಂಡಿ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛಭಾರತಕ್ಕೆ ಮೊದಲ ಮುನ್ನುಡಿ ಬರೆದವರು ಅವರು.ಓಣಿ ಓಣಿ ತಿರುಗಿ ಮಲದ ಗುಂಡಿಗಳನ್ನು ಸ್ವಚ್ಛಗೊಳಿಸುತ್ತಿದ್ದರು. ಬೀದಿಗಳನ್ನು ಗುಡಿಸುತ್ತಿದ್ದರು. ಆ ಮೂಲಕ ಜನರಿಗೆ ಸ್ವಚ್ಛತೆ ಮತ್ತು ಆರೋಗ್ಯದ ನಡುವೆ ಇರುವ ನಂಟನ್ನು ಹೇಳುತ್ತಿದ್ದರು.ಈ ಸಲದ ಗಾಂಧಿ ಜಯಂತಿ ಕೊರೊನಾದ ಕಾರಣ ಕಳೆಗುಂದಿದೆ. ಆಸ್ಪತ್ರೆಗಳೆಂದರೆ ಸಾಕು ಜನರು ಹೆದರುತ್ತಿದ್ದಾರೆ. ಆಸ್ಪತ್ರೆ ಹತ್ತಿರ ಬಂದರೂ ಕೊರೊ‌ನಾ ಬಂದೇ ಬಿಡುತ್ತೇ ಎಂಬ ಭಯದಲ್ಲಿ ಬರಲು ಹೆದರುತ್ತಾರೆ.ಇನ್ನೂ ಡಾಕ್ಟರ್ ಗಳು ಯಾವ ರೋಗಿಗಳನ್ನು ಮುಟ್ಟೇ ನೋಡುತ್ತಿಲ್ಲ. ಮಾರುದ್ದ ದೂರ ನಿಲ್ಲಿಸಿ ಮಾತ್ರೆ ಬರೆದು ಸಾಗ ಹಾಕುತ್ತಿದ್ದಾರೆ. ಇದೇ ಕಾರಣಕ್ಕಾಗಿ ಜನರು ಆಸ್ಪತ್ರೆಗಿಂತ ಹಳೇ ಮೆಡಿಕಲ್ ಸ್ಟೋರೇ ವಾಸಿ. ಅವರಾದರೂ ಹತ್ತಿರದಿಂದಲೇ ಮಾತ್ರೆ ಕೊಡುತ್ತಾರೆ ಎಂದು ಮಾತಾಡುಕೊಳ್ಳುವಂತಾಗಿದೆ.ಇಂತಹ ಸ್ಥಿತಿಯಲ್ಲಿ ಅನೇಕ ಕೊರೊನಾ ರೋಗಿಗಳಿಗೆ ಮಾನಸಿಕವಾಗಿ ಧೈರ್ಯ ತುಂಬುತ್ತಿರುವ, ಸುರಕ್ಷಿತ ‌ಮಾರ್ಗ ಅನುಸರಿಸುತ್ತಾ ರೋಗಿಗಳನ್ನು ಮುಟ್ಟಿ ಧೈರ್ಯ ಹೇಳುತ್ತಾ ನಿರಂತರವಾಗಿ ರೋಗಿಗಳು ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಾರೆ ಎಂಬುದು ರೋಗಿಗಳಲ್ಲಿ ಭರವಸೆ ಮೂಡಿಸಿದೆ. ಚಿಕಿತ್ಸೆ ಜೊತೆಗೆ ಮಾನಸಿಕ ಧೈರ್ಯ ತುಂಬುವ ಕೆಲವೇ ವೈದ್ಯರಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಪ್ರಾಂಶುಪಾಲರಾದ ಡಾ. ರಜನಿ ಅವರು, ತುಮಕೂರು ಮತ್ತು ಗುಬ್ಬಿ ರೋಗಿಗಳಿಗೆ ವರದಾನವಾಗಿದ್ದಾರೆ. ರೋಗಿಗಳನ್ನು ದೇವರು ಎಂದು ನಂಬಿರುವ ಇವರು ಗಾಂಧಿ ಜಯಂತಿಗೆ ಆಸ್ಪತ್ರೆಯ ನರ್ಸಿಂಗ್ ಕಾಲೇಜಿನ ಸುತ್ತ ಬೆಳ್ಳಂ ಬೆಳಗ್ಗೆಯೇ ತಮ್ಮ ಸಿಬ್ಬಂದಿಯೊಂದಿಗೆ ಸ್ವಚ್ಛತೆಯಲ್ಲಿ ತೊಡಗಿ ಗಮನ ಸೆಳೆದರು.ಸುತ್ತಮುತ್ತಲ ಪ್ರದೇಶದ ಕಸ ಕಡ್ಡಿ ತೆಗೆದರು. ಸುತ್ತಲಿನ ವಾತಾವರಣ ಗಮನ ಸೆಳೆಯುವಂತೆ ಮಾಡಿದರು.ಅವರ ಕೆಲಸ ನೋಡಿ ಆಸ್ಪತ್ರೆಗೆ ಬಂದಿದ್ದ ರೋಗಿಗಳು, ಜನರು ಸಹ ಖುಷಿಪಟ್ಟರು.ಕೊರೊನಾ ಕಾಲದಲ್ಲಿ ಸ್ವಚ್ಛತೆಗೆ ಹೆಚ್ಚು ಒತ್ತು ಕೊಡಬೇಕು.‌ ಪರಿಸರ ಮತ್ತು ವೈಯಕ್ತಿಕ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ಒಬ್ಬರಿಗೊಬ್ಬರು ದೈಹಿಕ ಅಂತರ ಕಾಪಾಡಿಕೊಂಡು ಕೆಲಸ ಮಾಡಿದರೆ ಕೊರೊನಾವನ್ನು ತಡೆಯುವುದು ದೊಡ್ಡ ಕೆಲಸವೇನಲ್ಲ‌ ಎಂದರು. ಸ್ವಚ್ಚತೆಯೇ ಕರೋನಾ ತೊಡೆದುಹಾಕಲು ಮೂಲ ಮಂತ್ರವಾಗಿದೆ ಎಂದರು.ಒಳ್ಳೆಯ ಮಾಸ್ಕ್ ಧರಿಸುವುದು, ದೈಹಿಕ ಅಂತರ ಕಾಪಾಡಿಕೊಳ್ಳುವುದು,‌ರೋಗ ಲಕ್ಷಣ ಕಂಡು ಬಂದರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳುವುದು, ಧೈರ್ಯವಾಗಿ ಚಿಕಿತ್ಸೆ ಪಡೆಯುವ ಪಣವನ್ನು ಗಾಂಧೀಜಿ ಹೆಸರಲ್ಲಿ ಎಲ್ಲರೂ ತೊಡಬೇಕಾಗಿದೆ ಎಂದರು.

Comment here