ಕವನ

ಪ್ರೇಮಿಗಳ ದಿನಾಚರಣೆ- ಕವನ ಓದಿ: ನಿನ್ನ ನೆನಪುಗಳು

ಡಾ.ರಜನಿ


ಬದುಕ ದಾಟಲು
ಹಾಯಿ ದೋಣಿ
ನಿಜ…
ಆದರೂ
ನಿನ್ನ ನೆನಪಲ್ಲಿ
ಹುಟ್ಟು ಹಾಕುವುದ
ಮರೆತಿರುವೆ.

ಬದುಕಿನ
ಮರುಭೂಮಿಯಲ್ಲಿ
ಒಯಸಿಸ್ ಗಳು.

ಪ್ರತೀ ಜಾತ್ರೆಯಲ್ಲೂ
ನುಗ್ಗಿ ಬರುವ
ಸುನಾಮಿಗಳು.

ಇಹ ಲೋಕವನ್ನೇ
ಕನಸು ಮಾಡಿ …
ನೆನಪನ್ನೇ ಸತ್ಯ ಮಾಡುವ
ಮಂತ್ರಗಳು.

ನನ್ನ ನಿತ್ಯ
ಬದುಕಿನಲ್ಲಿ
ಆವರಿಸಿಕೊಂಡ ಗುಂಗು.

ಪ್ರತಿಯೊಂದರಲ್ಲೂ
ನಿನ್ನನ್ನೇ
ಹುಡುಕುವ
ಪರಿ.

ಹೊಸ ಪ್ರೇಮಿಗಳ
ಕ್ಷಣಗಳಿಗೂ
ನಮ್ಮ ಹಳವಂಡಗಳಿಗೂ
ಸಮೀಕರಣ.

ರಜನಿ

Comment here