ತುಮಕೂರು ಲೈವ್

ಮುಂದಿನ ತಿಂಗಳು ಶಾಲಾ‌‌-ಕಾಲೇಜು ಇಲ್ಲ: ಸಚಿವ

ಬೆಂಗಳೂರು : ಮುಂದಿನ ತಿಂಗಳು ಸೆಪ್ಟೆಂಬರ್ ನಲ್ಲಿ ಶಾಲೆಗಳು ಪ್ರಾರಂಭವಾಗುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಶಾಲೆ‌ ಆರಂಭಿಸಲಾಗುತ್ತದೆ ಎಂಬ ಪ್ರಚಾರ ಸುಳ್ಳು. ಕೊರೊನಾಬಕಾರಣ ಶಾಲೆಗಳನ್ನು ಪ್ರಾರಂಭಿಸಲ್ಲ ಎಂದು ತಿಳಿಸಿದ್ದಾರೆ.

ಕೊರೊನಾ ಭೀತಿಯ ನಡುವೆ ಶಾಲೆಗಳನ್ನು ಪ್ರಾರಂಭಿಸುವುದು ಸಲ್ಲದು. ಮನೆಯಿಂದಲೇ‌‌ ಮಕ್ಕಳಿಗೆ ಕಲಿಸುವ ಬಗ್ಗೆ ಈಗಾಗಲೇ ವಿದ್ಯಾಗಮನ ಯೋಜನೆಯನ್ನು ತರಲಾಗಿದೆ‌ ಎಂದರು.

ಎಲ್ಲ ಮಕ್ಕಳ ಮನೆಗೆ ಈಗಾಗಲೇ ಪಠ್ಯ ಪುಸ್ತಕ ತಲುಪಿಸಿದ್ದೇವೆ. . ಶಿಕ್ಷಣ ಇಲಾಖೆಯಿಂದ ಎರಡು ಚಾನಲ್‌ಗಳನ್ನು ಪ್ರಾರಂಭಿಸಲಾಗುತ್ತಿದೆ ಎಂದಿದ್ದಾರೆ.

Comment here