ತುಮಕೂರ್ ಲೈವ್

ಮಾನವ ಹಕ್ಕು ಮಹತ್ವ ಅರಿಯಿರಿ

Public story.in


ತುಮಕೂರು: ಸಂವಿಧಾನದ ಕರ್ತವ್ಯ ಮತ್ತು ಹಕ್ಕುಗಳನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸಬೇಕಾದದು ಯುವಜನರ ಜವಾಬ್ದಾರಿ ಎಂದು ಜೆ.ಎಂ.ಎಫ್.ಸಿ. ನ್ಯಾಯಾಲಯದ ೩ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್.ಚಂದನ್ ಹೇಳಿದರು.

ಮಂಗಳವಾರ ಸುಫಿಯ ಕಾನೂನು ಕಾಲೇಜಿನಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಾನವ ಹಕ್ಕುಗಳ ಮಹತ್ವ ಅರಿಯಬೇಕು ಹಾಗೂ ಅದಕ್ಕೆ ಧಕ್ಕೆಯಾದಾಗ ನ್ಯಾಯ ಪಡೆಯುವ ವಿಧಾನಗಳನ್ನು ತಿಳಿಯಬೇಕು, ಸಾಮಾನ್ಯ ಜನರಿಗೆ ತಿಳಿಸಿಕೊಡಬೇಕು ಎಂದು ತಿಳಿಸಿದರು.

ಮಾನವ ಹಕ್ಕುಗಳ ದಿನದ ಆಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ಜಾಗೃತಿ ಮೂಡಿಸುವ ಕೆಲಸ ನಿತ್ಯವೂ ಆಗಬೇಕು ಎಂದು ಅವರು ಹೇಳಿದರು.

ಜೆ.ಎಂ.ಎಫ್.ಸಿ. ನ್ಯಾಯಾಲಯದ ೫ ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕೆ.ಸಿ.ತಾರಾ ಮಾತನಾಡಿ, ವಿದ್ಯಾರ್ಥಿಗಳೂ ಕಾನೂನು ಪರೀಕ್ಷಾ ದೃಷ್ಟಿಯಿಂದ ಮಾತ್ರ ಓದದೇ. ಜ್ಞಾನಕ್ಕಾಗಿ ಅಧ್ಯಯನ ಮಾಡಲು ಸಲಹೆ ನೀಡಿದರು.

ಎಚ್.ಎಂ.ಎಸ್.ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಷಫೀ ಅಹಮದ್ ಮಾತನಾಡಿ, ಕಾನೂನು ತಿಳಿಯಬೇಕು. ಇತರರಿಗೆ ತಿಳಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಎಸ್.ರಮೇಶ ಮಾತನಾಡಿ, ಇತಿಹಾಸ ಮರೆತು, ಭವಿಷ್ಯ ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಹಿಂದಿನದನ್ನು ತಿಳಿದು,ಮುಂದಿನ ಗುರಿಯ ಕಡೆಎಚ್ಚರಿಕೆಯ ಹೆಜ್ಜೆ ಇಡಬಹುದು ಎಂದರು.
ನಿರ್ಭಯಾ, ದಿಶಾ ಪ್ರಕರಣ ಗಮನಿಸಿದಾಗ ಮನುಷ್ಯ ಸಮಾಜ ಇದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಮಹಿಳೆಯರ ಮಾನವ ಹಕ್ಕು ದಮನವಾಗುತ್ತಿದೆ. ಅವರಿಗೆ ಆಸ್ತಿಯ ಹಕ್ಕು, ರಾಜಕೀಯ ಹಕ್ಕು ಕೊಡಲು ಮೀನಾಮೇಷ ಎಣಿಸುತ್ತಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಾಧ್ಯಾಪಕ ಜೆ.ಸಿ.ರಂಗಧಾಮಯ್ಯ ಮಾನವ ಹಕ್ಕುಗಳು ಮಹತ್ವ ತಿಳಿಸಿದರು.

Comment here