Publicstory. in
ಬೆಂಗಳೂರು: ಪ್ರದೇಶ ಕುರುಬರ ಸಂಘದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ಅವರ ಬೆಂಬಲಿಗರಲ್ಲಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ.
ಚುನಾವಣೆಯು ಈ ಇಬ್ಬರ ನಾಯಕರ ನಡುವಿಗೆ ಪ್ರತಿಷ್ಟೆಯಾಗಿ ಮಾರ್ಪಟ್ಟಿತ್ತು.
ಈ ಮೂಲಕ ತಮ್ಮ ಸಮಾಜದ ಮೇಲೆ ಹಿಡಿತ ಸಾಧಿಸುವ ಯತ್ನ ಈಶ್ವರಪ್ಪ ನಡೆಸಿದ್ದರು. ಆದರೆ ಅದಕ್ಕೆ ಬೆಂಬಲ ಸಿಕ್ಕಂತೆ ಕಾಣುತ್ತಿಲ್ಲ.
ಆಯ್ಕೆಯಾದವರ ವಿವರ;
ಅಧ್ಯಕ್ಷ: ಬಳ್ಳಾರಿ ಕೃಷ್ಣ (83 ಮತಗಳು), ಪ್ರಧಾನ ಕಾರ್ಯದರ್ಶಿ: ಮಾಜಿ ಮೇಯರ್ ವೆಂಕಟೇಶ ಮೂರ್ತಿ (81 ಮತಗಳು) ಕಾರ್ಯಾಧ್ಯಕ್ಷ: ಮೈಸೂರಿನ ಸುಬ್ಬಣ್ಣ (84), ಖಜಾಂಚಿ: ದೇವರಾಜು (84).
ಉಪಾಧ್ಯಕರು; ಕೃಷ್ಣ ಕುಮಾರ್ (78ಮತಗಳು), ಪುಟ್ಟಬಸವಯ್ಯ (78) ಮಿರ್ಜಾಪುರ ಮಹಾದೇವಪ್ಪ (76), ಎಂ.ಸಿ.ರಾಜಣ್ಣ (81), ವೆಂಕಟರಮಣಪ್ಪ(75) ಶಂಕರ ವಿಠೋಬ ಹೆಗಡೆ (79).
ಹಿರಿಯ ಉಪಾಧ್ಯಕ್ಷರಾಗಿ ಈರಣ್ಣ ಝಳಕಿ (83 ಮತಗಳು), ಜಗದೀಶ (78), ಬಸವರಾಜ್ ಬಸಲಗುಂದಿ (75), ರೇಖಾ ಹುಲಿಯಪ್ಪಗೌಡ (85) ಆಯ್ಕೆಯಾಗಿದ್ದಾರೆ.
Comment here