ತುಮಕೂರು ಲೈವ್

ಗೂಂಡಾ ಕಾಯ್ದೆಯಡಿ ಶಾಸಕ‌ ಜಮೀರ್ ಬಂಧ‌ನ: ಸಿಎಂಗೆ ಸುರೇಶಗೌಡ ಒತ್ತಾಯ

https://youtu.be/2NjOI1K_jI0

ತುಮಕೂರು: ಶಾಸಕ ಜಮೀರ್ ಅಹಮ್ಮದ್ ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ, ಬಿಜೆಪಿಯ ಬಿ.ಸುರೇಶ್ ಗೌಡ ಒತ್ತಾಯಿಸಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ಕಾರ್ಯದರ್ಶಿಯೂ ಆಗಿರುವ ಸುರೇಶ್ ಗೌಡ ಅವರು ಜಮೀರ್ ಅಹಮ್ಮದ್ ವಿರುದ್ಧ ಶುಕ್ರವಾರ ಕಿಡಿಕಾರಿದರು.

ಗಂಗೋನಹಳ್ಳಿಯಲ್ಲಿ ಕ್ಷೇತ್ರದ ಜನತೆಗೆ ತಮ್ಮ ಸ್ವತಃ ಹಣದಿಂದ ಆಹಾರದ ಕಿಟ್, ಉಚಿತ ಮಾಸ್ಕ್ ತರಕಾರಿ ಹಂಚುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಮೀರ್ ಅಹಮ್ಮದ್ ಅವರು ಪಾದರಾಯನಪುರದಲ್ಲಿ ಕೀಳು ರಾಜಕಾರಣವನ್ನು ಮಾಡುತ್ತಿದ್ದಾರೆ. ಒಂದು ಧರ್ಮವನ್ನು ಎತ್ತಿ ಕಟ್ಟಿ ಕೀಳು ರಾಜಕಾರಣದಲ್ಲಿ ತೊಡಗಿದ್ದಾರೆ.ಅವರ ಮುಖವಾಡ ಈಗ ಒಂದೊಂದೆ ಈಚೆಗೆ ಬರುತ್ತಿವೆ. ಇಂಥ ರಾಜಕಾರಣಿಗಳು ರಾಜ್ಯಕ್ಕೆ ಬೇಕಾ ಎಂದವರು ಹೇಳಿದರು.

ನಾನು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಕೂಡಲೇ ಜಮೀರ್ ಅಹಮದ್ ವಿರುದ್ಧ ಗೂಂಡಾ ಕಾಯ್ದೆಯನ್ನು ಹಾಕಿ, ಬಂಧಿಸಬೇಕು.ಅವರಿಗೆ ಕಠಿಣ ಶಿಕ್ಷೆಯನ್ನು ಕೊಡಬೇಕು ಎಂದು ಆಗ್ರಹಿಸಿದರು.

ನಾನೊಬ್ಬ ಮಾಜಿ ಶಾಸಕನಾಗಿ ಹೇಳುತ್ತಿದ್ದೇನೆ. ನಾನು ಸಹ ರಾಜಕಾರಣ ಮಾಡಿದ್ದೇನೆ. ಆದರೆ ಯಾವತ್ತಿಗೂ ಕೂಡ ಮತದ ಆಸೆಗಾಗಿ ಇಂಥ ಕೀಳು ರಾಜಕಾರಣ ಮಾಡಲ್ಲ. ಜಾತಿ ಧರ್ಮಗಳನ್ನು ಎತ್ತಿಕಟ್ಟಿ ರಾಜಕಾರಣ ಯಾರೂ ಕೂಡ ಮಾಡಬಾರದು ಎಂದರು.

ಹಿಂದೂ ಧರ್ಮವನ್ನು ವಿರೋಧಿಸಿ ದರ್ಮ ರಾಜಕಾರಣ ಮಾಡುವ ಶಾಸಕರು ನಮಗೆ ಬೇಕೇ ಎಂದು ಅವರು ಪ್ರಶ್ನಿಸಿದ ಅವರು ಜಮೀರ್ ಅವರಿಗೆ ಕಠಿಣ ಶಿಕ್ಷೆ ಕೊಡಲೇಬೇಕು ಎಂದು ಪುನರುಚ್ಚಿಸಿದರು.

Comment here