ತುಮಕೂರು ಲೈವ್

ತುಮಕೂರಿನಲ್ಲಿ ಕೊರೊನಾ ವ್ಯಕ್ತಿ ಸಾವು: ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದ 54 ಮಂದಿ ಕ್ವಾರಂಟೈನ್ ಗೆ

ತುಮಕೂರು: ನಗರದ ಕೆಹೆಚ್‍ಬಿ ಕಾಲೋನಿಯ ಪಿ-535 ಮೃತ ವ್ಯಕ್ತಿಯಲ್ಲಿ ಕೋವಿಡ್-19ರ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‍ಕುಮಾರ್ ತಿಳಿಸಿದ್ದಾರೆ.

ಪಿ-535 ವ್ಯಕ್ತಿಯು ಅಸ್ತಮಾ, ತೀವ್ರ ಉಸಿರಾಟದ ತೊಂದರೆಯಿಂದ ಏಪ್ರಿಲ್ 25ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ಚಿಕಿತ್ಸೆಗೊಳಪಡಿಸಿ, ಗಂಟಲು ಸ್ರಾವವನ್ನು ಕೋವಿಡ್-19 ಪರೀಕ್ಷೆಗೆ ಬೆಂಗಳೂರಿಗೆ ಕಳಹಿಸಲಾಗಿತ್ತು.

2 ಬಾರಿ ಪರೀಕ್ಷಿಸಿದಲ್ಲಿ ಸೋಂಕು ಇಂದು ದೃಢಪಟ್ಟಿದೆ ಅವರು ಏಪ್ರಿಲ್ 26ರಂದು ಬೆಳಿಗ್ಗೆ ಮೃತಪಟ್ಟಿರುತ್ತಾರೆ.

ಅವರ ಮನೆಯಲ್ಲಿದ್ದ 4 ಜನರನ್ನು ಪತ್ಯೇಕವಾಗಿ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ಮಾಡಲಾಗಿದೆ.

ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ 51 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೆಹೆಚ್‍ಬಿ ಕಾಲೋನಿಯನ್ನು ಸಂಪೂರ್ಣವಾಗಿ “ಕಂಟೈನ್ಮೆಂಟ್ ವಲಯ” ಹಾಗೂ 1 ಕಿ.ಮೀ ಪ್ರದೇಶವನ್ನು ಬಫರ್ ವಲಯವೆಂದು ಪರಿಗಣಿಸಿ ಸೀಲ್‍ಡೌನ್ ಮಾಡಲಾಗಿದೆ.

ಈ ಪ್ರದೇಶದಲ್ಲಿ ಮೆಡಿಕಲ್ ತುರ್ತು ಸೇವೆ ಹೊರತುಪಡಿಸಿ, ಅನಗತ್ಯವಾಗಿ ಓಡಾಡಲು ಅವಕಾಶವಿರುವುದಿಲ್ಲ. ಇಲ್ಲಿ ಹೊರಗೆ/ಒಳಗೆ ಹೋಗುವ ಪ್ರವೇಶ ಒಂದೇ ಕಡೆ ಮಾಡಲಾಗಿದ್ದು, ಇನ್ಸಿಡೆಂಟ್ ಕಮಾಂಡರನ್ನು ನೇಮಕ ಮಾಡಲಾಗುತ್ತದೆ.

ಅವರು ಜನರ ಚಲನವಲನಗಳನ್ನು ವೀಕ್ಷಿಸುತ್ತಿರುತ್ತಾರೆ ಎಂದರು. ಈ ಪ್ರದೇಶದಲ್ಲಿರುವ ಜನರು ಭಯಪಡದೇ ಧೈರ್ಯವಾಗಿರಬೇಕು. ಲಾಕ್‍ಡೌನ್ ಮುಗಿಯುವವರೆಗೂ ಮನೆಯಲ್ಲಿದ್ದು, ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

Comment here