ತುಮಕೂರು ಲೈವ್

ನಾಗವಲ್ಲಿಯಲ್ಲಿ ಕೊರೊನಾ ವ್ಯಕ್ತಿ ಶವ ಅಂತ್ಯಸಂಸ್ಕಾರ: ಮಾಜಿ ಶಾಸಕರ ನಡೆಗೆ ಟೀಕೆ

Publicstory.in


Tumkuru: ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಬಿ.ಸುರೇಶ್ ಗೌಡರು ಹಾಲಿ ಶಾಸಕ ಡಿ ಸಿ ಗೌರಿಶಂಕರ್ ವಿರುದ್ದ ಪದೇ ಪದೇ
ಆಧಾರ ರಹಿತ ಆರೋಪ ಮಾಡಿ ಅವರ ತೇಜೋವಧೆ ಮಾಡುತ್ತಿರುವುದು ತರವಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಗೌಡ(ದೀಪು) ಮಾಜಿ ಶಾಸಕರ ಆರೋಪವನ್ನು ತೀವ್ರವಾಗಿ ಖಂಡಿಸಿದ್ದಾರೆ.

ಲಾಕ್ ಡೌನ್ ಆರಂಭವಾದಾಗಿನಿಂದ ಗ್ರಾಮಾಂತರ ಶಾಸಕ ಡಿ ಸಿ ಗೌರೀಶಂಕರ್ ಕ್ಷೇತ್ರ ಪ್ರವಾಸ ಮಾಡಿ ಜನರ ಕಷ್ಟ ಸುಖ ಆಲಿಸುತ್ತಿದ್ದಾರೆ,ಕೋಟ್ಯಾಂತರ ರೂ ಸ್ವಂತ ಹಣ ಖರ್ಚು ಮಾಡಿ ಆಹಾರದ ಕಿಟ್ ತಯಾರಿಸಿ ಹಂಚುತ್ತಿದ್ದಾರೆ,ಕರೋನ ವೈರಸ್ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ, ಆದರೆ ಮಾಜಿ ಶಾಸಕರು ಡಿ ಸಿ ಗೌರೀಶಂಕರ್ ಅವರ ವಿರುದ್ದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ಕರೋನದಿಂದ ಮೃತಪಟ್ಟಿರುವ ವ್ಯಕ್ತಿಯನ್ನು ಹೆಬ್ಬೂರು ಸಮೀಪವಿರುವ ನಾಗವಲ್ಲಿಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗಿದೆ, ಆದರೆ ಮಾಜಿ ಶಾಸಕರು ಹಿರೇಹಳ್ಳಿ ಭಾಗದಲ್ಲಿ ಆಹಾರದ ಕಿಟ್ ವಿತರಣೆ ಮಾಡುವ ವೇಳೆ ಶಾಸಕ ಡಿ ಸಿ ಗೌರೀಶಂಕರ್ ನಾಗವಲ್ಲಿಯಲ್ಲಿ ಕರೋನ ಪೀಡಿತ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಧಾರ ರಹಿತ ಆರೋಪ ಮಾಡಿದ್ದಾರೆ,ಜನರ ಹಿತಕ್ಕಾಗಿಊಟ ನಿದ್ದೆ ತ್ಯಾಗ ಮಾಡಿ ದಾನಶೂರ ಕರ್ಣರಂತೆ ದುಡಿಯುವ ಶಾಸಕ ಡಿ ಸಿ ಗೌರೀಶಂಕರ್ ಕರೋನ ಪೀಡಿತ ವ್ಯಕ್ತಿಯನ್ನು ತಮ್ಮ ಕ್ಷೇತ್ರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶ ನೀಡುತ್ತಿರಲಿಲ್ಲ, ಜಿಲ್ಲಾಢಳಿತ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಮಾಡಿರುವ ತಪ್ಪಿನಿಂದ ದೊಡ್ಡ ಪ್ರಮಾದವಾಗಿದೆ. ಗ್ರಾಮಾಂತರ ಶಾಸಕರ ವಿರುದ್ದ ಮಾತನಾಡಬೇಕಾದರೆ ಎಚ್ಚರ ಇರಬೇಕು ಎಂದು ದಯಾನಂದಗೌಡ ಎಚ್ಚರಿಸಿದ್ದಾರೆ

Comment here