ಜಸ್ಟ್ ನ್ಯೂಸ್

ಭಾನುವಾರ ಡಾ. ಎಸ್.ರಮೇಶ್ ಗೆ ಅಭಿನಂದನಾ ಸಮಾರಂಭ, ವಿಚಾರ ಸಂಕಿರಣ

ಪಬ್ಲಿಕ್ ಸ್ಟೋರಿ


ತುಮಕೂರು: ನಗರದ ಸೂಫಿಯಾ ಕಾನೂನು ಕಾಲೇಜು, ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರವು ಇದೇ ಭಾನುವಾರ ಜುಲೈ 18ರಂದು‌ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಡಾ. ಎಸ್.ರಮೇಶ್ ಅವರಿಗೆ ಅಭಿನಂದನಾ ಸಮಾರಂಭ ಹಾಗೂ ವಿಚಾರಗೋಷ್ಠಿ ಆಯೋಜಿಸಿದೆ.

ಕಾನೂನು ಕಾಲೇಜಿ‌ನ ಪ್ರಾಂಶುಪಾಲರಾದ ಎಸ್. ರಮೇಶ್ ಅವರು ಈಚೆಗಷ್ಟೇ ಕಾನೂನು ವಿಭಾಗದಲ್ಲಿ ಶಿವಮೊಗ್ಗ ವಿಶ್ವ ವಿದ್ಯಾಲಯ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

ರಮೇಶ್ ಅವರು ವಿದ್ಯಾರ್ಥಿ ದೆಸೆಯಿಂದಲೂ ವಿದ್ಯಾರ್ಥಿ, ಯುವಜನರ ಸಂಘಟನೆಯಲ್ಲಿ ತೊಡಗಿದ್ದವರು. ಪತ್ರಕರ್ತರಾಗಿಯೂ ಹೆಸರು ಗಳಿಸಿದವರು.

ಹೈಕೋರ್ಟ್ ವಕೀಲರಾಗಿಯೂ ಹೆಸರು ಮಾಡಿದವರು. ವರದಕ್ಣಿಣೆ ವಿರೋಧಿ ವೇದಿಕೆ, ಸ್ವಾಂತನಾ ಕೇಂದ್ರದ ಮೂಲಕ ಅಬಲ ಮಹಿಳೆಯರ ಸಬಲೀಕರಣಕ್ಕಾಗಿ ಹೋರಾಡಿದವರು. ತುಮಕೂರಿನ ಅನೇಕ ಸರ್ಕಾರಿ ಶಾಲಾ,‌ಕಾಲೇಜುಗಳ ಉಳಿವಿಗಾಗಿ ಮುಂಚೂಣಿ ಹೋರಾಟ ರೂಪಿಸಿದವರು.

ಅವರು ಸಿಡಬ್ಲ್ಯುಸಿ ಯ ಸದಸ್ಯರಾಗಿದ್ದ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಅನೇಕ ಮಹತ್ವದ ಕೆಲಸ ಮಾಡಿದ್ದಾರೆ.

ಅವರ ಅವಧಿಯಲ್ಲಿ ಬಾಲ ಕಾರ್ಮಿಕರಾಗಿದ್ದ ಅನೇಕ ಮಕ್ಕಳು ಶಾಲೆ ಕಾಣುವಂತಾಯಿತು. ತುಮಕೂರು ನಗರದಲ್ಲಿ ಕಸ ಎತ್ತಲು ಬಳಕೆ ಮಾಡಿಕೊಳ್ಳುತ್ತಿದ್ದ ಬಾಲ ಕಾರ್ಮಿಕನ ಸುದ್ದಿ ನೋಡಿ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಲು ಕಾರಣರಾಗಿದ್ದರು. ಆ ಹುಡುಗನಿಗೆ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಯಿತು.

ತುಮಕೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರು ಆಗಿರುವ ಅವರು ತುಮಕೂರು ನಗರದ ಮಾರಿಯಮ್ಮ ಕೊಳೆಗೇರಿಯ ಪ್ರಕರಣದ ಪರವಾಗಿ ವಾದ ಮಂಡಿಸಿದ್ದರು. ನಗರದ ಬಸ್ ನಿಲ್ದಾಣದ ಪಕ್ಕವೇ ಇರುವ ಈ ಜಾಗದಲ್ಲಿ ಈಗ ಕೊಳೆಗೇರಿ‌ ನಿವಾಸಿಗಳಿಗಾಗಿ ಸ್ಮಾರ್ಟ್ ಸಿಟಿ ಯೋಜನೆಯಡಿ ಮನೆಗಳ ನಿರ್ಮಾಣ ನಡೆಯುತ್ತಿದೆ.

ಇದನ್ನು ಓದಿ: ರಮೇಶ್ ಗೆ ಕಾನೂನು ವಿಭಾಗದಲ್ಲಿ ಡಾಕ್ಟರೇಟ್

ಯಾವಾಗಾ ಕಾರ್ಯಕ್ರಮ: ಬೆಳಿಗ್ಗೆ 10ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರು ವಿ.ವಿ.ಯ ರಾಮನಗರ ಸ್ನಾತಕೋತ್ತರ ಕೇಂದ್ರದ ವಿಶೇಷ ಅಧಿಕಾರಿ ಡಾ. ಡೊಮಿನಿಕ್ ಕಾರ್ಯಕ್ರಮ ಉದ್ಘಾಟಿಸುವರು. ವಿಚಾರಗೋಷ್ಠಿಯಲ್ಲಿ ಮಾಧ್ಯಮ, ನ್ಯಾಯಾಂಗದ ಪ್ರಸ್ತುತೆ ಕುರಿತು ಮಾತನಾಡುವರು.

ಬೆಂಗಳೂರಿನ ಅಲೆಯನ್ಸ್ ವಿ.ವಿ. ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಎಸ್.ರೆಡ್ಡಿ, ಹಿರಿಯ ಕಾರ್ಮಿಕ ಮುಖಂಡ ಕೆ.ಎನ್.ಉಮೇಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮನೆ ಗೋಪಾಲಗೌಡ, ಗಂಗವಾಹಿನಿ ಸಂಪಾದಕ ಆರ್.ಕಾಮರಾಜು ಭಾಗವಹಿಸುವರು.

Comment here