ತುಮಕೂರು ಲೈವ್

ಗೋಮಾಂಸ‌ ಮಾರಾಟ: ಬಂಧನ

Publicstory


ಕೊರಟಗೆರೆ: ಪಟ್ಟಣದ ಮಖಬುಲ್ ಸರ್ಕಲ್ ನ ಚಿಕ್ಕ ಮಸೀದಿ ಬಳಿ ಖಸಾಯಿ ತೆರೆದು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಪೊಲೀಸರು ದಾಳಿ ನಡೆಸಿ ಆರು ಜನ ಆರೋಪಿಗಳ ವಿರುದ್ಧ ಕೇಸು ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಪಟ್ಟಣದ ಮಖಬಲ್ ಸರ್ಕಲ್ ಹತ್ತಿರ‌ ಇರುವ ಚಿಕ್ಕ ಮಸೀದಿ ಬಳಿ ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲಾಗುತ್ತಿದೆ ಎಂದು ಗೌಗ್ಯಾನ್ ಫೌಂಡೇಷನ್‌ ಸದಸ್ಯರು ನೀಡಿದ ದೂರಿನ ಮೇರೆಗೆ ಕೊರಟಗೆರೆ ಸಿಪಿಐ ಎಸ್.ಸಿದ್ದರಾಮೇಶ್ವರ ನೇತೃತ್ವದ ಪೊಲೀಸರ ತಂಡ ಅಂಗಡಿ ಮೇಲೆ ಭಾನುವಾರ ಬೆಳಗ್ಗೆ ದಾಳಿ ನಡೆಸಿದರು.

ಗೋಮಾಂಸ ಮಾರಾಟ ಮಾಡುತ್ತಿದ್ದ ಮುಭಾರಕ್, ಫಕ್ರುದ್ದೀನ್ ಸಾಬ್, ಆಸಿಫ್, ಸಮಿ‌ಉಲ್ಲಾ, ನಿಸಾರ್ ಅಹಮದ್, ಉಸ್ಮಾನ್ ಎಂಬುವರನ್ನ ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 500 ಕೆಜಿ ಗೋಮಾಂಸ ಹಾಗೂ ಕಟಾವಿಗೆ ತಂದಿದ್ದ‌ 5 ಗೋವುಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ದೂರು ಆಧರಿಸಿ ದಾಳಿ ನಡೆಸಿ 6 ಜನರನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ ಎಂದು ಸಿಪಿಐ ಎಸ್.ಸಿದ್ದರಾಮೇಶ್ವರ ತಿಳಿಸಿದರು.

ದಾಳಿಯಲ್ಲಿ ಪಿಎಸ್ಐ ಮಂಜುಳ, ಪ್ರೊಬೆಷನರಿ ಪಿಎಸ್ಐ ರಾಜೇಶ, ಸಿಬ್ಬಂಧಿಗಳಾದ ರಂಗನಾಥ, ದಯಾನಂದ, ದೊಡ್ಡಲಿಂಗಯ್ಯ, ವಿಷ್ಣುಕದಂಬ, ರಾಜಶೇಖರ, ವೆಂಕಟೇಶ, ಶಿವಕುಮಾರ, ಮಲ್ಲೇಶ್, ಗಂಗಾಧರ್ ಕಾರ್ಯಾಚರಣೆ ನಡೆಸಿದರು.

Comment here