ತುಮಕೂರು ಲೈವ್

ತುಮಕೂರಿನಲ್ಲಿ ಮತ್ತೊಬ್ಬರಿಗೆ ಕೊರೊನಾ:ಖಾದರ್ ನಗರ ಸೀಲ್ಡ್ ಡೌನ್

Publicstory.in

ತುಮಕೂರು: ಮಹಾರಾಷ್ಟ್ರಕ್ಕೆ ಹೋಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ಗುರುವಾರ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೇರಿದೆ.

ತುಮಕೂರು ನಗರದ ಖಾದರ್ ನಗರದ ಈ ವ್ಯಕ್ತಿ ಮುಂಬೈಗೆ ಹೋಗಿ ಬಂದಿದ್ದರು. ಈ ಹಿನ್ನೆಲೆಯಲ್ಲಿ ಇವರಿಗೆ ಕೊರೊನಾ ಸೋಂಕು ತಗುಲಿದೆ, ಬಟವಾಡಿ ಸಮೀಪದ ಖಾದರ್ ನಗರದವನ್ನು ಸೀಲ್ಡ್ ಡೌನ್ ಮಾಡಲಾಗಿದೆ.

ರಾಜ್ಯದಲ್ಲಿ ಒಂದೇ ದಿನ 116 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಲ್ಲಿ ಬಹುತೇಕರು ಮುಂಬೈಗೆ, ತೆಲಂಗಾಣಕ್ಕೆ ಹೋಗಿ ಬಂದವರು ಆಗಿದ್ದಾರೆ. ಮಹಾರಾಷ್ಟ್ರದ ಪ್ರಯಾಣ ಹಿನ್ನೆಲೆಯವರೇ ಹೆಚ್ಚಿರುವ ಕಾರಣ ಮುಂಬೈ ನಂಟು ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಿದೆ.

ಮುಂಬೈನಿಂದ ಬಂದು ಮನೆಯಲ್ಲೇ ಇದ್ದ ಅವರ ಬಗ್ಗೆ ಸ್ಥಳೀಯರಿಂದ ವಿಷಯ ತಿಳಿದ ಬಳಿಕ ಅವರ ಮನೆಯಲ್ಲೇ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು ಎಂದು ಜಿಲ್ಲಾಡಳಿತ ಹೇಳಿದೆ. ಆದರೆ, ಮುಂಬೈನಿಂದ ಬಂದು ಕೆಲವು ದಿನಗಳು ಓಡಾಡಿಕೊಂಡೇ ಇದ್ದರು ಎಂದು ಸ್ಥಳೀಯರು ಭಯಭೀತಿ ವ್ಯಕ್ತಪಡಿಸಿದ್ದಾರೆ.

Comment here