ಜಸ್ಟ್ ನ್ಯೂಸ್

ಬೆಂಕಿ ಹಚ್ಚಿಕೊಂಡವ ಉಳಿಸಲು ಹೋದ ಪೊಲೀಸರಿಗೆ ಗಾಯ

Publicstory


ತುಮಕೂರು: ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಲು ಹೋಗಿ ಇಬ್ಬರು ಪೋಲೀಸರು ಗಾಯಗೊಂಡಿರುವ ಘಟನೆ ಸೋರೆಕುಂಟೆ ಗ್ರಾಮದಲ್ಲಿ ನಡೆದಿದೆ.

ಲಿಂಗದಹಳ್ಳಿ ಗ್ರಾಮದ ಗೋವಿಂದರಾಜು(40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಸ್ತಳೀಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ,ಕುಟುಂಬದವರ ಜೊತೆ ಪದೇ ಪದೇ ಜಾಗಳವಾಡುತ್ತಿದ್ದ ಈತ ಗುರುವಾರ ರಾತ್ರಿ ಗಲಾಟೆ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮನೆಯವರನ್ನು ಹೆದರಿಸಿದ್ದಾನೆ.ಈತನ ವರ್ತನೆಯಿಂದ ಹೆದರಿದ ಮನೆಯವರು ಪೋಲೀಸ್ ಸಹಾಯವಾಣಿಗೆ ಕರೆ ಮಾಡಿ ವಿಚಾರ ಮುಟ್ಟಿಸಿದ್ದಾರೆ.

ಸಹಾಯವಾಣಿ ಪೊಲೀಸರು ಸ್ತಳಕ್ಕೆ ಬರುವ ವೇಳೆಗೆ ಗೋವಿಂದ ರಾಜು ಕೊಠಡಿಯೊಳಗೆ ಸೇರಿ ಸೀಮೆಎಣ್ಣೆ ಸುರಿದು ಬೆಂಕಿಹಚ್ಚಿಕೊಂಡಿದ್ದಾನೆ,ಸ್ತಳಕ್ಕೆ ಬಂದ ಪೋಲೀಸರು ಕೊಠಡಿ ಬಾಗಿಲು ತೆಗೆದು ಆತನನ್ನು ರಕ್ಷಿಸಲು ಮುಂದಾದಾಗ
ಗ್ರಾಮಾಂತರ ಠಾಣೆ ಪೋಲೀಸ್ ಸಿಬ್ಬಂದಿ ಗವಿರಂಗಪ್ಪ ಎಂಬುವವರಿಗೂ ಸುಟ್ಟ ಗಾಯಗಳಾಗಿವೆ.ಗಾಯಗೊಂಡ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

Comment here