ಸಾಹಿತ್ಯ ಸಂವಾದ

ಲಸಿಕೆ ರೂಪಾಂತರ!

ತುರುವೇಕೆರೆ ಪ್ರಸಾದ್


*ಮೊದಲನೇ ಡೋಸ್*
‘ ಅಯ್ಯೋ..ಅಮ್ಮಾ..’
‘ತುಂಬಾ ನೋವಾಯ್ತಾ ಸರ್?’
‘ ಹೂ ಸಿಸ್ಟರ್, ಸ್ವಲ್ಪ ನೋವಾಯ್ತು’
‘ ಸರಿ ಹೋಗುತ್ತೆ ಸರ್, ಆರಾಮಾಗಿ ಉಸಿರಾಡಿ, ಆಚೆ ಲಾಂಜಲ್ಲಿ ಫ್ಯಾನ್ ಕೆಳಗೆ ಅರ್ಧ ಗಂಟೆ ರೆಸ್ಟ್ ಮಾಡಿ. ಏನಾದ್ರೂ ಸಮಸ್ಯೆ ಇದ್ರೆ ನನ್ನನ್ನ ಕರೀರಿ’
‘ಆಗಲಿ ಸಿಸ್ಟರ್, ಜ್ವರ ಬರುತ್ತಾ?’
‘ಸ್ವಲ್ಪ ಬರಬಹುದು, ಅಕಸ್ಮಾತ್ ಜ್ವರ ಬಂದ್ರೆ ಈ ಮಾತ್ರೆ ತಗೊಳಿ.ಹುಶಾರಾಗಿರಿ, ಟೇಕ್ ಕೇರ್, ಮತ್ತೆ 42 ದಿನ ಬಿಟ್ಟು ಬನ್ನಿ’
‘ಥ್ಯಾಂಕ್ಯೂ ಸಿಸ್ಟರ್’
*ಎರಡನೇ ಡೋಸ್*
‘ಅಯ್ಯೋ..ಅಮ್ಮಾ..’
‘ಯಾಕ್ರೀ ಹಾಗ್ ಬಡ್ಕೊತೀರಿ? ನಾನೇನ್ ನಿಮಗೆ ಕತ್ತಿ ತಗೊಂಡು ಚುಚ್ಚಿದೀನಾ?ಹೀಗ್ ಬಡ್ಕೊಂಡ್ರೆ ನೋಡಿದೋರು ಏನ್ ಅಂದ್ಕೊಳಲ್ಲ?’
‘ಸಾರಿ ಸಿಸ್ಟರ್, ಜ್ವರ ಏನಾದ್ರೂ ಬರುತ್ತಾ?’
‘ಭೂಮಿನೇ ಜ್ವರ ಬಂದು ಕಾದು ಹೋಗಿದೆ. ನಿಮಗೆ ಒಂದ್ ಅರ್ಧ ಡಿಗ್ರಿ ಜ್ವರ ಬಂದ್ರೆ ಪ್ರಪಂಚ ಏನ್ ಮುಳುಗಿ ಹೋಗಲ್ಲ, ಹೋಗ್ರೀ..’
‘ ಮಾತ್ರೆ ಏನಾದ್ರೂ ಕೊಡ್ತೀರಾ ಸಿಸ್ಟರ್?’
‘ಔಟ್ ಆಫ್ ಸ್ಟಾಕ್, ಮನೇಲಿ ಯಾವ್ದಾದ್ರೂ ಹಳೇ ಮಾತ್ರೆ ಇದ್ರೆ ನುಂಗ್‍ಕೊಳಿ. ಇಲ್ಲ ಅಂದ್ರೆ ಯಾವ್ದಾರಾ ಕಷಾಯ ಮಾಡ್ಕೊಂಡು ಗೊಟಾಯ್ಸಿ’
‘ ಸರಿ ಸಿಸ್ಟರ್, ಈಗ ಎಲ್ ಕೂತ್ಕೊಳ್ಳಿ?’
‘ ನನ್ ತಲೆ ಮೇಲೇ ಕೂತ್ಕೊಳಿ. ಅಲ್ರೀ, ನೀವೇ ನೋಡ್ತಿದೀರಿ, ನಿಂತ್ಕೊಳಕ್ಕೇ ಜಾಗ ಇಲ್ಲ, ನಿಮ್ಗೆ ಸಿಂಹಾಸನ ಹಾಕ್ ಕೂರ್ಸಿ ಉಪಚರಿಸ್ಬೇಕಾ?’
‘ ಹೋಗ್ಲಿ ಬಿಡಿ, ಎಲ್ಲೋ ಅಡ್ಜೆಸ್ಟ್ ಮಾಡ್ಕೊಂಡು ಸಂದೀಲಿ ಕೂತ್ಕೊತೀನಿ. ಏನಾದ್ರೂ ಸಮಸ್ಯೆ ಇದ್ರೆ ಕರೀಲಾ ಸಿಸ್ಟರ್?’
‘ ಇಲ್ಲಿ ಎರಡು ಕೈಲಿ ದಳುದ್ರೂ (ಚುಚ್ಚುದ್ರೂ) ಮುಗೀತೀಲ್ಲ, ಇನ್ನು ನೀವು ಕರೆದ ತಕ್ಷಣ ಓಡ್ ಬರೋಕೆ ನಾನೇನ್ ಕಡ್ಲೆಕಾಯ್ ಬೀಜ ತಿಂತಾ ಕೂತಿದೀನಾ? ಕರೀಬೇಕು ಅನ್ಸುದ್ರೆ ನಿಮ್ ಹೆಂಡ್ತಿನೇ ಕರ್ಕೊಳಿ’
‘ಅಯ್ಯಯ್ಯೋ ಬೇಡ ಬಿಡಿ, ಈಗಿರೋ ವ್ಯಾಕ್ಸಿನೇಶನ್ ನೋವೇ ಸಾಕು. ಮತ್ತೆ ಎಲ್ಲಾ ಸೈಡ್ ಎಫೆಕ್ಟ್ಸ್ ಒಟ್ಟಿಗೆ ಬರೋದು ಬೇಡ.

Comment here