ಜಸ್ಟ್ ನ್ಯೂಸ್

ಚಿತ್ರಕಲೆಯಿಂದ ಬೌದ್ಧಿಕ ಸಾಮರ್ಥ್ಯ ವೃದ್ಧಿಸುತ್ತದೆ; ಚಿತ್ರಕಲಾ ಶಿಕ್ಷಕ ರಾಮಚಂದ್ರಾಚಾರ್ 

ಪಾವಗಡ: ಪಟ್ಟಣದಲ್ಲಿ ಭಾನುವಾರ ನವೋದಯ ಹವ್ಯಾಸಿ ಕಲಾ ಸಂಘ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಚಿತ್ರಕಲೆ, ಗಾಯನ ಸ್ಪರ್ಧೆಯಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿದರು.

ಪರಿಸರ, ಪರಿಸರ ಸಂರಕ್ಷೆಣೆ ಕುರಿತ ಚಿತ್ರ ಬರೆಯಲು ಮಕ್ಕಳು ಉತ್ಸಾಹ ತೋರಿದರು. ಪೋಷಕರು ಮಕ್ಕಳ ಆಸಕ್ತಿಗೆ ಪ್ರೋತ್ಸಾಹ ನೀಡಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ   ಚಿತ್ರಕಲಾ ಶಿಕ್ಷಕ ರಾಮಚಂದ್ರಾಚಾರ್  ಮಾತನಾಡಿ,   ಚಿತ್ರಕಲೆಯಿಂದ ಮಕ್ಕಳಲ್ಲಿ ಸೃಜಲಶೀಲತೆ ಹೆಚ್ಚುತ್ತದೆ ಎಂದು  ತಿಳಿಸಿದರು.

ಚಿತ್ರಕಲೆಯಿಂದ ಸೃಜನಾತ್ಮಕ ಅಭಿವ್ಯಕ್ತಿ ಹೆಚ್ಚುತ್ತದೆ. ಇದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಸಾಮರ್ಥ್ಯ ಮಕ್ಕಳಲ್ಲಿ ವೃದ್ಧಿಸುತ್ತದೆ. ಮಕ್ಕಳಲ್ಲಿ ಪರಿಸರ, ಸ್ವಚ್ಚತೆ, ಇತ್ಯಾದಿ ಸಕಾರಾತ್ಮಕ ವಿಚಾರಗಳ ಬಗ್ಗೆ ಚಿತ್ರಕಲೆಯಿಂದ ಜಾಗೃತಿ ಮೂಡುತ್ತದೆ ಎಂದರು.

ಸಂಘದ ಉಪಾಧ್ಯಕ್ಷ ಈರಣ್ಣ, ತಾಲ್ಲೂಕಿನ ಸಾಕಷ್ಟು ಕಲಾವಿದರು ರಾಷ್ಟ್ರ, ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡು ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಕೊತ್ತೂರಿನ ರಂಗಾಯಣ ರಘು, ದೇವಲಕೆರೆ ಮಂಜುನಾಥ್ ಸೇರಿಂತೆ ಚಲನಚಿತ್ರ ನಟರು, ನಿರ್ದೇಶಕರು ಚಲನಚಿತ್ರ ರಂಗದಲ್ಲಿದ್ದಾರೆ. ರಂಗಭೂಮಿ, ಜನಪದ ಸೇರಿದಂತೆ ವಿವಿಧ ಕಲಾ ಕ್ಷೇತ್ರಗಳಲ್ಲಿ ತಾಲ್ಲೂಕು ಮುಂಚೂಣಿಯಲ್ಲಿದೆ ಎಂದರು.

ನಮ್ಮ ಹಕ್ಕು ತಾಲ್ಲೂಕು ಘಟಕದ ಅಧ್ಯಕ್ಷ ಎ.ಗಿರೀಶ್,  ಶಾಲೆಗಳಲ್ಲಿ ಮಕ್ಕಳಲ್ಲಿ ಕಲೆಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವಾಗಬೇಕು. ಕೇವಲ ಪಠ್ಯ, ಅಂಕಗಳಿಕೆಯಿಂದ ಜೀವನ ಪರಿಪೂರ್ಣವಾಗುವುದಿಲ್ಲ ಎಂದರು.

ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಜ್ಞಾನಬೋಧಿನಿ ಶಾಲೆಯ ಎಸ್.ಎನ್. ನೇಹಾ ಪ್ರಥಮ, ಆದರ್ಶ ಶಾಲೆಯ ಎಸ್.ಅನನ್ಯ ದ್ವಿತೀಯ, ಶ್ರೀಶಾಲಾ ಶಾಲೆಯ ಬಿ. ದೀಕ್ಷಿತ್  ತೃತೀಯ ಸ್ಥಾನ ಪಡೆದರು.

ಪ್ರೌಢಶಾಲೆ ವಿಭಾಗದ ಶಾರದಾ ವಿದ್ಯಾಪೀಠದ ಕೆ. ಝಾನ್ಸಿ ಪ್ರಥಮ, ಗುಮ್ಮಘಟ್ಟ ಜಲದುರ್ಗಾಂಭ ಶಾಲೆಯ ಎನ್.ಅಶೋಕ ದ್ವಿತೀಯ, ಜೈಗುರುದೇವ ಶಾಲೆಯ  ಎಸ್. ಶಶಿಕುಮಾರನಾಯ್ಕ  ತೃತೀಯ ಸ್ಥಾನ ಪಡೆದದರು.

ಚಿತ್ರಕಲಾ ಸ್ಪರ್ಧೆ, ಗೀತ ಗಾಯಮ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.

ನವೋದಯ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ಕಾರನಾಗಪ್ಪ, ಉಪ ಪ್ರಾಂಶುಪಾಲ ಒ.ಧನಂಜಯ, ಹನುಮಂತರಾಯಪ್ಪ ಮಾತನಾಡಿದರು.

ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ, ಪದಾಧಿಕಾರಿ ಸುವರ್ಣರೆಡ್ಡಿ,  ಹನುಮಂತರಾಯಪ್ಪ, ಗಣೇಶ್ ನಾಯ್ಕ, ಗೋವಿಂದಪ್ಪ ಉಪಸ್ಥಿತರಿದ್ದರು.

Comment here