ರಘು ಶ್ರವಣಗೆರೆ


ಸೂರ್ಯನೆದುರು ನಿಂತು ದಣಿದು
ಭಾರಿ ದಣಿದಿರುವೆ
ಎನ್ನ ಬಾಯಿಗೆ ನೀರ ಚೆಲ್ಲುವೆಯಾ…

ಎಷ್ಟೋ ಜನರ ಪಾಪ ತೊಳೆದಿರುವೆ,
ಎಷ್ಟೋ ಜನರ ಬಾಯರಿಕೆ ತೀರಿಸಿರುವೆ,
ಎಷ್ಟೋ ಜನ, ಪ್ರಾಣಿಯ ಕಲ್ಮಶವ ಲೆಕ್ಕಿಸದೆ ಹರಿದಿರುವೆ, ಓ‌ ಗಂಗೆ ಬಾಯಾರಿರುವೆ ದಣಿವು ತೀರಿಸುವೆಯಾ


ಕಾರ್ಟೂನ್ ಕಾರ್ನರ್; ಕೆ.ಎಂ.ಮುಸ್ತಾಫ, ರಿಪ್ಪನ್ ಪೇಟೆ


ಮುಂಜಾನೆಯ ಸಮಯದಲ್ಲಿ ನಿನ್ನ ನಮಸ್ಕರಿಸಲು ಬರುವವರನ್ನು ನನ್ನ ಹೆಗಲ ಮೇಲೆತ್ತಿ ಮೆರವೆ..
ಬಾರಿ ದಣಿದಿರುವೆ
ಎನ್ನ ಬಾಯಿಗೆ ನೀರ ಚಲ್ಲುವೆಯಾ

ಸೂರ್ಯ ದೇವ‌ ಮೋಡಗಳ ಮೋಡಗಳ ಜೊತೆ ಮಾತುಕತೆ ಮುಗಿಸಿ ಬೇಗ, ಬೇಗ… ಮಳೆಯ ಮಖಾಂತರ ಬಾಯಾರಿಕೆ ತೀರಿಸು ಗಂಗೆ ಕಾದಿರುವೆ ನಿನಾಗಾಗಿ ಬಾಯಾರಿರುವೇ, ದಣಿದ ಮನ…ನನ್ನ ಕಡೆಯನ್ನೊಮ್ಮೆ ನೋಡಿ‌ ಬಿಡು, ಕ್ಷಮೆ ಎನ್ನುವುದು ನಿನ್ನ ಮೂಲ ಗುಣದಲ್ಲೇ ಇದೆಯಲ್ಲ…


ರಘು ಶ್ರವಣಗೆರೆ ಅವರದು ಚಿತ್ರದುರ್ಗ ಜಿಲ್ಲೆ ಹಿರೇಯೂರು ತಾಲ್ಲೂಕಿನ ಶ್ರವಣಗೆರೆ. ಗುಬ್ಬಿ ಸಿಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಅವರು ಸಾಹಿತ್ಯದ ಕಡೆಯೂ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಪ್ರಕೃತಿಯನ್ನು ನೋಡುವ ಅವರ ಬಗೆ ಕುತೂಹಲ ಮೂಡಿಸುತ್ತದೆ.

Comment here