ಕವನ

ಪ್ರೇಮಿಗಳ ದಿನಾಚರಣೆ ಕವನ: ಪ್ರೇಮಿಗಳು

dr rajani
ಇಂದು ಪ್ರೇಮಿಗಳ ದಿನಾಚರಣೆ. ಕಚಗುಳಿ ಇಡುವ ನೆನಪುಗಳ ಮಾತೇ ಮಧುರ. ಪ್ರೇಮಿಗಳ ನೆನಪು, ಆಟೋಟಗಳು ಸಹ ಮಧುರ. ಇಂತಹ ನೆನಪುಗಳನ್ನು ಕವನವಾಗಿಸಿದ್ದಾರೆ ಡಾ.ರಜನಿ ಅವರು.

ಯಾವಾಗಲೋ
ಸರಿದ ಮಧುರ
ಕ್ಷಣಗಳ ಮೆಲುಕಲ್ಲಿ..

ನಿನ್ನದೇ ಸ್ಪರ್ಶದ
ಹಳವಂಡದಲ್ಲಿ…

ಮಾತಿನ ವರಸೆಯ
ಗುಂಗಿನಲ್ಲಿ..

ಕೆಂಪು ಗುಲಾಬಿಗೆ
ಹುಡುಕುವ ಹೇರ್ಪಿನ್ನಲ್ಲಿ..

ಕೈ ಒರೆಸಲು ಕೊಟ್ಟ
ಕರ್ಚಿಫ್ ನಲ್ಲಿ…

ಆರ್ಡರ್ ಮಾಡಿದ
ಚಿಕನ್ ಕಬಾಬಿನಲ್ಲಿ

ವೈಟರ್ ಗೆ ಬಿಟ್ಟ
ಟಿಪ್ಸ್ ನಲ್ಲಿ..

ಆಯ್ದು ತಂದ
ಪಾರಿಜಾತದಲ್ಲಿ..

ಯಾವಾಗಲೋ ಉಟ್ಟಿದ್ದ
ಕೆಂಪು ಸೀರೆ ಫೋಟೋದಲ್ಲಿ..

ನಿನ್ನ ನೆನಪುಗಳ
ಭರಾಟೆಯ ತೇರು..

ಹೊಸ ನೆನಪುಗಳ
ಉಂಟು ಮಾಡು ಬಾ..

ಪ್ರೇಮಿಗಳ ದಿನದ
ನೆಪದಲ್ಲಿ.


ಡಾ. ರಜನಿ.

Comment here