ತುಮಕೂರು ಲೈವ್

ಕ್ರಿಯಾಜನ್ ಅಗ್ರಿಬಯೋಟೆಕ್ ನಲ್ಲಿ ರೈತರಿಗೆ ಹೇಳಿದ್ದೇನು?

Publicstory


ಗುಬ್ಬಿ: ರೈತರು ಕೃಷಿ ಮಾಡುವಲ್ಲಿ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಸಮಪ್ರಮಾಣದಲ್ಲಿ ಬಳಸುವುದರಿಂದ ಕೃಷಿಯಲ್ಲಿ ಹೆಚ್ಚು ಲಾಭ ಕಾಣಬಹುದು ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಸ್.ರಮೇಶ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಕ್ರಿಯಾಜನ್ ಅಗ್ರಿ ಬಯೋಟೆಕ್ ಪ್ರೆöÊ.ಲಿ ವತಿಯಿಂದ ಏರ್ಪಡಿಸಿದ್ದ ರೈತ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರಗಳನ್ನು ಬಳಸುತ್ತಿದ್ದೇವೆ ಎಂದರು.

ಇದರಿಂದ ಭೂಮಿಯು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ರೈತರು ಬೆಳೆಗಳಿಗೆ ಅಗತ್ಯವಾದ ಪೋಷಕಾಂಶಗಳ ಜೊತೆಗೆ ಸಾವಯವ ಗೊಬ್ಬರಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಿ ಉತ್ತಮ ಉತ್ಪನ್ನ ಬೆಳೆಯಲು ಮುಂದಾಗಬೇಕು ಎಂದರು.

ಕಾರ್ಯಗಾರದಲ್ಲಿ ಕ್ರಿಯಾಜನ್ ಕಂಪನಿಯ ಜಿಲ್ಲಾ ಮಾರುಕಟ್ಟೆ ವ್ಯವಸ್ಥಾಪಕ ಮಲ್ಲಿಕಾರ್ಜುನಪ್ಪ ಜಿ.ಎನ್ ಮಾತನಾಡಿ, ಕ್ರಿಯಾಜನ್ ಕಂಪನಿಯು ರೈತರಿಗೆ ಸಾವಯವ ಉತ್ಪನ್ನಗಳನ್ನು ನೀಡುತ್ತಿದೆ. ರೈತರಿಗೆ ಎಲ್ಲಾ ಬೆಳೆಗಳಿಗೆ ಬೇಕಾಗುವ ಸಾವಯವ ಹರಳ ಮತ್ತು ದ್ರವರೂಪದ ಗೊಬ್ಬರಗಳು ದೊರೆಯುತ್ತವೆ, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಇದೇ ಸಂದರ್ಭದಲ್ಲಿ ಕ್ರಿಯಾಜನ್ ಕಂಪನಿವಯಿAದ ಲಕ್ಕಿಕೊಪಾನ್ ಡ್ರಾದಲ್ಲಿ ಆಯ್ಕೆಯಾದ ರೈತರಿಗೆ ನಾನಾ ಕೃಷಿ ಪರಿಕರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಕೃಷಿ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಕಾರ್ಯದರ್ಶಿ ಎಸ್.ವಿ. ಶ್ರೀನಾಥ್, ನಿರ್ದೇಶಕರಾದ ಎಸ್.ಟಿ.ಆಂಜಿನಪ್ಪ, ಕ್ರಿಯಾಜನ್ ಕಂಪನಿಯ ಬೆಸಾಯ ಶಾಸ್ತçಜ್ಞ ಸುನಿಲ್‌ಕುಮಾರ್ ಎಸ್.ಜಿ, ಮಾರುಕಟ್ಟೆ ವಿಸ್ತರಾಣಾಧಿಕಾರಿ ಕಿರಣ್.ಎಸ್.ಇ, ಮಾರಾಟ ಪ್ರತಿನಿದಿ ನರಸಿಂಹರಾಜು ಎಲ್.ಪಿ.ಶ್ರೀಧರ್ ಹಾಗೂ ರೈತರು ಉಪಸ್ಥಿತರಿದ್ದರು.

Comment here