ಪೊಲಿಟಿಕಲ್

ಮಾಜಿ‌ ಶಾಸಕರಿಗೆ ಬೆಳಗುಂಬ ವೆಂಕಟೇಶ್ ಬಹಿರಂಗ ಪತ್ರ

ತುಮಕೂರು ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದ ಘಟನೆ ಬಳಿಕ ಶಾಸಕ ಗೌರಿಶಂಕರ್, ಮಾಜಿ ಶಾಸಕ ಸುರೇಶಗೌಡ ಅವರ ಬಹಿರಂಗ ಪತ್ರಗಳ ಭರಾಟೆ ಜೋರಾಗಿದೆ. ಪತ್ರಗಳ ಮುಖೇನವೇ ಒಬ್ಬರಿಗೊಬ್ಬರು ಮಾತುಗಳಿಂದ ತಿವಿಯುತ್ತಿದ್ದಾರೆ, ಛೇಡಿಸುತ್ತಿದ್ದಾರೆ. ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಈ ಬೆಳವಣಿಗೆಗಳ ನಡುವೆಯೇ, ಜೆಡಿಎಸ್ ಪರಿಶಿಷ್ಟ ವಿಭಾಗದ ಬೆಳಗುಂಬ ವೆಂಕಟೇಶ್ ಅವರು ಮಾಜಿ ಶಾಸಕರಿಗೊಂದು ಬಹಿರಂಗ ಪತ್ರ ಬರೆದಿದ್ದಾರೆ. ಪತ್ರ ಯಥಾವತ್ ಪ್ರಕಟಿಸಲಾಗಿದೆ.

ಸನ್ಮಾನ್ಯ ಮಾಜಿ ಶಾಸಕರಾದ ಬಿ.ಸುರೇಶ್ ಗೌಡ ರವರೇ, ತಮಗೆ ಧನ್ಯವಾದಗಳು.

ತಾವು ಸದಾ ಪ್ರಚಾರದಲ್ಲಿ ಇರಬೇಕು ಎಂಬಂತೆ ಕಾಣುತ್ತಿದೆ.. ಅದಕ್ಕೆ ನನ್ನ ಸಲಹೆಗಳು..

ಸನ್ಮಾನ್ಯರೇ. ಮಹಾಮಾರಿ ಕೊರೊನಾ ಇಡೀ ದೇಶ ಆವರಿಸಿದೆ.. ಇಂತಹ ಸಂದರ್ಭದಲ್ಲಿ. ಸಹಾಯ ಹಸ್ತ ನೀಡಿರುವರು ಬಹಳಷ್ಟು ಜನ ಇದ್ದಾರೆ.. ಹಣದ ರೂಪದಲ್ಲಿ, ವಸ್ತುವಿನ ರೂಪದಲ್ಲಿ ಸಹಾಯ ಮಾಡಿದ್ದಾರೆ.

ಇವರು – ಕೇಂದ್ರ ಸರ್ಕಾರಕ್ಕೆ ಹಾಗೂ ರಾಜ್ಯ ಸರ್ಕಾರಗಳು – ಇವರು ಕೊಟ್ಟಂತಹ. ಹಣವು ದುರ್ಬಳಕೆಯಾಗದೇ ಸಾಮಾನ್ಯ ಜನರಿಗೆ ತಲುಪಿದೆಯೇ. ಮತ್ತು ಈ ಎರಡು ಸರ್ಕಾರಗಳು ಸರ್ಕಾರದಿಂದ ಮಾಡಿರುವ ಖರ್ಚು, ವೆಚ್ಚಗಳ ಬಗ್ಗೆ, ಯಾವ ಯಾವ ಉದ್ದೇಶಗಳಿಗೆ ಅನುದಾನಗಳ ಬಗ್ಗೆ (ಪ್ಯಾಕೇಜ್ ಗಳ ಬಗ್ಗೆ ತನಿಖೆ ನಡೆಸುವಂತೆ) ವಿವರ ಕೇಳಿ ಹೋರಾಟ ಹಮ್ಮಿಕೊಳ್ಳಿ.

ಇನ್ನು ತಾವು, ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ – 10 ವರ್ಷ ಅಧಿಕಾರ ಮಾಡಿದ ಸಂದರ್ಭದಲ್ಲಿ – ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ – ಬಿಡುಗಡೆ ಮಾಡಿರುವ ಅನುದಾನಗಳ ಬಗ್ಗೆ – ಸರಿಯಾಗಿ ಸದ್ಬಳಕೆ ಆಗಿದೆ ಎಂಬುದರ ಬಗ್ಗೆ. ಮತ್ತು ತಮ್ಮ ಕ್ಷೇತ್ರದಲ್ಲಿ – ಅಂಬೇಡ್ಕರ್ ಸಮುದಾಯ ಭವನ ವಾಲ್ಮೀಕಿ ಸಮುದಾಯ ಭವನ. ಇವುಗಳನ್ನು ಯಾವ ಯಾವ ಗ್ರಾಮದಲ್ಲಿ ಕಟ್ಟಿದ್ದಾರೆ – ಕಟ್ಟದೇ – ಹಣ ಡ್ರಾ ಮಾಡಿದ್ದಾರೆ ಎಂಬುದರ ಬಗ್ಗೆ ತಮ್ಮದೇ ಸರ್ಕಾರವಿದೆ ತನಿಖೆ ಮಾಡಿಸುವಿರಾ?

ನಮ್ಮ ಜನಪ್ರಿಯ ಶಾಸಕರಾದ ಡಿಸಿ ಗೌರಿಶಂಕರ್ ಅವರು ಎರಡು ವರ್ಷದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು, ವೈಯಕ್ತಿಕವಾಗಿ, ಕೋಟ್ಯಾಂತರ ರೂಗಳನ್ನು ತನ್ನ ಕ್ಷೇತ್ರದ ಮತದಾರ ಬಂಧುಗಳಿಗೆ ಮತ್ತು ದೇವಸ್ಥಾನ ಜೀರ್ಣೋದ್ಧಾರ ಗಳಿಗೆ, ಲಾಕ್ಡೌನ್ ಸಂದರ್ಭದಲ್ಲಿ ತನ್ನ ಕ್ಷೇತ್ರದ ಸುಮಾರು 65.000 ಸಾವಿರ ಕುಟುಂಬಗಳಿಗೆ ಎರಡು ಬಾರಿ ಆಹಾರ ಸಾಮಗ್ರಿ ಒದಗಿಸಿರುವುದು ಇಡೀ ರಾಜ್ಯ ನೋಡಿದೆ.

ಇಂತಹ ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ.. ನಮ್ಮ ಶಾಸಕರ ವಿರುದ್ಧವಾಗಿ ಮಾಜಿ ಶಾಸಕರಾದ ನೀವು ಆಧಾರರಹಿತವಾದ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡುತಶಾಶ್ವತವಾಗಿ, ಅಧಿಕಾರದ ದುರಾಸೆಯಿಂದ ಕ್ಷೇತ್ರದಲ್ಲಿ ಅಶಾಂತಿ ಸೃಷ್ಟಿಸುತ್ತಿರುವ ತಮ್ಮನ್ನ. ಈ ಕ್ಷೇತ್ರದ ಮತದಾರರು ಗಮನಿಸುತ್ತಿದ್ದಾರೆ..

ಶಾಶ್ವತವಾಗಿ, ಯಾವಾಗಲೂ ನೀವು
ಮತದಾರರಿಂದ ದೂರವಿದ್ದೀರಿ.
ತಮ್ಮ ಬೇಳೆ ಬೇಯಿಸಿಕೊಳ್ಳಲು, ಬಡವ ಪರಿಶಿಷ್ಟ ಜಾತಿಗೆ ಸೇರಿದ,ಕೆಲ ಸಮುದಾಯಗಳ. ತಮ್ಮ ಬಂಟರನ್ನು ಎತ್ತಿಕಟ್ಟಿ
ಕ್ಷೇತ್ರದ ಶಾಂತಿಯನ್ನು ಹಾಳು ಮಾಡುತ್ತಿರುವುದನ್ನು ಎಲ್ಲರೂ ಗಮನಿಸುತ್ತಿದ್ದಾರೆ.

ತಾವು ಇಲ್ಲಿಗೆ ನಿಮ್ಮ ಹುಚ್ಚಾಟವನ್ನು . ಬಿಟ್ಟುಬಿಡಿ. ಎಸ್ಸಿ ಸಮುದಾಯದವರನ್ನು. ಬದುಕಲು ಬಿಡಿ. ಇಲ್ಲದಿದ್ದರೆ.. ಮುಂದಿನ ದಿನಗಳಲ್ಲಿ ನಿಮ್ಮ ವಿರುದ್ಧ ಹೋರಾಟ ಮಾಡಬೇಕಾದೀತು.. ಎಚ್ಚರ.


ಬೆಳಗುಂಬ ವೆಂಕಟೇಶ್

ತುಮಕೂರು ತಾಲ್ಲೂಕು ಅಧ್ಯಕ್ಷರು, ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗ.

Comment here