ತುಮಕೂರು ಲೈವ್

ತುಮಕೂರು ಪಿಯು ಉಪ ನಿರ್ದೇಶಕರಾಗಿ ಎಚ್ಕೆಎನ್

Publicstory. in


ತುಮಕೂರು: ಸಂಸ್ಕೃತಿ ಚಿಂತಕ, ಸಾಹಿತಿ ಎಚ್.ಕೆ.ನರಸಿಂಹಮೂರ್ತಿ ಅವರು ತುಮಕೂರು ಜಿಲ್ಲಾ ಪಿಯು ಉಪ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

ಗುಬ್ಬಿ ಹೊಸಹಳ್ಳಿಯವರಾದ ನರಸಿಂಹಮೂರ್ತಿ ಸಾಹಿತ್ಯ ಬಳಗಷ್ಟೇ ಅಲ್ಲ ಜನ ಸಾಮಾನ್ಯರ ನಡುವೆ ಎಚ್ಕೆಎನ್ ಎಂದೇ ಪ್ರಸಿದ್ಧರು.

ಸರಳತೆ, ಸಜ್ಜನಿಕೆಗೆ ಹೆಸರಾಗಿರುವ ಅವರು ವಿದ್ಯಾರ್ಥಿ ಸ್ನೇಹಿ ಉಪನ್ಯಾಸಕರು.

ಗುಬ್ಬಿ ಹೊಸಹಳ್ಳಿಯವರಾದ ಅವರು ಸಿ.ಎಸ್.ಪುರ, ಕಡಬಾ, ಗುಬ್ಬಿ ಮತ್ತಿತರ ಕಡೆಗಳಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಅವರು ಕರ್ತವ್ಯ ನಿರ್ವಹಿಸಿದ ಕಡೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಆಯಾ ಗ್ರಾಮದ ಹಿರಿಯರ ಜೊತೆಗೂ ಸಂಬಂಧ ಬೆಸೆದಿದ್ದಾರೆ. ಹಳ್ಳಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಅವರ ಕಾಳಜಿಯಾಗಿದೆ.

ಉಪನ್ಯಾಸಕರು ಇಲ್ಲದ ಕಾಲೇಜುಗಳಲ್ಲಿ ಅವರು ಕನ್ನಡದ ಜತೆಗೆ ರಾಜ್ಯಶಾಸ್ತ್ರ, ಇತಿಹಾಸವನ್ನು ಬೋಧಿಸಿದ ಹೆಗ್ಗಳಿಕೆ ಅವರಿಗಿದೆ.

ಕೇವಲ ಇಬ್ಬರೇ ಉಪನ್ಯಾಸಕರಿದ್ದಾಗಲೂ ಸಿ.ಎಸ್.ಪುರ ಕಾಲೇಜನ್ನು ಉಳಿಸಿ, ಕಟ್ಟುವಲ್ಲಿ ಅವರ ಶ್ರಮವನ್ನು ಅಲ್ಲಿಯ ಜನರು ಇಂದಿಗೂ ನೆನಪು ಮಾಡಿಕೊಳ್ಳುತ್ತಾರೆ.

ಮೂರು ವಿಷಯಗಳಲ್ಲಿ ಬೋಧನೆ ಮಾಡಿದ್ದು ಅವರ ಹೆಗ್ಗಳಿಕೆಯಾಗಿದೆ.

ಅವರ ನೇಮಕ ಜಿಲ್ಲೆಯ ಸರ್ಕಾರಿ ಪಿಯು ಕಾಲೇಜುಗಳ ಸುಧಾರಣೆಗೆ ದಾರಿ ಮಾಡಿಕೊಡಬಹುದು ಎಂದೇ ಉಪನ್ಯಾಸಕ ವರ್ಗ ನಂಬಿದೆ. ಸರಳ, ಸಜ್ಜನಿಕೆಯ ಜೊತಗೆ ಪ್ರಾಮಾಣಿಕರು ಆಗಿದ್ದಾರೆ.

ಅನೇಕ ಲೇಖನಗಳನ್ನು ಬರೆದಿರುವ ಅವರು, ಜಿಲ್ಲೆಯ ತಳ ಸಮುದಾಯಗಳು, ಅವರ ಆಚರಣೆ, ಅವರ ಇತಿಹಾಸದ ಬಗ್ಗೆ ಆಳ ಅಧ್ಯಯನ ನಡೆಸಿದ್ದಾರೆ. ಮೌಖಿಕ ಪರಂಪರೆಯ ಇತಿಹಾಸಕರೂ ಆಗಿದ್ದಾರೆ.

Comment here