Publicstory. in
Tumkuru; ತುಮಕೂರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಕೊರೊನಾ ವಿರುದ್ಧ ಹೋರಾಡಲು ಪಿಪಿಇ ಉಪಕರಣ, ಸಾಮಾಗ್ರಿಗಳ ಖರೀದಿಯಲ್ಲಿ ಅವ್ಯವಹಾರದ ಆರೋಪ ಈಗ ಗಂಭೀರ ಸ್ವರೂಪ ಪಡೆದುಕೊಂಡಿದೆ.
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ ಎಂದು ಸಾರ್ವಜನಿಕರೇ ಅಸಮಾಧಾನ
ವ್ಯಕ್ತಪಡಿಸುವ ಮಟ್ಟಿಗೆ ಕೊರೊನಾ ನಿರ್ವಹಣೆ ಹೋಗಿದೆ. ಈಗ ಪಿಪಿಇ ಖರೀದಿಯಲ್ಲಿ ಡಿಎಚ್ ಒ ಅವ್ಯವಹಾರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡ ದಿಲೀಪ್ ಕುಮಾರ ಕೆಲವು ದಾಖಲೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ.
ಆಯಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು ಪಿಪಿಇ ಖರೀದಿಸಲು ಅವಕಾಶ ನೀಡಲಾಗಿತ್ತು. ಆದರೆ, ಡಿಎಚ್ಒ ಅವರೇ ಎಲ್ಲ ಪಿಎಚ್ ಸಿ ಗಳ ಕಾಪೋಂಡರ್ ಗಳು, ಕ್ಲರ್ಕ್ ಗಳನ್ನು ಸಭೆ ಕರೆದು ಎಲ್ಲರ ಸಹಿಯನ್ನು ಅಲ್ಲಿಯೇ ಹಾಕಿಸಿಕೊಂಡು ರಘು ಎಂಟರಪ್ರೈ ಸಸ್ ಅವರಿಂದ ಖರೀದಿಸಿದ್ದಾರೆ ಎಂಬುದು ಆರೋಪವಾಗಿದೆ.
ಎಂಸಿಇ 7 ಪ್ರಪತ್ರಕ್ಕೆ ಯಾವ ವೈದ್ಯಾಧಿಕಾರಿ ಸಹಿ ಹಾಕದೆಯೆ ಇರುವಾಗಿಯೂ ಡಿ ಎಚ್ ಒ ಅವರೇ ಖಾಲಿ ಪತ್ರಗಳಿಗೆ ಸಹಿ ಮಾಡಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿದಿದೆ.
ಒಬ್ಬರೇ ಸರಬರಾಜುದಾರರಿಗೆ ಕೊಡಲು ಕಾರಣ ಏನು ಎಂಬುದು ಈಗ ಗೊತ್ತಾಗಬೇಕಾಗಿದೆ.
ಇಷ್ಟೆಲ್ಲ ಸಾಮಾಗ್ರಿಗಳನ್ನು ಎಲ್ಲ ಪಿಎಚ್ ಸಿಗಳಿಗೆ ಸರಬರಾಜು ಮಾಡಲಾಗಿದೆಯೇ ಅಥವಾ ಲೆಕ್ಕದಲ್ಲಿ ಮಾತ್ರ ತೋರಿಸಲಾಗಿದೆಯೇ ಎಂಬುದನ್ನು ತಿಳಿಯಲು ಅತಿ ತುರ್ತು ಆಡಿಟ್ ಮಾಡಿಸಲು ಸರ್ಕಾರ ಮುಂದಾಗಬೇಕಾಗಿದೆ.
ಜಿಲ್ಲೆಯ ಜನರು ಕರೊನಾ ಭಯದಿಂದ ತತ್ತರಿಸಿರುವಾಗ ಆರೋಗ್ಯ ಇಲಾಖೆಯ ಈ ಹಗರಣ ಸರ್ಕಾರಕ್ಕೆ ತಲೆ ತಗ್ಗಿಸುವಂತ ವಿಚಾರವೇ ಆಗಿದೆ.
ಕಳೆದ ತಿಂಗಳಿಂದಲೂ ಈ ತರದ ಒತ್ತಡಗಳು ಬರುತ್ತಲೇ ಇದ್ದವು. ಕೆಲಸ ಮಾಡಲು ಇನ್ನೆಲ್ಲಿ ಮನಸ್ಸು ಮಾಡಬೇಕು. ಪ್ರಶ್ನೆ ಮಾಡಿದ ಜಿಎ ಅಧಿಕಾರಿಯನ್ನೆ ಇಲ್ಲಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿಸಲಾಯಿತು. ನಾವುಗಳು ಯಾರು ಪ್ರಶ್ನೆ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಹಲವು ವೈದ್ಯಾಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ನಡೆದಿರುವ ಖರೀದಿಯನ್ನು ಅಡಿಟ್ ಮಾಡಿಸಬೇಕು. ಸರಬರಾಜುದಾರರಿಗೂ, ಇಲಾಖೆಯ ಹಿರಿಯ ಅಧಿಕಾರಿಗಳ ನಡುವಿನ ಸಂಬಂಧ ಬೆಳಕಿಗೆ ಬರಲಿದೆ ಎಂದು ಅವರುಗಳು ಹೇಳಿದರು.
ಥರ್ಮಲ್ ಸ್ಕ್ಯಾನರ್ ಬೆಲೆ ಎಷ್ಟಿರಬಹುದು?
ಕೊರೊನಾ ಜ್ಚರ ಚೆಕ್ ಮಾಡಲು ಥರ್ಮಲ್ ಸ್ಕ್ಯಾನರ್ ಎಷ್ಟು ಖರೀದಿಸಲಾಗಿದೆ. ಒಂದಕ್ಕೆ ಎಷ್ಟು ಹಣ ಕೊಡಲಾಗಿದೆ. ಮಾರುಕಟ್ಟೆಯಲ್ಲಿ ಅದರ ಬೆಲೆ ಎಷ್ಟು ಎಂಬುದನ್ನಾದರೂ ಜಿಲ್ಲೆಯ ಜನರಿಗೆ ತಿಳಿಸಬೇಕಾಗಿದೆ.
Comment here