ತುಮಕೂರು ಲೈವ್

ಕೊರೊನಾ ಸೋಂಕಿತ ವ್ಯಕ್ತಿ ಶವ ಹಸ್ತಾಂತರಕ್ಕೆ ಒತ್ತಡ ಬಹಿರಂಗಕ್ಕೆ ಸುರೇಶಗೌಡ ಆಗ್ರಹ

ತುಮಕೂರು: ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ರಕ್ತ, ಗಂಟಲು ಮಾದರಿ ಪರೀಕ್ಷಾ ವರದಿ ಬರುವ ಮೊದಲೇ ಶವ‌ವನ್ನು ಕುಟುಂಬಕ್ಕೆ ತರಾತುರಿಯಲ್ಲಿ ಹಸ್ತಾಂತರಿಸಿದ ಹಿಂದೆ ಪ್ರಬಲ ಒತ್ತಡ ಇರಬೇಕು. ಹಾಗೆ ಒತ್ತಡ ಹಾಕಿದವರ ಹೆಸರನ್ನು ಜಿಲ್ಲಾಡಳಿತ, ಜಿಲ್ಲಾ ವೈದ್ಯರು ಹೇಳಬೇಕು ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಒತ್ತಾಯಿಸಿದರು.

https://youtu.be/m49uA9FMu68

ಸೋಂಕಿತರು ಅಥವಾ ಅನುಮಾನ ಬಂದ ಸಂದರ್ಭಗಳಲ್ಲಿ ವರದಿ ಬರುವ ಮೊದಲು ಶವ ಕೊಡಬಾರದು. ಶವವನ್ನು ಜನರಿಗೆ ಅಂತ್ಯ ಸಂಸ್ಕಾರಕ್ಕೆ ಕೊಡುವಂತಿಲ್ಲ. ಆದರೆ, ತರಾತುರಿಯಲ್ಲಿ ಶವ ನೀಡಿರುವ ಹಿಂದೇ ಒತ್ತಡವೇ ಕಾರಣ ಇರಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿಗೆ ಪತ್ರ ಬರೆಯುತ್ತೇನೆ. ಮುಖ್ಯಮಂತ್ರಿ ಅವರನ್ನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.

ಹಿರೇಹಳ್ಳಿಯಲ್ಲಿ ಆಹಾರದ ಕಿಟ್, ಮಾಸ್ಕ್ ವಿತರಿಸಿ ಮಾತನಾಡಿದ ಅವರು, ಈ ಘಟನೆಯಿಂದಾಗಿ ನಾಗವಲ್ಲಿ ಸುತ್ತಮುತ್ತಲ ಗ್ರಾಮಗಳಲ್ಲಿ ಭಯಗೊಂಡಿದ್ದಾರೆ. ಅಂತ್ಯಕ್ರಿಯೆ ನಡೆಸಿದ ಗ್ರಾಮವನ್ನು ಸಂಪೂರ್ಣವಾಗಿ ಸೀಲ್ಡ್ ಡೌನ್ ಮಾಡಬೇಕು. ಸುತ್ತಮುತ್ತಲ ಗ್ರಾಮಗಳ ಜನರ ರಕ್ತ ಮಾದರಿಯನ್ನು ಪರೀಕ್ಷಿಸಬೇಕು ಎಂದು ಒತ್ತಾಯಿಸಿದರು.

ನನ್ನ ಮಗ ಸಹ ಹೊರದೇಶದಿಂದ ಬಂದಿದ್ದಾನೆ. ನಾನು, ನನ್ನ ಕುಟುಂಬ 21 ದಿನ ಮನೆ ಬಿಟ್ಟು ಹೊರಬರಲಿಲ್ಲ. ನಂತರ ಪರೀಕ್ಷೆಯಲ್ಲಿ ನೆಗಟಿವ್ ಬಂದ ಬಳಿಕ ಕ್ಷೇತ್ರಕ್ಕೆ ಕಾಲಿಟ್ಟೆ ಎಂದರು.

ನೆಮ್ಮದಿಯಾಗಿದ್ದ ಗ್ರಾಮಾಂತರಲ್ಲಿ ಜಿಲ್ಲಾಡಳಿತದ ಕಾರಣದಿಂದಾಗಿ ಭಯ ಆವರಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತುಮಕೂರು ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಊರ್ಡಿಗೆರೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಹಿರೇಹಳ್ಳಿ ಗ್ರಾಮ ಪಂಚಾಯ್ತಿಯ ನಂದಿಹಳ್ಳಿ, ಚಿಕ್ಕಹಳ್ಳಿ, ಕೋಳಿಹಳ್ಳಿ, ಹಾಗೂ ಸಂಗಾಪುರ ಗೊಲ್ಲರಹಟ್ಟಿ ಗ್ರಾಮಗಳ ಪ್ರತಿ ಮನೆ ಮನೆಗಳಿಗೆ ಉಚಿತ ಮಾಸ್ಕ್, ಅಕ್ಕಿ, ಬೇಳೆ, ಗೋದಿಹಿಟ್ಟು, ಉಪ್ಪು, ಅಡುಗೆ ಎಣ್ಣೆ ಹಾಗೂ ರವೆ ಮುಂತಾದ ಆಹಾರ ಪದಾರ್ಥಗಳನ್ನು ಹೊಂದಿರುವ ಕಿಟ್ ನ್ನು ಬಿ, ಸುರೇಶ್ ಗೌಡರವರು ವಿತರಣೆ ಮಾಡಿದರು.

ಜನಗಳಿಗೆ ಮಹಾಮಾರಿ ಕರೋನ ರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಲಕ್ಷ್ಮೀಶ್, ಜಿಲ್ಲಾ ಪಂಚಾಯಯ್ತಿ ಸದಸ್ಯರು ಗಳಾದ ವೈ, ಎಚ್, ಹುಚ್ಚಯ್ಯ, ಗೂಳೂರು ಶಿವಕುಮಾರ್, ನರಸಿಂಹಮೂರ್ತಿ, ಊರುಕೆರೆ ಜಿಲ್ಲಾ ಪಂಚಾಯತ್ ಸದಸ್ಯರ ಯಜಮಾನರಾದ ಡಾ, ನಾಗರಾಜ್, ಗ್ರಾಮಾಂತರ ಬಿಜಿಪಿ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದೇಗೌಡರು,ಮಾಜಿ ಎಪಿಎಂಸಿ ಅಧ್ಯಕ್ಷರಾದ ಓಂ ನಮೋ ನಾರಾಯಣ, ಸುಧೀರಣ್ಣ, ತಾ ಪಂ ಅಧ್ಯಕ್ಷರಾದ ಗಂಗಾಂಜಿನಪ್ಪ, ತಾ ಪಂ ಉಪಾಧ್ಯಕ್ಷರಾದ ಶಾಂತಕುಮಾರ್, ತಾ ಪಂ ಸದಸ್ಯರಾದ ರಮೇಶ್,ಊರ್ಡಿಗೆರೆ ತಾ ಪಂ ಸದಸ್ಯರಾದ ರವಿಯಣ್ಣ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮೀದೇವಮ್ಮ ರಾಮಮೂರ್ತಿ, ಗ್ರಾಮ ಪಂ ಉಪಾಧ್ಯಕ್ಷರು, ಸದಸ್ಯರುಗಳಾದ ಕುಂಭಯ್ಯ, ವಿರುಪಣ್ಣ, ಸಣ್ಣಯ್ಯ,ಪೆಮ್ಮನಹಳ್ಳಿ ರಂಗಸ್ವಾಮಿ ಸಿದ್ದಮ್ಮ ಮುಖಂಡರಾದ ಚಂದ್ರಣ್ಣ, ಮಂಜುನಾಥ್, ರವಿಯಣ್ಣ, ಹೊನ್ನದಾಸೇಗೌಡರು,ಕೋಳಿ ಹಳ್ಳಿ ಅಂದಾನಪ್ಪ, ಮುಡಿಲಿಗಿರಿಯಪ್ಪ, ಪಾಪಯ್ಯ, ಶಿವಕುಮಾರ್, ಜಯಣ್ಣ, ಹನುಮಂತರಾಜು, ದಯಾನಂದ, ರಾಜೇಶ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಗಿರೀಶ್, ಸದಸ್ಯರಾದ ಮದನ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Comment here