ತುಮಕೂರ್ ಲೈವ್

ಪಾಸ್ ಇದ್ರೂ ಹತ್ತಂಗಿಲ್ಲ ಬಸ್ಸು

ತುಮಕೂರು:
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಂದ ಸಾರಿಗೆ ಸಂಸ್ಥೆ 10 ಲಕ್ಷಕ್ಕೂ ಅಧಿಕ ಹಣ ಪಡೆದು ತುಮಕೂರು ಮತ್ತು ಕೊರಟಗೆರೆ ಡಿಪೋದಿಂದ 2 ಸಾವಿರಕ್ಕೂ ಹೆಚ್ಚು ಸರಕಾರಿ ಬಸ್ಪಾಸ್ ವಿತರಣೆ ಮಾಡಿದೆ. ಪ್ರತಿನಿತ್ಯ 87 ಬಸ್ಸುಗಳ ಸಂಚಾರದ ವ್ಯವಸ್ಥೆ ಇದ್ದರೂ ಸಹ ವಿದ್ಯಾರ್ಥಿಗಳಿಗೆ ಪ್ರಯೋಜವಿಲ್ಲದಂತಾಗಿ ಮಧುಗಿರಿ, ಕೊರಟಗೆರೆಯಿಂದ ತುಮಕೂರಿಗೆ ಓಡಾಡುವ ವಿದ್ಯಾರ್ಥಿಗಳು ಅನಿವಾರ್ಯವಾಗಿ ಖಾಸಗಿ ಬಸ್ಸುಗಳಲ್ಲಿ ಜೀವ ಕೈಲಿಡಿದುಕೊಂಡು ಓಡಾಡುವಂತಾಗಿದೆ.
ಕೊರಟಗೆರೆ ಮತ್ತು ತುಮಕೂರು ಘಟಕದಿಂದ ವಿದ್ಯಾಥರ್ಿಗಳಿಗೆ ನೀಡಿರುವ ಬಸ್ ಪಾಸಿನ ಅಂಕಿ ಅಂಶದ ಪ್ರಕಾರ ಸರ್ಕಾರಿ ಬಸ್ಸಿನ ನಿರ್ವಹಣೆ ಇಲ್ಲದಾಗಿದೆ. ಪಾವಗಡ ಮತ್ತು ಮಧುಗಿರಿ ಘಟಕದಿಂದ ಹೊರಡುವ ಬಸ್ಸುಗಳು ಕೊರಟಗೆರೆ ನಿಲ್ದಾಣಕ್ಕೆ ಬಾರದೇ ನೇರವಾಗಿ ತುಮಕೂರು ನಗರಕ್ಕೆ ಸಂಚಾರ ನಡೆಸುತ್ತಿವೆ. ಪರಿಶೀಲನೆ ನಡೆಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಬಹುತೇಕ ಶಾಲಾ-ಕಾಲೇಜು ಪ್ರಾರಂಭ ಆಗೋದು ಬೆಳಿಗ್ಗೆ 9 ರಿಂದ 10 ಗಂಟೆಗೆ. ಗ್ರಾಮೀಣ ಪ್ರದೇಶಗಳಿಂದ ಪಟ್ಟಣಕ್ಕೆ ಬರಲು ಬೆಳಿಗ್ಗೆ 7 ಗಂಟೆಯಿಂದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಿಂದ ಹೊರಡಬೇಕಿದೆ. ಈ ವೇಳೆಯಲ್ಲಿ ಸಾರಿಗೆ ಸಂಸ್ಥೆ ಬಸ್ಸಿನ ಅವಶ್ಯಕತೆ ವಿದ್ಯಾರ್ಥಿಗಳಿಗೆ ಹೆಚ್ಚಾಗಿದೆ. ಆದರೆ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಬರುವ 10 ಬಸ್ಸುಗಳಲ್ಲಿ 2ಸಾವಿರ ವಿದ್ಯಾಥರ್ಿಗಳು ಹೇಗೆ ತಾನೆ ಸಂಚಾರ ಮಾಡಬೇಕೆಂಬುದು ಸದ್ಯದ ಪ್ರಶ್ನೆಯಾಗಿದೆ. ಇತ್ತೀಚೆಗೆ ಖಾಸಗಿ ಬಸ್ ನಲ್ಲಿ ಹೆಚ್ಚು ಜನ ಪ್ರಯಾಣಿಕರನ್ನು ತುಂಬಿಕೊಂಡು ಹೋಗುವಾಗ ಕೊರಟಗೆರೆ ತಾಲ್ಲೂಕಿನ ಅಗ್ರಹಾರ ಬಳಿ ಅಪಘಾತಕ್ಕೀಡಾಗಿ ಸ್ಥಳದಲ್ಲೆ 5 ಜನ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಸಾರಿಗೆ ಸಂಸ್ಥೆ ಬಸ್ ನಿಲ್ದಾಣಗಳಲ್ಲಿ ಮಾರ್ಗ, ನಿಗದಿತ ಸಮಯ ಇತ್ಯಾಧಿ ಸೂಚನ ಫಲಕಗಳನ್ನು ಅಳವಡಿಸಿಲ್ಲ. ಕೆಲವೊಮ್ಮೆ ಬಸ್ ನಿಲ್ದಾಣಕ್ಕೆ ಸಾರಿಗೆ ಬಸ್ಸುಗಳು ಬಾರದೇ ಹಾಗೇ ಹೋಗುತ್ತಿರುತ್ತವೆ. ಇಂತಹ ವೇಳೆ ಬಸ್ ನಿಲ್ದಾಣದಲ್ಲಿ ಕಾಯುವ ಪ್ರಯಾಣಿಕರು ತಮ್ಮ ಊರುಗಳು ತಲುಪಲು ಸಾಹಸ ಪಡಬೇಕಿದೆ.


ಸರ್ಕಾರಿ ಮತ್ತು ಖಾಸಗಿ ಬಸ್ಸಿನಲ್ಲಿ ಹಿರಿಯ ನಾಗರೀಕ, ಮಾಜಿ ಸೈನಿಕ, ಮಹಿಳೆ, ವಿಶೇಷ ಚೇತನರಿಗೆ ಪ್ರತ್ಯೇಕ ಸ್ಥಾನ ನಿಗದಿ ಮಾಡಲಾಗಿದೆ. ಆದೇಶಸಾರಿಗೆ ಕಚೇರಿಗೆ ಮಾತ್ರ ಸಿಮೀತವಾಗಿದೆ. ಸಾರಿಗೆ ಬಸ್ಸುಗಳ ಪರಿಶೀಲನೆ ನಡೆಸಬೇಕಾದ ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅಧಿಕಾರಿವರ್ಗ ತುತರ್ಾಗಿ ತುಮಕೂರು ಕಚೇರಿಯಿಂದ ಹೊರಗಡೆ ಬಂದು ಪರಿಶೀಲನೆ ನಡೆಸಬೇಕಾಗಿದೆ.
ಸಾರಿಗೆ ಬಸ್ ಸಂಚಾರದ ಕೊರತೆ ಇರುವ ಕಾರಣ ಶಾಲಾ-ಕಾಲೇಜು ವೇಳೆಯಲ್ಲಿ ನಿಯಮ ಉಲ್ಲಂಘಿಸಿ ಸಾಮರ್ಥ್ಯಕ್ಕೂ ಹೆಚ್ಚು ಜನರು ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಸಂಚರಿಸುತ್ತಿದ್ದಾರೆ. ಖಾಸಗಿ ಬಸ್ ಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿದರೆ ದಂಡ ವಿದಿಸಿ ಕಾನೂನು ರೀತ್ಯಾ ಕ್ರಮ ಜರುಗಿಸುವ ಪೊಲೀಸ್ ಹಾಗೂ ಆರ್ಟಿಓ ಇಲಾಖೆ ಸಾರಿಗೆ ಇಲಾಖೆ ಬಸ್ಸುಗಳು ಪ್ರತಿನಿತ್ಯ ಸಾಮರ್ಥ್ಯಕ್ಕಿಂತ ಹೆಚ್ಚು ತುಂಬಿಕೊಂಡು ಕಣ್ಣ ಮುಂದೇ ಓಡಾಡುತ್ತಿದ್ದರೂ ಕಣ್ಮುಚ್ಚಿ ಕುಳಿತ್ತಿದ್ದಾರೆ. ಜೊತೆಗೆ ವಾಯುಮಾಲಿನ್ಯ ತಡೆಗಟ್ಟಲು ಹೆಚ್ಚು ಹೊಗೆ ಸೂಸುವ ಖಾಸಗಿ ವಾಹನ ಕಂಡಲ್ಲಿ, ವಾಹನ ಸುಸ್ಥಿಯಲಿಲ್ಲದಿದ್ದಲ್ಲಿ ಸ್ಥಳದಲ್ಲೆ ಮನಸೋ ಇಚ್ಚೆ ದಂಡ ಶುಲ್ಕ ವಿದಿಸುತ್ತಾರೆ. ಆದರೆ ಬಹಳಷ್ಟು ಸಾರಿಗೆ ಸಂಸ್ಥೆ ಬಸ್ಸುಗಳು ಹೆಚ್ಚು ಹೊಗೆ ಸೂಸುತ್ತಲೆ ಓಡಾಡುವುದರ ಜೊತೆಗೆ ಸಾರಿಗೆ ನಿಯಮಗಳ ಪ್ರಕಾರ ಹೆಡ್ ಲೈಟ್, ಇಂಡಿಕೇಟರ್, ಬ್ರೇಕ್ ಲೈಟ್ ಇದ್ಯಾವುದೇ ಇರುವುದಿಲ್ಲ ಆಗಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ ಎಂದು ಖಾಸಗಿ ಬಸ್ ಮಾಲೀಕರೊಬ್ಬರು ಆರೋಪ ಮಾಡುತ್ತಾರೆ.

ಕಣ್ಮುಚ್ಚಿ ಕುಳಿತ ಸಾರಿಗೆ ಮತ್ತು ಪೊಲೀಸ್ ಇಲಾಖೆ:
ಆಟೋ, ಟೆಂಪೋ, ಕಾರು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಮಾತ್ರ ಸಾರಿಗೆ ನಿಯಮ ಸೀಮಿತವಾಗಿದೆ. ಸಾರಿಗೆ ಸಂಸ್ಥೆ ಬಸ್ಸಿನಲ್ಲಿ ಪ್ರತಿನಿತ್ಯ 80 ರಿಂದ 90ಜನ ಪ್ರಯಾಣಿಕರನ್ನು ಕುರಿಗಳ ಹಾಗೇ ತುಂಬುತ್ತಾರೆ. ಬಡವರ ಮೇಲೆ ಮಾತ್ರ ಬ್ರಹ್ಮಾಸ್ತ್ರ ತೋರಿಸುವ ಸಾರಿಗೆ ಇಲಾಖೆ ಸರ್ಕಾರಿ ಒಡೆತನದ ಬಸ್ಸುಗಳ ಮೇಲೆ ಸಾಋಇಗೆ ನಿಯಮ ಪ್ರಕಾರ ಕಾನೂನು ರೀತ್ಯಾ ಕ್ರಮ ಜರುಗಿಸುವುದಿಲ್ಲ.

ಕೊರಟಗೆರೆ ಬಸ್ ನಿಲ್ದಾಣದಲ್ಲಿ ಸರ್ಕಾರಿ ಬಸ್ಸುಗಳ ಆಗಮನ ಮತ್ತು ನಿರ್ಗಮನದ ನಾಮಫಲಕದ ಜೊತೆ ಪಾಸಿನ ದರಪಟ್ಟಿ ಅಳವಡಿಸಲು ಸೂಚಿಸಲಾಗಿದೆ. ಇಲಾಖೆಯಿಂದ ಪಾಸ್ ಪಡೆದಿರುವ ವಿದ್ಯಾಥರ್ಿಗಳಿಗೆ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸಲು ನಿವರ್ಾಹಕರು ಕಡ್ಡಾಯವಾಗಿ ಅವಕಾಶ ಮಾಡಿಕೊಡುವಂತೆ ತಿಳಿಸಲಾಗಿದೆ ಎಂದು ಕೊರಟಗೆರೆ ಬಸ್ ನಿಲ್ದಾಣ ನಿರ್ವಹಣೆಯ ಸಂತೋಷ್ ತಿಳಿಸುತ್ತಾರೆ.

ವಿದ್ಯಾಥರ್ಿಗಳ ಅನುಕೂಲಕ್ಕಾಗಿ ಮಧುಗಿರಿ ಮತ್ತು ಕೊರಟಗೆರೆಗೆ ಹೆಚ್ಚುವರಿ ಬಸ್ಸುಗಳ ಪೂರೈಕೆಗೆ ಈಗಾಗಲೇ ಸೂಚಿಸಲಾಗಿದೆ. ಮಧುಗಿರಿ ಡಿಪೋ ಬಸ್ಸುಗಳು ಕೊರಟಗೆರೆ ನಿಲ್ದಾಣಕ್ಕೆ ಆಗಮಿಸದಿರುವ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ವಿದ್ಯಾರ್ಥಿಗಳಿಗೆ ಏನೇ ಸಮಸ್ಯೆ ಇದ್ದರೂ ಮಾಹಿತಿ ನೀಡಿದರೆ ತಕ್ಷಣ ಬಗೆಹರಿಸುವುದಾಗಿ ತುಮಕೂರು ಸಾರಿಗೆ ಅಧಿಕಾರಿ ಪಕ್ರುದ್ದೀನ್ ತಿಳಿಸಿದರು.

Comment here