ಜಸ್ಟ್ ನ್ಯೂಸ್

ತುಮಕೂರಿನ ಕೀರ್ತಿ ಹೆಚ್ಚಿಸಿದ ಕಡಬಾದ ಮಕ್ಕಳು

Bangalore: ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗಿಯಾಗಿದ್ದ ತುಮಕೂರು ಜಿಲ್ಲೆಯ ವಾಲಿಬಾಲ್ ತಂಡ ರನ್ನರ್ ಅಪ್ ಆಗಿ ದ್ವಿತೀಯ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದೆ.

ಫೆಬ್ರವರಿ 3 ರಿಂದ 9ರವರೆಗೆ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಿನಿ ಒಲಂಪಿಕ್ ನಡೆಯುತ್ತಿದ್ದು ಎಂಟು ಅತ್ಯುತ್ತಮ ತಂಡಗಳು ಭಾಗವಹಿಸಿವೆ. ತುಮಕೂರು ಜಿಲ್ಲೆಯಿಂದಲೂ ಅತ್ಯುತ್ತಮ ವಾಲಿಬಾಲ್ ತಂಡ ಮಿನಿ ಒಲಂಪಿಕ್ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬೆಳ್ಳಿ ಪದಕವನ್ನು ಗೆದ್ದುಕೊಂಡು ಬಂದಿದೆ.

ಗುಬ್ಬಿ ತಾಲೂಕು ಕಡಬಾದ ಕರ್ನಾಟಕ ಪಬ್ಲಿಕ್ ಶಾಲೆಯ 10 ಮಕ್ಕಳು ಮತ್ತು ಇತರೆ ಶಾಲೆಯಿಂದ ಇಬ್ಬರು ಮಕ್ಕಳು ಸೇರಿ ತುಮಕೂರು ಜಿಲ್ಲೆಯಿಂದ ವಾಲಿಬಾಲ್ ತಂಡ ದೇಶದಲ್ಲಿ ಅದೂ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಿನಿ ಒಲಂಪಿಕ್ ಕ್ರೀಡಾ ಕೂಟ ನಡೆಯುತ್ತಿದ್ದು ತುಮಕೂರು ತಂಡ ದ್ವಿತೀಯ ಸ್ಥಾನ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಡಬಾದ ಕರ್ನಾಟಕ ಪಬ್ಲಿಕ್ ಶಾಲೆಯ ಮೂವರು ಮಕ್ಕಳು ಇತ್ತೀಚೆಗೆ ಆಂಧ್ರಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದರು. ಈ ತಂಡದಲ್ಲಿಯೂ ಅವರು ಇದ್ದರು. ನಮ್ಮದು ಬೆಸ್ಟ್ ತಂಡವಾಗಿತ್ತು ಮತ್ತು ಬಲಿಷ್ಟವಾಗಿತ್ತು. ಹೀಗಾಗಿ ನಮ್ಮ ತಂಡ ದ್ವಿತೀಯ ಸ್ಥಾನ ಗಳಿಸಲು ಸಾಧ್ಯವಾಯಿತು ಎಂದು ಕೋಚ್ ವಸೀಂ ಪಬ್ಲಿಕ್ ಸ್ಟೋರಿ.ಇನ್ ಜೊತೆ ದೂರವಾಣಿಯಲ್ಲಿ ತಿಳಿಸಿದರು.

ಮಹಿಳಾ ವಾಲಿಬಾಲ್ ತಂಡವೂ ಮಿನಿ ಒಲಂಪಿಕ್ ಕ್ರೀಡೆಯಲ್ಲಿ ಭಾಗಿಯಾಗಿತ್ತು. ಉತ್ತಮ ಪ್ರದರ್ಶನ ನೀಡಿದರೂ ಗೆಲುವು ಸಾಧ್ಯವಾಗಲಿಲ್ಲ ಎಂದರು.

14 ವರ್ಷದ ಒಳಗಿನ ಮಕ್ಕಳು ಈ ಮಿನಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಒಲಂಪಿಕ್ ಕ್ರೀಡಾ ಕೂಟಕ್ಕೆ ಅನ್ವಯವಾಗುವ ನಿಯಮಗಳನ್ನು ಇಲ್ಲೂ ಕ್ರೀಡೆಯಲ್ಲಿ ವಿಧಿಸಲಾಗಿತ್ತು.

ಬೆಂಗಳೂರು ವಾಲಿಬಾಲ್ ತಂಡದ ವಿರುದ್ಧ ತುಮಕೂರು ತುಂಡ ಸೆಣಸಿ ಎರಡನೇ ಸ್ಥಾನ ಪಡೆದುಕೊಂಡು ಬೆಳ್ಳಿಪದಕವನ್ನು ಗೆದ್ದುಕೊಂಡು ಬಂದಿದೆ.

Comment here