ತುಮಕೂರು ಲೈವ್

ಮನುಕುಲ ಉಳುವಿಗೆ ಹೋರಾಟ ಅಗತ್ಯ – ಕೆ.ದೊರೈರಾಜ್

Publicstory.in

Tumkur: ಕೊರೊನಾ ಸಂದರ್ಭದಲ್ಲಿ ಎಲ್ಲಾ ವರ್ಗದ ಕಾರ್ಮಿಕರು ಆತಾಶರಾಗದೆ ತಮ್ಬ ಬದುಕು ಹಾಗೂ ಮನುಕುಲದ ಉಳುವಿಗೆ ಜಾತಿ, ಮತ-ಧರ್ಮವನ್ನು ಲೆಕ್ಕಿಸದೆ ಹೋರಾಟ ಮುಂದುವರಿಸಬೇಕು ಎಂದು ಜನಪರ ಚಿಂತಕ ಕೆ.ದೊರೈರಾಜ್ ಹೇಳಿದರು.

ತುಮಕೂರು ನಗರದ ಜನಚಳವಳಿ ಕೇಂದ್ರದಲ್ಲಿ ಸಿಐಟಿಯು ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕಾರ್ಮಿಕರ ದಿನ ಆಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜನಸಾಮಾನ್ಯರು ಮತ್ತು ಕಾರ್ಮಿಕರ ಬದುಕು ಅಕ್ಷರಶಃ ಬೀದಿಗೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ದುಡಿಯವ ವರ್ಗದ ರಕ್ಷಣೆಯ ಜವಾಬ್ದಾರಿ ಹೊರಬೇಕು ಎಂದು ಒತ್ತಾಯಿಸಿದರು.
ವಿಶ್ವದಲ್ಲಿ ಕೊರೊನ ಕಾಯಿಲೆಯನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಚಿಂತೆ ಎಲ್ಲರನ್ನು ಕಾಡುತ್ತಿದೆ. ಆದರೆ ಭಾರತೀಯ ಪರಿಸ್ಥಿತಿಯಲ್ಲಿ ಜಾತಿ, ಧರ್ಮ, ಜನಾಂಗ ನಿಂದನೆ ಹುಟ್ಟುಹಾಕುವ ಯತ್ನಗಳು ನಡೆಯುತ್ತಲೇ ಇವೆ. ಇಂತಹ ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬಾರದು. ಪ್ರಚೋದಿತರಾಗಬಾರದು. ಎಲ್ಲರ ಬದುಕನ್ನು ಉಳಿಸಲು ಸ್ವವಿಮರ್ಶೆ ಮಾಡಿಕೊಂಡು ಹೋರಾಟ ನಡೆಸಬೇಕಾಗಿದೆ ಎಂದರು.
ಕೊರೊನಾ ವಾರಿಯರ್ ಗಳಾಗಿ ದುಡಿಯುತ್ತಿರುವ ಪೌರಕಾರ್ಮಿಕರು ಕೆಲಸ ಮಾಡಿ ಮನೆಗೆ ತೆರಳುವ ಕೆಲಸದ ಸ್ಥಳದಲ್ಲೇ ಮುನ್ನ ಸ್ನಾನ ಮಾಡಿಕೊಂಡು ಹೋಗುವಂತಹ ವ್ಯವಸ್ಥೆ ಮಾಡಬೇಕು. ತುಮಕೂರು ನಗರದಲ್ಲಿ ಸ್ನಾನಗೃಹಗಳಿದ್ದರೂ ಪೌರಕಾರ್ಮಿಕರ ಸ್ನಾನಕ್ಕೆ ಅವಕಾಶಕೊಡುತ್ತಿಲ್ಲ. ಆಯುಕ್ತರಿಗೆ ಮನವಿ ಕೊಟ್ಟು ಖುದ್ದಾಗಿ ಹೇಳಿದರೂ ಕಿವಿಗೊಡುತ್ತಿಲ್ಲ. ಪೌರಕಾರ್ಮಿಕರ ರಕ್ಷಣೆಗೆ ಕಾಳಜಿ ವಹಿಸುತ್ತಿಲ್ಲ ಎಂದು ಹೇಳಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘದ ಜಿಲ್ಲಾದ್ಯಕ್ಷ ಎನ್.ಕೆ.ಸುಬ್ರಮಣ್ಯ ಮಾತನಾಡಿ ಕಾರ್ಮಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆಯೂ ಉದ್ಯೋಗ, ವೇತನ ಕಡಿತ ಮಾಡುವಂತಹ ಕೆಲಸ ನಡೆಯುತ್ತಿದೆ. ಇರುವ ಕೆಲಸವನ್ನು ಉಳಿಸಕೊಂಡು ಹೋಗಲು ಸಂಘಟಿತ ಹೋರಾಟವೊಂದೇ ಮಾರ್ಗ. ಸರ್ಕಾರದ ಬಳಿ ಅಸಂಘಟಿತ ವಲಯದಲ್ಲಿ ಕಾರ್ಮಿಕರು ಎಷ್ಟು ಮಂದಿ ಇದ್ದಾರೆಂಬ ವರದಿಯೇ ಇಲ್ಲ ಎಂದು ದೂರಿದರು.
ವಿಮಾ ನೌಕರರ ಸಂಘದ ಜಿಲ್ಲಾಧ್ಯಕ್ಷ ನಂಜುಂಡಸ್ವಾಮಿ ಮಾತನಾಡಿ, ಕಾರ್ಮಿಕರು ಕೆಲಸ ಮುಗಿದ ಮೇಲೆ ಕೈಕಾಲು ತೊಳೆಯಬೇಕು. ಸ್ಯಾನಿಟೈಜರ್ ಬಳಸುವುದಕ್ಕಿಂತ ಸೋಪಿನಿಂದ ಕೈತೊಳೆಯುವುದು ಉತ್ತಮ. ಕಣ್ಣ, ಮೂಗು ಮತ್ತು ಬಾಯಿಯನ್ನು ಪದೇಪದೇ ಮುಟ್ಟಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಬಿ.ಉಮೇಶ್ ಮಾತನಾಡಿ, ಕಟ್ಟಡ ಕಾರ್ಮಿಕರು ತಮ್ಮ ದುಡಿಮೆಯ ಹಣವನ್ನು ಕಲ್ಯಾಣ ಮಂಡಳಿಯಲ್ಲಿ ಇಟ್ಟಿದ್ದಾರೆ. ಆ ಹಣದಲ್ಲೇ ಕಟ್ಟಡ ಕಾರ್ಮಿಕರಿಗೆ 2 ಸಾವಿರ ಹಾಕಿ ಇದು ಕೇಂದ್ರ ಸರ್ಕಾರದ್ದು ಎಂಬಂತೆ ಬಿಂಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಎಂದರು. ಕೊರೊನ ವಿಷಯದಲ್ಲಿ ಒಂದು ಧರ್ಮವನ್ನು ಗುರಿ ಮಾಡುತ್ತಿರುವ ಯತ್ನಗಳು ನಡೆಯುತ್ತಿದ್ದು ಇದನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರನ್ನು12 ಗಂಟೆ ದುಡಿಸುವ ಯತ್ನಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕ ಸಂಘಟನೆಗಳ ವಿರೋಧವಿದೆ. ನಾವು ಎಲ್ಲರಿಗೂ ಕೆಲಸ ಕೊಡಬೇಕು. 4-6 ಗಂಟೆ ಪಾಳಿಗಳನ್ನು ಮಾಢಬೇಕು.ಯಾವುದೇ ಕಾರ್ಮಿಕರನ್ನು ಕೆಲಸದಿಂದ ತೆಗೆಯಬಾರದು. ಕಾರ್ಖಾನೆಗಳ ಮಾಲಿಕರು ಕಾರ್ಮಿಕರಿಗೆ 2 ತಿಂಗಳು ವೇತನ ನೀಡಿದರೂ ಅವರಿಗೆ ನಷ್ಟವಿಲ್ಲ. ಲಾಭದಲ್ಲಿ ಶೇ.10ರಷ್ಟು ವೆಚ್ಚ ಮಾಡಿದರೆ ಸಾಕು. ಇಷ್ಟನ್ನು ಮಾಡಲು ಮಾಲಿಕರು ಒಪ್ಪುತ್ತಿಲ್ಲ. ಇವರಿಗೆ ಕಾರ್ಮಿಕರ ಕುರಿತು ಕಾಳಜಿ ಇಲ್ಲವೆಂಬುದು ಇದರಿಂದ ಅರ್ಥವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವೆಂಡಿಂಗ್ ಕಮಿಟಿ ಸದಸ್ಯ ಟಿ.ಎಸ್.ರಾಜಶೇಖರ್, ಬೋಧಕೇತರ ನೌಕರರ ಸಂಘದ ಟಿ.ಜಿ.ಶಿವಲಿಂಗಯ್ಯ, ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಖಜಾಂಚಿ ಎ.ಲೋಕೇಶ್, ಅಂಗನವಾಡಿಯ ಜಬೀನ ಮಾತನಾಡಿದರು. ಪೌರಕಾರ್ಮಿಕರ ಸಂಘದ ಸುರೇಂದ್ರ ಉಪಸ್ಥಿತರಿದ್ದರು. ರಂಗಧಾಮಯ್ಯ ವಂದಿಸಿದರು.

Comment here