ತುಮಕೂರು ಲೈವ್

ರಮೇಶ್ ಬಾಬು ಜೆಡಿಎಸ್ ಗೆ ಗುಡ್ಬಾಯ್

ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರು ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಜೆಡಿಎಸ್ ನಿಂದ ಟಿಕೆಟ್ ಕೈ ತಪ್ಪಿದ ಕಾರಣ ಬೇಸರಗೊಂಡು  ಪಕ್ಷಕ್ಕೆ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಹಲವುದಿನಗಳಿಂದ ಪಕ್ಷದ ಎಲ್ಲಾ ಚಟುವಟಿಕೆಗಳಿಂದ ದೂರ ಉಳಿದಿದ್ದ ರಮೇಶ್ ಬಾಬು ಶನಿವಾರ ಅಧಿಕೃತವಾಗಿ ಜೆಡಿಎಸ್ ವರಿಷ್ಟ ಎಷ್.ಡಿ.ದೇವೇಗೌಡ ಅವರಿಗೆ ರಾಜಿನಾಮೆ ನೀಡುವ ಮೂಲಕ ಪಕ್ಷ ತೊರೆದಿದ್ದಾರೆ. ತಮ್ಮ ಮುಂದಿನ ಹಾದಿ ಯಾವುದೆಂದು ಇನ್ನು ನಿರ್ಧರಿಸಿಲ್ಲ.


ಕೆಲವು ದಿನಗಳ ಹಿಂದೆ ಜೆಡಿಎಸ್ ಪಕ್ಷದ ಮತ್ತೊಬ್ಬ ಪರಿಷತ್ ಸದಸ್ಯ ಪುಟ್ಟಣ್ಣ ಜೆಡಿಎಸ್ ಪಕ್ಷದ ವಿರುದ್ಧ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದರು. ನಂತರ ಬಿಜೆಪಿ ಪಕ್ಷ ಸೇರಿದ್ದರು.

ಕಳೆದ ಎರಡು ಮೂರು ದಶಕಗಳಿಂದ ರಮೇಶ್ ಬಾಬು ಜೆಡಿಎಸ್ ಪಕ್ಷದ ವಕ್ತಾರರಾಗಿ ಟಿವಿ ಚಾನೆಲ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡ ಅವರ ಜೊತೆಗೆ ಹೆಚ್ಚಾಗಿ ಒಡನಾಟ ಹೊಂದಿದ್ದರು.

ಆದರೆ ಇತ್ತೀಚಿನ ದಿನಗಳಲ್ಲಿ ಸುದ್ದಿವಾಹಿನಿಗಳು ಮತ್ತು ದೇವೇಗೌಡರಿಂದ ದೂರ ಉಳಿದಿದ್ದ ರಮೇಶ್ ಬಾಬು ಅವರು ಮುಂದಿನ ದಿನಗಳಲ್ಲಿ ಪದವೀಧರರ ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Comment here