ತುಮಕೂರು ಲೈವ್

ಬಡವರ ತಾಯಿ ಇನ್ನಿಲ್ಲ

Publicstory. in


ಪಾವಗಡ: ತಾಲ್ಲೂಕಿನಲ್ಲಿ ಬಡ ಗರ್ಭಿಣಿಯರಿಗೆ ಹೆರಿಗೆ ಮಾಡಿಸುವ ಮೂಲಕ ಬಡವರ ತಾಯಿ ಎಂದೇ ಹೆಸರಾಗಿದ್ದ ಸತ್ಯಮ್ಮ (77 ವರ್ಷ) ಶುಕ್ರವಾರ ನಿಧನರಾದರು.

ನೂರಾರು ಗರ್ಭಿಣಿಯರು,‌ಮಕ್ಕಳ ಜೀವ ಉಳಿಸಿದ್ದಾರೆ. ಪಾರಂಪರಿಕ ವೈದ್ಯ ಸೇವೆಯಲ್ಲು ತೊಡಗಿಕೊಂಡಿದ್ದರು. ಬಡ ಬಗ್ಗರನ್ನು ಕಂಡರೆ ವಿಶೇಷ ಪ್ರೀತಿ, ಕಾಳಜಿ ತೋರುತ್ತಿದ್ದರು.

ಅಂತ್ಯಕ್ರಿಯೆಯನ್ನು. ಇಂದು ಸಂಜೆ ಒಳಗೆ ಪಾವಗಡ ವೆಂಕಟಾಪುರ ರಸ್ತೆ ಯ ಹೌಸಿಂಗ್ ಬೋರ್ಡ್ದ ಹಿಂಬಾಗದ ಜಮೀನಲ್ಲಿ ನಡೆಸಲಾಗುತ್ತದೆ.

ಮೃತರಿಗೆ ಪತ್ರಕರ್ತ ಸೊಗಡು ವೆಂಕಟೇಶ್ ಸೇರಿದಂತೆ ನಾಲ್ಕು ಜನ ಗಂಡು ಮಕ್ಕಳು ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಆಯುರ್ವೇದ ಔಷಧಿ ನೀಡುವುದು ಪ್ರಸೂತಿ ಕಾರ್ಯದಲ್ಲಿ ಹೆಸರು ಪಡೆದಿರುವ ಸತ್ಯಮ್ಮ ಸಾವಿರಾರು ಗರ್ಭಿಣಿಯರಿಗೆ ಹೆರಿಗೆ ಮಾಡಿಸಿ ಮಾಡಿಸಿ ಸೇವಾಕಾರ್ಯ ಮೆರೆದಿದ್ದಾರೆ.

ಆಯುರ್ವೇದ ವೈದ್ಯ ಸೇವೆಗಾಗಿ ಇವರ ಪತಿ ಕೆ ವೆಂಕಟಪ್ಪ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು.

Comments (1)

  1. ಮೃತರ ಸೇವೆಗೆ ನನ್ನ ನಮನಗಳು💐💐💐ಹಾಗೆಯೇ ದುಃಖ ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ಭಗವಂತ ಕರುಣಿಸಲಿ😢😢

Comment here