ರಾಜ್ಯ

ಕೋವಿಡ್ನಿಂದ ಮೃತ ಪಟ್ಟ ಖಾಸಗಿ ಶಾಲಾ ಶಿಕ್ಷಕರ ಕುಟುಂಬಕ್ಕೆ ಪರಿಹಾರ

ಕೋವಿಡ್ನಿಂದ ಮೃತಪಟ್ಟ ಖಾಸಗಿ ಶಾಲಾ ಶಿಕ್ಷಕರ ಕುಟುಂಬಕ್ಕೆ 10 ಸಾವಿರ ನೀಡಲು ಚಿಂತನೆ : ಡಾ.ವೈ.ಎ.ನಾರಾಯಣಸ್ವಾಮಿ

ತುರುವೇಕೆರೆ: ಕೋವಿಡ್ನಿಂದ ಶಾಲೆಗಳು ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ ಮಕ್ಕಳು ಮೊಬೈಲ್ ದಾಸರಾಗಿದ್ದು, ಲಕ್ಷಾಂತರ ಮಂದಿ ಖಾಸಗಿ ಶಾಲಾ ಶಿಕ್ಷಕರು ಮತ್ತು ಸು.1 ಕೋಟಿಗೂ ಹೆಚ್ಚು ಮಕ್ಕಳ ಭವಿಷ್ಯ ಅತಂತ್ರಗೊಂಡಿದ್ದು ಇವೆಲ್ಲಕ್ಕೂ ಪರಿಹಾರವಾಗಿ ಆಗಸ್ಟ್ ಮೊದಲ ವಾರದಿಂದಲೇ ರಾಜ್ಯದ ಎಲ್ಲ ಶಾಲಾಗಳನ್ನು ತೆರೆಯಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ವಿದ್ಯಾರಣ್ಯ ಶಾಲಾ ಆವರಣದಲ್ಲಿ ಡಾ.ವೈ.ಎ.ನಾರಾಯಣಸ್ವಾಮಿ ಮತ್ತು ಚಿದಾನಂದ್ ಎಂ.ಗೌಡ ಸ್ನೇಹಿತರ ಬಳಗವು ಹಮ್ಮಿಕೊಂಡಿದ್ದ ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಆಹಾರ ಕಿಟ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.


ಬಿಜೆಪಿ ಸಕರ್ಾರ ಖಾಸಗಿ ಶಾಲಾ ಶಿಕ್ಷಕರ ಹಿತ ಕಾಪಾಡಲು ನ್ಯೂ ಎಜುಕೇಷ್ ಪಾಲಿಸಿಯಲ್ಲಿ ಕನಿಷ್ಠ ವೇತನ ಮತ್ತು ಸೇವಾ ಭದ್ರತೆ ನೀಡಲು ಹೆಚ್ಚಿನ ಚಿಂತನೆ ನಡೆಸಿದೆ. ಆಯುಷ್ಮಾನ್ ಭಾರತ್ ಕಾರ್ಡ್ನ್ನು ಸರ್ಕಾರ ಸಾಕಷ್ಟು ಜನರಿಗೆ ನೀಡಿದೆ. ಅದೇ ರೀತಿ ಖಾಸಗಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಉಚಿತ ಆರೋಗ್ಯ, ಚಿಕಿತ್ಸೆ ನೀಡುವ ಚಿಂತನೆಯನ್ನು ಮುಂದಿನ ದಿನಗಳಲ್ಲಿ ನಡೆಸಲಿದೆ.
ಕೋವಿಡ್ನಿಂದ ಸಾವನ್ನಪ್ಪಿದ ಖಾಸಗಿ ಶಾಲಾ ಶಿಕ್ಷಕರ ಮನೆಗೆ ಭೇಟಿ ನೀಡಿ, ಅವರಿಗೆ ಸಾಂತ್ವಾನ ಹೇಳಿ ಕನಿಷ್ಠ 10 ಸಾವಿರ ಹಣ ನೀಡುವ ಚಿಂತನೆಯನ್ನು ನಾನು ಮತ್ತು ಎಂ.ಎಲ್.ಸಿ ಚಿದಾನಂದ್ ಎಂ.ಗೌಡ ಇಬ್ಬರೂ ಒಟ್ಟಿಗೆ ನೀಡುವ ಭರವಸೆ ವ್ಯಕ್ತಪಡಿಸಿದರು.
ಕೋವಿಡ್ ವೇಳೆ ಎಲ್ಲ ರಾಜ್ಯಗಳಲ್ಲೂ ಶಿಕ್ಷಕರ, ನೌಕರರ ತಿಂಗಳ ವೇತನದಲ್ಲಿ ಅರ್ಧ ಹಣವನ್ನು ಕಟಾಯಿಸಿ ನೀಡಿವೆ. ಆದರೆ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪರು ನೌಕರರು ಮತ್ತು ಶಿಕ್ಷಕರ ಕುಟುಂಬಕ್ಕೆ ತೊಂದರೆಯಾಗದಂತೆ ಪೂರ್ಣ ಪ್ರಮಾಣದ ಸಂಬಳವನ್ನು ನೀಡಿದೆ. ಸರ್ಕಾರ ಇನ್ನು ಎರಡು ವರ್ಷ ಸುಭದ್ರವಾಗಿ ನಡೆಯಲಿದ್ದು ಶಿಕ್ಷಣಕ್ಕೆ, ಶಿಕ್ಷಕರಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದರು.
ವಿಧಾನ ಪರಿಷತ್ ಸದಸ್ಯ ಚಿಂದಾನಂದ್ ಎಂ.ಗೌಡ ಮಾತನಾಡಿ, ಕೋವಿಡ್ ವೇಳೆ ಖಾಸಗಿ ಶಾಲಾ ಶಿಕ್ಷಕರು ಮತ್ತು ಅವರ ಕುಟುಂಬ 17 ತಿಂಗಳು ಸಂಬಳವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದವು. ಇದನ್ನರಿತು. ನಾನು ಮತ್ತು ವೈ.ಎನ್.ನಾರಾಯಣಸ್ವಾಮಿ ಇಬ್ಬರೂ ಕನಿಷ್ಠ 25 ಸಾವಿರ ನೀಡಬೇಕೆಂದು ಶಿಕ್ಷಣ ಸಚಿವರು ಮತ್ತು ಸಿಎಂ ಅವರ ಬಳಿ ಕೇಳಿಕೊಂಡಾಗ ರಾಜ್ಯದಲ್ಲಿ ಆರ್ಥಿಕ ಸಂಕಷ್ಟ ಇರುವುದರಿಂದ 5 ಸಾವಿರ ನೀಡುವುದಾಗಿ ಒಪ್ಪಿಕೊಂಡರು. ಇದಕ್ಕೆ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಹೇಳಿದ ಅವರು, ಈಗಾಗಲೇ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಸು.15 ಸಾವಿರ ಖಾಸಗಿ ಶಾಲಾ ಶಿಕ್ಷಕರುಗಳಿಗೆ ಆಹಾರದ ಕಿಟ್ ವಿತರಿಸಲಾಗಿದೆ ಎಂದರು.
ಇದೇ ವೇಳೆ ನಿವೃತ್ತ ಶಿಕ್ಷಕರಾದ ಕೆ.ನಾಗರಾಜಪ್ಪ ಮತ್ತು ಭೈರಪ್ಪಾ ಅವರನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಮಾಯಣ್ಣಗೌಡ, ರೆಡ್ಡಿ, ವಕೀಲ ಧನಪಾಲ್, ವಿದ್ಯಾರಣ್ಯ ಶಾಲೆಯ ಆಡಳಿತಾಧಿಕಾರಿ ಜಯಣ್ಣ, ಇಂಡಿಯನ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಸ್.ನಾಗರಾಜಪ್ಪ, ಪಾಪಣ್ಣ, ಚಂದ್ರಶೇಖರ್ ಇದ್ದರು.

Comment here