ತುಮಕೂರು ಲೈವ್

ಕೊರೊನಾ: ಮನೆ, ಮನೆ ಮುಂದೆ ಸೂರ್ಯನಿಗೆ ಕೈ ಮುಗಿದು ದೀಪ ಹಚ್ಚಿದ ಹಳ್ಳಿ ಜನರು…

Publicstory.in


Tumkuru: ಕೊರೊನಾ ಹೋಗಲೆಂದು, ಜನರಿಗೆ ಆರೋಗ್ಯ ಸಿಗಲೆಂದು ಹಾಗೂ ಸಾವು- ನೋವು ಸಂಭವಿಸಬಾರದೆಂದು ಕೋರಿ ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಮಂಗಳವಾರ ಸೂರ್ಯ ಉದಯಕ್ಕೆ ಸರಿಯಾಗಿ ಮನೆ ಸೂರ್ಯನಿಗೆ ಎದುರಾಗಿ ಮೂರು ಬಿಂದಿಗೆ ನೀರು ಸುರಿದುಕೊಂಡು ದೇವರಿಗೆ ದೀಪ ಹಚ್ಚಿದರು.

ಮನೆಯ ಗಂಡುಮಕ್ಕಳಿಗೆ, ಸಣ್ಣ ಹುಡುಗರಿಗೆ ಸ್ನಾನ ಮಾಡಿಸಿ ಪೂಜೆ ಸಲ್ಲಿಸಿದರು.

ತಿರುಪತಿಯ ದೇವರ ಸನ್ನಿಧಿಯ ದೀಪ ಆರಿದೆ ಎಂಬ ಸುದ್ದಿ ಸಹ ಹಬ್ಬಿದೆ. ಅದು ನಿಜವೊ, ಸುಳ್ಳೊ ಗೊತ್ತಿಲ್ಲ. ಸ್ನಾನ ಮಾಡಿ ದೀಪ ಹಚ್ಚುವಂತೆ ಹೇಳಿದರು. ನಾವಷ್ಟೇ ಅಲ್ಲ ನಮಗೆ ಗೊತ್ತಿರುವ ಎಲ್ಲ ಸಂಬಂಧಕರಿಗೂ ಹೇಳಿದ್ದೇವೆ. ಈ ಭಾಗದ ಎಲ್ಲ ಊರುಗಳಲ್ಲೂ ದೀಪ ಹಚ್ಚಿದ್ದೇವೆ ಎಂದು ಗುಬ್ಬಿ ತಾಲ್ಲೂಕು ಕೆ.ಜಿ.ಟೆಂಪಲ್ ಸಮೀಪದ ಕೊಡಿಗೇನಹಳ್ಳಿಯ ಲೋಕೇಶ್ ಹೇಳಿದರು.

ದೇವರಿಗೆ ಪೂಜೆ ಮಾಡುವುದರಿಂದ ನಷ್ಟವೇನು‌ ಇಲ್ಲ. ಬಹುತೇಕರು ಮಾಡಿದ್ದಾರೆ.ದೇಶ, ಜಗತ್ತನ್ನು ಕಾಡುತ್ತಿರುವ ಈ ಮಹಾಮಾರಿ ಹೋಗಲಾಡಿಸಲು ದೇವರ ಶಕ್ತಿಯೇ ಬೇಕಾಗಿದೆ.ಜನರು ದಯಮಾಡಿ ಮನೆಯಲ್ಲಿಯೇ ಇರಬೇಕು. ಆಚೆ ಬರಬಾರದು ಎಂದು ಸಿ.ಎಸ್. ಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ್ಯೆ ಗೀತಾ ರಾಮಕೃಷ್ಣ ಹೇಳಿದರು.

Comment here