ತುಮಕೂರು ಲೈವ್

ದಿನ ಭವಿಷ್ಯ

ಜೋತಿರ್ ವಾಸ್ತುತಜ್ಞ ಎಚ್.ಎಸ್.ಲೋಕೇಶ್ ಮೊ:8618194668

ಪಂಚಾಂಗ:

ದಿನಾಂಕ 24/ 4 /2020,  ಶುಕ್ರವಾರ  , ಶ್ರೀ ಶಾರ್ವರಿ ನಾಮ ಸಂವತ್ಸರ ,  ವೈಶಾಖ ಮಾಸ, ಉತ್ತರಾಯಣ, ವಸಂತಋತು, ಶುಕ್ಲ ಪಕ್ಷ, ತಿಥಿ ಪಾಡ್ಯಮಿ ಮತ್ತು ದ್ವಿತೀಯ ನಕ್ಷತ್ರ :-  ಭರಣಿ, ಯೋಗ  ಆಯುಷ್ಮಾನ್ ಮತ್ತು ಸೌಭಾಗ್ಯ ,ಕರಣ  ಭವ ಮತ್ತು ಬಾಲವ  ,ಮಳೆ ನಕ್ಷತ್ರ  ಅಶ್ವಿನಿ, ದಿಕ್ಕು ಶೂಲೆ  ಪಶ್ಚಿಮ, ಪರಿಹಾರ ಬೆಲ್ಲ. ರಾಜಯೋಗ :- ಇದೆ. ರಾಹುಕಾಲ:-10:46am to 12:19pm, ಗುಳಿಕಕಾಲ:-03:26pm to 04:59pm, ಯಮಗಂಡಕಾಲ:-03:26pm to 04:59pm ಸೂರ್ಯೋದಯ:-6:06am, ಸೂರ್ಯ ಅಸ್ತ:-6:32pm.

ರಾಶಿ ಭವಿಷ್ಯ

ಮೇಷ ರಾಶಿ

ಈ ದಿನ ನೀವು ಬಹಳ ಅದೃಷ್ಟ ಮಾಡಿದ್ದೀರಿ, ಈ ದಿನ ನೀವು ಅಂದುಕೊಂಡ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತವೆ ,ಎಲ್ಲ ರೀತಿಯಿಂದಲೂ ಅನುಕೂಲ ಆಗುವುದರಿಂದ ನಿಮ್ಮ ಕುಟುಂಬದ ಗೌರವ, ಪ್ರತಿಷ್ಠೆಗಳನ್ನು ಹೆಚ್ಚು ಮಾಡಿಕೊಳ್ಳಲು ಅವಕಾಶ ಇದೆ ,ಒಳ್ಳೆ ಊಟ ,ಪಾನೀಯ ಲಭ್ಯ ಆಗುತ್ತೆ, ಹಣಕಾಸಿನ ವ್ಯವಹಾರಗಳು ಉತ್ತಮವಾಗಿ ಇರುತ್ತದೆ.

ವೃಷಭ ರಾಶಿ

ಈ ದಿನ ನೀವು ಉತ್ಸಾಹದಿಂದ ಸಮಯ ಕಳೆಯುವ ಅವಕಾಶ ಇದೆ, ಮನೆಯನ್ನು ಸ್ವಚ್ಛ ಮಾಡಿಕೊಳ್ಳುತ್ತೀರಿ ,ನಿಮ್ಮ ಬಟ್ಟೆ ಬರೆಯನ್ನು ಸ್ವಚ್ಛ ಮಾಡಿಕೊಳ್ಳುತ್ತೀರಿ ,ಮನೆಯ ಹಾಗೂ ನಿಮ್ಮ ಸೌಂದರ್ಯದ ಬಗ್ಗೆ ಗಮನ ಕೊಡುತ್ತೀರಿ , ಕೊನೆಗೆ ಯಾರೋ ಒಬ್ಬರು ನಿಮಗೆ ಸಹಕಾರ ಕೊಟ್ಟಿಲ್ಲವೆಂದು  ರಾತ್ರಿ ಸ್ವಲ್ಪಕಾಲ ಬೇಸರ ಮಾಡಿಕೊಳ್ಳುವ ಅವಕಾಶ ಇದೆ.

ಮಿಥುನ ರಾಶಿ

ಈ ದಿನ ನಿಮಗೆ ಅತ್ಯಂತ ಶುಭದಿನ ಆಗಿರುತ್ತದೆ, ಎಲ್ಲಾ ರೀತಿಯಿಂದಲೂ ಲಾಭ ಉಂಟಾಗುವ ಅವಕಾಶ ಇದೆ ,ದಾಂಪತ್ಯ ಜೀವನದಲ್ಲಿ ಸಂಗಾತಿಯ ಸಹಕಾರ ನಿಮಗೆ ಆನಂದ ಹಾಗು ತೃಪ್ತಿ ಕೊಡುವ ಅವಕಾಶ ಇದೆ ,ಒಳ್ಳೆ ಕಾರ್ಯಗಳಿಗಾಗಿ ಹಣ ಖರ್ಚು ಮಾಡುವ ಅವಕಾಶ ಕೂಡ ಇದೆ.

ಕಟಕ ರಾಶಿ

ಈ ದಿನ ಜಮೀನು, ವಾಹನ ,ತಾಯಿ ವಿಷಯಗಳು ನಿಮಗೆ ಸಂತೋಷವನ್ನು ಹಾಗೂ ಲಾಭವನ್ನು ಉಂಟುಮಾಡುವ ಅವಕಾಶ ,ತೃಪ್ತಿಕರವಾಗಿ ಗೋಚರವಾಗುತ್ತಿದೆ, ಸಂತೋಷವಾಗಿ ಕಾಲ ಕಳಯಬಹುದಾದ ದಿನ ಆಗಿದೆ.

ಸಿಂಹ ರಾಶಿ

:ಈ ದಿನ 50% ರಷ್ಟು ಶುಭ ಫಲ ಪಡೆಯುವ ಅವಕಾಶ ಇದೆ, ನೆರೆಹೊರೆಯವರ ಮಿತ್ರರ ಸಹಾಯ ಸಹಕಾರಗಳಿಂದ ಅನುಕೂಲ ಆಗುವುದರಿಂದ ಸಂತೋಷ ಪಡುವ ಅವಕಾಶ ಇದೆ ,ಆದರೆ ಉದ್ಯೋಗ ಸ್ಥಳದಲ್ಲಿ ಆಗುವ ಕಿರಿಕಿರಿ ಅಸಹಕಾರ ನಿಮಗೆ ಬೇಸರ ಉಂಟು ಮಾಡುತ್ತದೆ.

ಕನ್ಯಾ ರಾಶಿ

ಈ ದಿನ ಈ ದಿನ  75% ರಷ್ಟು  ಅನುಕೂಲ ಪಡೆಯುವ ಅವಕಾಶವಿದೆ ,  ಹಣಕಾಸಿನ ವ್ಯವಹಾರಗಳು ಅದೃಷ್ಟವನ್ನು ಕೊಡುವ ಅವಕಾಶ ಹೆಚ್ಚಿದೆ ಆದರೆ  ಯಾವುದೋ ಒಂದು ವಿಷಯ ನಿಮಗೆ ಬೇಸರ ಉಂಟು ಮಾಡುವ ಸಂಭವ ಇದೆ. 

ತುಲಾ ರಾಶಿ

ಈ ದಿನ ನೀವು ಅತ್ಯಂತ ಉತ್ಸಾಹ ಭರಿತರಾಗಿ ಕಾರ್ಯ ಚಟುವಟಿಕೆಗಳನ್ನು ಮಾಡುತ್ತೀರಿ, ಪ್ರತಿ ವಿಷಯದಲ್ಲಿ ಕ್ರಮ ಶಿಕ್ಷಣ ಪಾಲನೆ ಮಾಡುತ್ತೀರಿ ,ಆರ್ಥಿಕ ವಿಷಯಗಳು ನಿಮಗೆ ಖುಷಿಯನ್ನು ಉಂಟು ಮಾಡುತ್ತವೆ ,ಒಟ್ಟಾರೆ ಅಪರಿಮಿತ ಆನಂದವನ್ನು ಅನುಭವಿಸುತ್ತೀರಿ. ಅನುಭವಿಸಿ .

ವೃಶ್ಚಿಕ ರಾಶಿ

ಈ ದಿನ  ಮಾನಸಿಕ ಅಶಾಂತಿ ಕಾಡುತ್ತದೆ, ಸಂಗಾತಿಗೆ ಅನಾರೋಗ್ಯ ಉಂಟಾಗಬಹುದು ಅಥವಾ ಬೇರೆಯವರ ಕಿರಿಕಿರಿಯ ಜೊತೆಗೆ ಸಂಗಾತಿಯ ಕಿರಿಕಿರಿಯೂ ನಿಮಗೆ ಬೇಸರ ಉಂಟು ಮಾಡುವ ಅವಕಾಶ ಇದೆ ,ಆದರೂ ನೀವು ಈ ದಿನ ಅದನ್ನೆಲ್ಲ ನಿಭಾಯಿಸಿ ಕೊಳ್ಳುತ್ತೀರಿ.

ಧನಸ್ಸು ರಾಶಿ

ಈ ದಿನ ಪೂರ್ಣ ಪ್ರಮಾಣದ ಸಮಸ್ಯೆಗಳನ್ನು ಅನುಭವಿಸುವ ಅವಕಾಶ ಇದೆ, ಸಂತಾನವು ನಿಮ್ಮ ಅಭಿಪ್ರಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದರಿಂದ ಬೇಸರ ಮಾಡಿಕೊಳ್ಳುತ್ತೀರಿ ,ಇದರ ಜೊತೆಗೆ ನಿಮ್ಮ ಆರೋಗ್ಯ ,ಶತ್ರುಗಳ ಕಿರಿಕಿರಿಯೂ ಅಸಂತೋಷವನ್ನು ತರುತ್ತದೆ ,ಈ ದಿನ ನೀವು ತಪ್ಪದೇ ದೈವ ಚಿಂತನೆಯಲ್ಲಿ ಇರುವುದು ಸೂಕ್ತ. 

ಮಕರ ರಾಶಿ

ಈ ದಿನ ನೀವು ಕಳೆದ ದಿನಗಳಿಂದಲೂ ಅನುಭವಿಸುತ್ತಿದ್ದ ಸಂಕಟ, ಅವಮಾನ ,ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ಅವುಗಳಿಂದ ಮುಕ್ತರಾಗಲು ದಾರಿ ಕಾಣುತ್ತದೆ, ಹಿಂದೆ ನೀವು ಮಾಡಿದ ಪುಣ್ಯದ ಫಲ ಈಗ ಅನುಕೂಲ ಮಾಡುತ್ತದೆ ,ಧೈರ್ಯವಾಗಿರಿ.

ಕುಂಭ ರಾಶಿ

ಈ ದಿನ ಪೂರ್ಣಪ್ರಮಾಣದ ಅನುಕೂಲಗಳನ್ನು ಪಡೆಯುತ್ತೀರಿ, ತಾಯಿ ,ಜಮೀನು, ವಾಹನ ವಿಚಾರಗಳಿಂದ ಲಾಭ ಅಥವಾ ಅನುಕೂಲ ಪಡೆಯುವ ಅವಕಾಶ ಇದೆ, ಮನೆಯಲ್ಲಿ ಸಂತೋಷವಾಗಿ ಕಾಲ ಕಳೆಯಬಹುದು ,ಬೇರೆಯವರ ,ನೆರೆಹೊರೆಯವರ ಸಹಾಯ -ಸಹಕಾರವೂ ಖುಷಿ ಕೊಡುತ್ತದೆ.

ಮೀನ ರಾಶಿ

ಈ ದಿನ ನಿಮ್ಮ ಸಹೋದರ ಅಥವಾ ಸಹೋದರಿಯ ರಿಂದ ಹಾಗೂ ನೆರೆಹೊರೆ ಅವರಿಂದ ,ಪ್ರೀತಿ ,ಗೌರವ ಹಾಗೂ ಅನುಕೂಲಗಳು ಪ್ರಾಪ್ತವಾಗುವ ಅವಕಾಶ ಹೆಚ್ಚಿದೆ, ಇದರಿಂದ ನಿಮ್ಮ ಜೀವನ ಕ್ರಿಯಾಶೀಲತೆ ಹಾಗೂ ಸೃಜನಾತ್ಮಕತೆ ತುಂಬಿರುವ ಅರ್ಥಪೂರ್ಣ ದಿನವಾಗಿರುತ್ತದೆ, ಉಪಯೋಗಿಸಿಕೊಳ್ಳಿ.

ಶಾಂತಿ:- ಈ ದಿನ ಜಗನ್ಮಾತೆ ಮಹಾಲಕ್ಷ್ಮಿ ಭಾವಚಿತ್ರದ ಮುಂದೆ ತುಪ್ಪದ ದೀಪ ಹಚ್ಚಿ “ಓಂ ಶ್ರೀo ಶ್ರೀo  ಶ್ರೀo  ಶ್ರೀo ಶ್ರೀo ಶ್ರೀo ಶ್ರೀo ಮಹಾಲಕ್ಷ್ಮಿ ನಮಹ “ಎಂದು  108 ಬಾರಿ ಪಠಿಸುವುದು ಉತ್ತಮ.

Comment here