ತುಮಕೂರ್ ಲೈವ್

ಮತದಾರರ ಪಟ್ಟಿ ಪರಿಷ್ಕರಣೆಗೆ ನೀವು ಮಾಡಬೇಕಾದುದು ಏನು?

ತುಮಕೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿದೆ. ಮತದಾರರ ಪಟ್ಟಿಯಲ್ಲಿರುವ ತಪ್ಪು ತಿದ್ದುಪಡಿಗೆ

ನವೆಂಬರ್ 18ವರೆಗೆ ಅವಕಾಶ ಕಲ್ಪಿಸಲಾಗಿದೆ.
ಚುನಾವಣಾ ಆಯೋಗ 2020ರ ಜನವರಿ 1ನ್ನು ಅರ್ಹತಾ ದಿನವೆಂದು ಪರಿಗಣಿಸಿದೆ.,ಹೀಗಾಗಿ ಬಿಎಲ್ಒಗಳು ಮನೆಮನೆಗೂ ತೆರಳಿ ಮತದಾರರ ಪಟ್ಟಿ ಪರಿಶೀಲಿಸುತ್ತಿದ್ದಾರೆ. ಆ ಮಾಹಿತಿ ನೀಡಬೇಕು. ಜೊತೆಗೆ ಮತದಾರರೇ ಎನ್ವಿಎಸ್ಪಿ ಪೋರ್ಟಲ್ ಹಾಗೂ ವೋಟರ್ ಹೆಲ್ಪ್ಲೈನ್ ಆ್ಯಪ್ ಮೂಲಕ ಖುದ್ದು ಪರಿಶೀಲನೆ ಮಾಡಬಹುದು ಎನ್ನುತ್ತಾರೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್.

ಮತದಾರರ ಭಾವಚಿತ್ರಗಳು ಸರಿಯಾಗಿ ಮುದ್ರಣವಾಗದೇ ಇದ್ದಲ್ಲಿ ಭಾವಚಿತ್ರ ನೀಡಿ ತಿದ್ದುಪಡಿ ಮಾಡಿಸಿಕೊಳ್ಳಲು ಅವಕಾಶವಿದೆ. ತಿದ್ದುಪಡಿ ಹಾಗೂ ಬಿಡತಕ್ಕವುಗಳಿಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಜನವರಿ 2020ಕ್ಕೆ 18 ವರ್ಷ ಪೂರ್ಣಗೊಳ್ಳಲಿರುವ ಯುವ ಮತದಾರರು ನಮೂನೆ -6 ರಲ್ಲಿ ಅರ್ಜಿ ತುಂಬಿ ಬಿಎಲ್ಒಗಳಿಗೆ ನೀಡಬೇಕು.

ಜಿಲ್ಲೆಯಲ್ಲಿ 22,09,900 ಮತದಾರರ ಪೈಕಿ 13,09,604 ಮತದಾರರು ತಮ್ಮ ಮಾಹಿತಿ ಪರಿಶೀಲಿಸಿಕೊಂಡಿದ್ದು, ಇನ್ನು 9,00,296 ಮತದಾರರು ಪರಿಶೀಲಿಸಿಕೊಳ್ಳಲು ಬಾಕಿ ಇರುತ್ತದೆ. ಸುಮಾರು 61753 ತಿದ್ದುಪಡಿ ಗುರುತಿಸಲಾಗಿದೆ.

Comment here