ಜಸ್ಟ್ ನ್ಯೂಸ್

ಬೆಂಗಳೂರು ಗಲಭೆ: ಶಾಸಕರ ಮನೆಗೆ ಬೆಂಕಿ, ಕರ್ಪ್ಯೂ ಜಾರಿ

ಬೆಂಗಳೂರು: ಫೇಸ್ ಬುಕ್ ನಲ್ಲಿ ‘ಇಸ್ಲಾಂ ಧರ್ಮದ ಸ್ಥಾಪಕರಾದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಪ್ರಕಟಿಸಲಾಗಿದೆ’ ಎಂದು ಆರೋಪಿಸಿ ಗುಂಪೊಂದು ಇಲ್ಲಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗೂ ಕಾವಲ್‌ ಬೈರಸಂದ್ರದಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದೆ.

ಮನೆಯ ಮುಂದೆ ನಿಂತಿದ್ದ ಕಾರು, ಬೈಕ್ ಗಳಿಗೂ ಬೆಂಕಿ ಹಚ್ಚಿದೆ.

ಈ ಮೂರು ಬಡಾವಣೆಗಳಲ್ಲಿ ರಾತ್ರಿ ನಿಂತ ನಿಂತಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿದೆ. ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದೆ .

ಶಾಸಕರ‌ ಸಂಬಂಧಿಯೊಬ್ಬ ಫೇಸ್ ಬುಕ್ ನಲ್ಲಿ ಈ ಅವಹೇಳನಕಾರಿ‌ ಪೋಸ್ಟ್ ಹಾಕಿದ್ದು, ಬಂಧಿಸುವಂತೆ ಒತ್ತಾಯಿಸಿದೆ. ಆತನನ್ನು ಬಂಧಿಸುವುದಾಗಿ ಪೊಲೀಸರು ಹೇಳಿದರೂ ಕೇಳದೇ ದಾಂಧಲೆ ನಡೆಸಿದೆ.

ಸಿಸಿಬಿ ಪೊಲೀಸರಿಗೆ ಪ್ರಕರಣ ತನಿಖೆ ನೀಡಿದ್ದು, ಅವರು ಈಗಾಗಲೇ ಮೂವತ್ತು ಅಧಿಕ ಜನರನ್ನು ಬಂಧಿಸಿದ್ದಾರೆ.

ಮೂರು ಪ್ರದೇಶಗಳ ವ್ಯಾಪ್ತಿಯಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದೆ.

ಈಗ ಪರಿಸ್ಥಿತಿ ಹತೋಟಿಗೆ ಬಂದಿದೆ.

Comment here