ತುಮಕೂರು ಲೈವ್

ಕೊರೊ‌ನಾ: ಹಳ್ಳಿಗಳತ್ತ BSP‌ ಚಿತ್ತ…

ತುಮಕೂರು::ಜಿಲ್ಲೆಯ ಬಹುಜನ ಸಮಾಜ ಪಕ್ಷದ (BSP) ಪ್ರಧಾನ ಕಾರ್ಯದರ್ಶಿ J.C ರಂಗಧಾಮಯ್ಯ ಸಾರಥ್ಯದಲ್ಲಿ ಮಧುಗಿರಿ ತಾಲ್ಲೂಕು ಬಿಎಸ್ಪಿ ಪಕ್ಷದ ಘಟಕದ ವತಿಯಿಂದ ಐ ಡಿ ಹಳ್ಳಿ ಹೋಬಳಿ ಜನಕಲೋಟಿ ಗ್ರಾಮದಲ್ಲಿ ಹಂದಿಜೋಗಿ, ಹಕ್ಕಿಪಿಕ್ಕಿ ಸಮುದಾಯದ 25 ಕುಟುಂಬಗಳಿಗೆ ನೆರವು ನೀಡಲಾಯಿತು.

ಇದೇ ಗ್ರಾಮದ 75 ದಲಿತ ಕುಟುಂಬಗಳಿಗೂ‌ ಆಹಾರದ ಕಿಟ್ ವಿತರಿಸಲಾಯಿತು. ಲಾಕ್ ಡೌನ್ ಕಾರಣ ಈ ಕುಟುಂಬಗಳು ಸಂಕಷ್ಟದಲ್ಲಿದ್ದವು.

ಅಕ್ಕಿ, ಈರುಳ್ಳಿ, ಉಪ್ಪು ಹಾಗೂ ಮಾಸ್ಕ್ ಗಳನ್ನು ಇಡೀ ತುಮಕೂರು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಬಿಎಸ್ಪಿ ಪಕ್ಷದ ವತಿಯಿಂದ ವಿತರಿಸಲಾಯಿತು.

ಬಿಎಸ್ಪಿ ಪಕ್ಷವು ಒಂದು ರಾಜಕೀಯ ಪಕ್ಷವಾಗಿರದೇ ಇದು ಒಂದು ಸಾಮಾಜಿಕ ಪರಿವರ್ತನೆಯ ಚಳುವಳಿಯ ರಾಜಕೀಯ ಆಂದೋಲನವಾಗಿದೆ. ಅಂಬೇಡ್ಕರ್ ರವರು ಕನಸಿನಂತೆ ಬಹುಜನ ಸಮಾಜವು ಅಳುವ ಸಮಾಜವಾಗ ಬೇಕು ಎಂಬ ಕನಸನ್ನು ಈಡೇರಿಸಲು ದಾದಾಸಾಹೇಬ್ ಕಾನ್ಸಿರಾಮ್ ರವರು 1984 ರಲ್ಲಿ ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದರು. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ತತ್ವದ ಅಡಿಯಲ್ಲಿ ಪಕ್ಷ ಕೆಲಸ ಮಾಡುತ್ತಿದೆ ಎಂದು ರಂಗಧಾಮಯ್ಯ ಹೇಳಿದರು.

ತಾಲ್ಲೂಕು ಅಧ್ಯಕ್ಷರಾದ ಗೋಪಾಲ್, SDMC ಅಧ್ಯಕ್ಷರು ಚೌಡಪ್ಪ, ಜಯರಾಮಯ್ಯ ಶ್ರೀನಿವಾಸ, ಬೆಟ್ಟರಾಜು, ನವೀನ್ ಹಾಗೂ ಜಾನಿನಾಗರಾಜ್ ಜನಕಲೋಟಿ ಊರಿನ ಗ್ರಾಮಸ್ಥರು ಹಾಗೂ ಮುಖಂಡರು ಇದ್ದರು.

Comment here