ತುಮಕೂರು ಲೈವ್

ಕೊರೊನಾ ಪರೀಕ್ಷೆಗೆ ಬಂದ ಸಿಬ್ಬಂದಿ ಮೇಲೆ ತುಮಕೂರಿನಲ್ಲಿ ಗಲಾಟೆ

Tumkuru; ಮಂಡ್ಯದಿಂದ ತುಮಕೂರಿನ ದಿಬ್ಬೂರು ವಸತಿ ಸಮುಚ್ಚಯದ 17ನೇ ಬ್ಲಾಕ್ ನಲ್ಲಿ ಉಳಿದುಕೊಂಡಿದ್ದ ನಾಲ್ವರನ್ನು ಪರೀಕ್ಷೆಗಾಗಿ ಕರೆದುಕೊಂಡು ಹೋಗಲು ಬಂದ ವೈದ್ಯ ಸಿಬ್ಬಂದಿಯ ಮೇಲೆ ಗಲಾಟೆ ಮಾಡಿರುವ ಘಟನೆ ನಡೆದಿದೆ.

ಇಂದು ಬೆಳಗ್ಗೆ ಬಂದ ನಾಲ್ವರು 17ನೇ ಬ್ಲಾಕ್ ನ ಮನೆಯಲ್ಲಿ ಉಳಿದುಕೊಂಡಿದ್ದರು. ಈ ವಿಷಯವನ್ನು ಆರೋಗ್ಯ ಸಿಬ್ಬಂದಿಗೆ ತಿಳಿಸಲಾಯಿತು.

ಸ್ಥಳಕ್ಕೆ ಬಂದ ಆರೋಗ್ಯ ಸಿಬ್ಬಂದಿ ಮಂಡ್ಯದಿಂದ ಬಂದ ನಾಲ್ವರಿಗೆ ರಕ್ತಮಾದರಿ ಮತ್ತು ಗಂಟಲು ದ್ರವ ಸಂಗ್ರಹಿಸಲು ಜಿಲ್ಲಾಸ್ಪತ್ರೆಗೆ ಬರಬೇಕು ಎಂದು ಮನವಿ ಮಾಡಿದರು.

ಆಗ ಮಂಡ್ಯದಿಂದ ಬಂದವರ ನೆರವಿಗೆ ಬಂದ 30-40 ಮಂದಿ ವೈದ್ಯರ ಮೇಲೆ ಗಲಾಟೆ ಮಾಡಿದ್ದಾರೆ. ಅವರು ಪರೀಕ್ಷೆಗೆ ಏಕೆ ಬರಬೇಕು ಎಂದು ಪ್ರಶ್ನಿಸಿದ್ದಾರೆ.

ಇದರಿಂದ ಸಣ್ಣಮಟ್ಟ ಗಲಾಟೆ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮೊದಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆನಿರತರನ್ನು ಸಮಾಧಾನಪಡಿಸಿದರು ಎಂದು ಹೇಳಲಾಗಿದೆ.

ಪೊಲೀಸರು ಬಂದ ನಂತರ ನಾಲ್ವರನ್ನು ಕೊರೊನ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿದೆ. ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಮಂಡ್ಯದಿಂದ ಆ ನಾಲ್ವರು ಇಲ್ಲಿಗೇಕೆ ಬಂದರು ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Comment here