ತುಮಕೂರು ಲೈವ್

ಪೊಲೀಸರಿಂದ ಕೊರೊನಾ ಪಾಠ…!

Publicstory. in


ಚಿಕ್ಕನಾಯಕನಹಳ್ಳಿ: ಚಿಕ್ಕನಾಯಕನಹಳ್ಳಿ ಪೊಲೀಸರ ಕೊರೊನಾ ಕುರಿತು ಜನರಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಕೈ ಹಚ್ಚಿದ್ದಾರೆ.ಹೆಲ್ಮೆಟ್ ಇಲ್ಲ, ಮಾಸ್ಕ್ ಇಲ್ಲ ಎಂದು ಬರೀ ದಂಡ ವಿಧಿಸುವ ಪೊಲೀಸರನ್ನು ಕಂಡು ಜುಗುಪ್ಸೆಪಡುತ್ತಿದ್ದ ಜನರೀಗ ಪೊಲೀಸರ ಕೊರೊನಾ ಪಾಠಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.ದಂಡದಿಂದ ಮಾತ್ರವಲ್ಲ ಪಾಠದಿಂದಲೂ ಜನರ ಮನ ಪರಿವರ್ತನೆ ಸಾಧ್ಯ ಎಂದು ತೋರಿಸಲು ಹೊರಟ ಪೊಲೀಸರ ಕ್ರಮ ಚೆನ್ನಾಗಿದೆ.ಚಿಕ್ಕನಾಯಕನಹಳ್ಳಿ ವೃತ್ತದ ಸಿ.ಪಿ.ಐ ಶ್ರೀಮತಿ ವೀಣಾ ಎಸ್. ಎಂ ಮಾತನಾಡಿ,
ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು, ಮನೆಯಿಂದ ಹೊರಗಡೆ ಹೋಗಿ ವಾಪಸ್ ಮನೆಗೆ ಬಂದಾಗ ತಪ್ಪದೆ ಬಿಸಿನೀರಿನಿಂದ ಸ್ನಾನ ಮಾಡುವ ಬಗ್ಗೆ ಜನರಿಗೆ ತಿಳಿ ಹೇಳುವ ಕೆಲಸ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಭೆ ಸಮಾರಂಭಗಳಿಗೆ ಅವಶ್ಯಕತೆ ಇದ್ದರೆ ಮಾತ್ರ ಭಾಗವಹಿಸಿ, ಚಿಕ್ಕ ಮಕ್ಕಳು ಹಾಗೂ ವಯಸ್ಸಾದರವರ ಬಗ್ಗೆ ಎಚ್ಚರ ವಹಿಸುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದರು.ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬೇಡಿ, ಕೆಮ್ಮುವಾಗ ಮತ್ತು ಸೀನುವಾಗ ಕಡ್ಡಾಯವಾಗಿ ಕರಾವಸ್ತ್ರ ಬಳಸಿ, ಉಸಿರಾಟ ದಲ್ಲಿ ತೊಂದರೆ ಉಂಟಾದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ, ದಿನಸಿ ಅಂಗಡಿ, ಮೆಡಿಕಲ್, ಹಾಲು ಹಾಗೂ ದಿನನಿತ್ಯ ಬಳಕೆಗೆ ವಸ್ತುಗಳನ್ನು ತರಲು ಹೋದಗ 06 ಅಡಿ ಅಂತರವರುವ ಬಗ್ಗೆಯೂ ತಿಳಿವಳಿಕೆ ನೀಡಲಾಗುವುದು ಎಂದು ತಿಳಿಸಿದರು.ಪೊಲೀಸ್ ಅಧಿಕಾರಿ ರವೀಂದ್ರ.ಕೆ ನೇತೃತ್ವದಲ್ಲಿ ಅಭಿಯಾನ ಮೂಡಿಸುವುದಾಗಿ ತಿಳಿಸಿದರು.

Comment here