ಜಸ್ಟ್ ನ್ಯೂಸ್

ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಿ; ಮೋಹನ್ ಭಾಗವತ್

ಪಾವಗಡ:  ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದು ಆರ್.ಎಸ್.ಎಸ್. ಸರ ಸಂಚಾಲಕ ಮೋಹನ್ ಭಾಗವತ್ ತಿಳಿಸಿದರು

ತಾಲ್ಲೂಕಿನ ಚನ್ನಕೇಶಪುರದಲ್ಲಿ ಬುಧವಾರ ಸಂಜೆ ನಡೆದ ಗ್ರಾಮ ವಿಕಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮಗಳು ವಿಸ್ತಾರಗೊಳ್ಳುತ್ತಿವೆ.  ಗ್ರಾಮಸ್ಥರ ಅಭಿವೃದ್ಧಿಪರ ಚಿಂತನೆ, ಪಾಲ್ಗೊಳ್ಳುವಿಕೆಯಿಂದ ಹಳ್ಳಿಗಳು ಉದ್ಧಾರವಾಗುತ್ತವೆ. ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರಲ್ಲಿ ಗ್ರಾಮಗಳ ಬಗ್ಗೆ ಸಂಘಟನಾತ್ಮಕ ಚಿಂತನೆಗಳಿರಬೇಕು. ಆಧುನಿಕ ತಂತ್ರಜ್ಞಾನವನ್ನು ಪ್ರಗತಿಗಾಗಿ ಬಳಸಿಕೊಳ್ಳಬೇಕು  ಎಂದರು.

ಗ್ರಾಮದ ಚನ್ನಕೇಶವ ದೇಗುಲದಲ್ಲಿ ದೀಪೋತ್ಸವಕ್ಕೆ ಚಾಲನೆ ನೀಡಿದರು. ಸುತ್ತ ಮುತ್ತಲ ಗ್ರಾಮದ ಮಹಿಳೆಯರು ದೇಗುಲದ ಆವರಣದಲ್ಲಿ  ದೀಪಗಳನ್ನು ಬೆಳಗಿಸಿದರು.

ಕಲಾವಿದರು, ಗ್ರಾಮಸ್ಥರು, ವಿದ್ಯಾರ್ಥಿಗಳು ನಡೆಸಿಕೊಟ್ಟ ಜನಪದ ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ಆರ್.ಎಸ್.ಎಸ್ ಸಹ ಸಂಚಾಲಕ ಪಿ.ಆರ್. ಮುಕುಂದ್, ದತ್ತಾತ್ರೇಯ, ಆನಂದ ರಾವ್ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

Comment here