ಜಸ್ಟ್ ನ್ಯೂಸ್

ಜನರ ಸಮಸ್ಯೆ ಬಗೆಹರಿಸಲು ಸಿದ್ದತೆ: ಶಾಸಕ ವೆಂಕಟರವಣಪ್ಪ

ಪಾವಗಡ: ಶಾಸಕ ವೆಂಕಟರವಣಪ್ಪ ಪಡಿತರ ವಿತರಣೆ, ಆಹಾರ ವಿತರಣೆಗೆ ಚಾಲನೆ ನೀಡಿ ಜನರ ಕಷ್ಟಗಳಿಗೆ ಸ್ಪಂದಿಸುವ ಭರವಸೆ ನಿಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಮಾದ್ಯಮಗಳಲ್ಲಿ ಪಡಿತರ ವಿತರಿಸುವ ಪ್ರಮಾಣದ ಬಗ್ಗೆ ವ್ಯಾಪಕವಾಗಿ ಕಾಮೆಂಟ್ ಮಾಡಲಾಗುತ್ತಿದೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿ ಹೆಚ್ಚಿನ ಜನರಿಗೆ ಪಡಿತರ ಸಿಗಲಿ ಎಂಬ ಉದ್ದೇಶದಿಂದ 36 ಟನ್ ಅಕ್ಕಿ, 6.5 ಸಾವಿರ ಟನ್ ಬೇಳೆ, 6.5 ಸಾವಿರ ಟನ್ ಸಕ್ಕರೆ ವಿತರಿಸಲಾಗಿದೆ. ಇದು ಕೊನೆಯೂ ಅಲ್ಲ. ಇದರ ಜೊತೆಗೆ ನಿತ್ಯ 50 ಕೆ.ಜಿ ಪ್ರಮಾಣದ ಉಪಹಾರವನ್ನು ಪಟ್ಟಣದಲ್ಲಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಪಟ್ಟಣದ 6 ಸಾವಿರ ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಪಟ್ಟಣಕ್ಕೆ ಬರುವ ಗ್ರಾಮಸ್ಥರು ಹಾಗೂ ಪಟ್ಟಣದ ನಿರ್ಗತಿಕರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಲಾಕ್ ಡೌನ್ ಮುಗಿಯುವವರೆಗೆ ಉಪಹಾರ ವಿತರಣೆ ಮುಂದುವರೆಯಲಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯ ಎಚ್.ವಿ. ವೆಂಕಟೇಶ್ ಮಾತನಾಡಿ ಪಟ್ಟಣದ 23 ವಾರ್ಡ್ ಗಳ ಬಡ ಕುಟುಂಬಗಳನ್ನು ಗುರುತಿಸಿ ವಾರ್ಡ್ ಸದಸ್ಯರ ಮುಖಾಂತರ ಪಡಿತರ ವಿತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

ತಾಲ್ಲೂಕು ಬರ ಪೀಡಿತ ಬಡ ಹಾಗೂ ದಲಿತ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಕೆಲಸ ಹರಸಿ ಬೆಂಗಳೂರು, ಇತರೆಡೆಗೆ ಹೋಗಿದ್ದ ಕೂಲಿ ಕಾರ್ಮಿಕರು ಮನೆ ಸೇರಿದ್ದಾರೆ. ಸಮಸ್ಯೆ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತಾಲ್ಲೂಕಿಗೆ ವಿಶೇಷ ಪ್ಯಾಕೇಜ್ ತರುವತ್ತ ಶಾಸಕರು ಗಮನಹರಿಸಬೇಕು ಎಂಬುದು ಜನತೆಯ ಒತ್ತಾಯ.

ಪಡಿತರ ವಿತರಿಸಿರುವ ಪ್ರಮಾಣದ ಬಗ್ಗೆ ಪಟ್ಟಣದ ಜನತೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಕಷ್ಟದ ವೇಳೆಯಲ್ಲಿ ಸಾವಿರಾರು ಕುಟುಂಬಗಳಿಗೆ ಶಾಸಕರು, ಪುರಸಭೆ ಸದಸ್ಯರು 12 ರಿಂದ 15 ಲಕ್ಷ ಮೊತ್ತದ ದಿನಸಿ ವಿತರಿಸಿದ್ದಾರೆ. ಸಿಕ್ಕಷ್ಟು ಸಿಗಲಿ ಎಂಬ ಸಮಾಧಾನ ಬಡ ಜನರಲ್ಲಿದೆ.

ಶಾಸಕರು ವಿತರಿಸಿದ ಪಡಿತರಕ್ಕಿಂತ ನಿಮ್ಮೊಂದಿಗೆ ನಾನಿದ್ದೇನೆ ಸಮಸ್ಯೆ ಇದ್ದರೆ ತಿಳಿಸಿ ಬಗೆಹರಿಸುತ್ತೇನೆ ಎಂಬ ಅವರ ಆಶ್ವಾಸನೆ ತಾಲ್ಲೂಕಿನ ಜನತೆಯಲ್ಲಿ ಶಕ್ತಿ ತುಂಬಿದೆ. ಆತ್ಮ ವಿಶ್ವಾಸವನ್ನು ಇಮ್ಮುಡಿಗೊಳಿಸಿದೆ.

ಎ. ಶಂಕರರೆಡ್ಡಿ, ಗುರಪ್ಪ, ಸುದೇಶ್ ಬಾಬು. ವೆಂಕಟರವಣ. ರಾಜೇಶ್, ರವಿ. ಮಣಿ. ವೇಲು ಮುರಘನ್, ವಿಜಿ, ಕಿರಣ್, ಭಾಸ್ಕರ್, ಗಜೇಂದ್ರ, ಮಣಿ. ಇತರರು ಇದ್ದರು.

Comment here